ತುಮಕೂರು: ನಗರದ ಬಾಳನಕಟ್ಟೆ ಆವರಣದಲ್ಲಿರುವ ಎಪಿಎಂಸಿ ಹಳೇ ಮಾರ್ಕೆಟ್ ನಲ್ಲಿರುವ ಗಣೇಶನ ದೇವಸ್ಥಾನವನ್ನು ಪುನಃ ಕಟ್ಟುವೆವು,ಅದು ಹಿಂದೂಗಳ ಅವಿಭಾಜ್ಯ ಅಂಗ,ಆ ಜಾಗದ ಬಗ್ಗೆ ಕಾನೂನಾತ್ಮಕ ಹೋರಾಟವನ್ನು ಮಾಡುತ್ತಿದ್ದೇವೆ,ಕಾನೂನು ವ್ಯಾಪ್ತಿಯಲ್ಲಿಯೇ ಅದನ್ನು ನಮ್ಮ ಸುಪರ್ದಿಗೆ ಪಡೆದು ದೇವಸ್ಥಾನವನ್ನು ಕಟ್ಟುತ್ತೇವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಯಾರೋ ಆಸಾಮಿಗಳು ಪ್ರಮೋದ್ ಮುತಾಲಿಕ್ ರವರಿಗೆ ತಪ್ಪು ಮಾಹಿತಿ ನೀಡಿ ಅವರು ರಾಜಕಾರಣ ಮಾಡಿ ನನ್ನನ್ನು ತೇಜೋವಧೆ ಮಾಡಲು ಪತ್ರಿಕಾಗೋಷ್ಠಿ ನಡೆಸಿದ್ದರು ಈ ಬಗ್ಗೆ ಮುತಾಲಿಕ್ ರವರಿಗೆ ನಮ್ಮ ಪಕ್ಷದ ಕಾರ್ಯಕರ್ತರು,ಮುಖಂಡರು ಅವರಿಗೆ ನಾವು ತೆಗೆದುಕೊಂಡ ಕ್ರಮ,ಕಾನೂನು ಹೋರಾಟ ಎಲ್ಲವನ್ನೂ ತಿಳಿಸಿದಾಗ ಅವರಿಗೆ ನಿಜವಾದ ಅರಿವು ಬಂದಿದೆ ಈ ಬಗ್ಗೆ ಸ್ಪಷ್ಟೀಕರಣ ಸಹ ನೀಡಿದ್ದಾರೆ ಎಂದರು.
ನಮ್ಮ ಬಿಜೆಪಿ ಪಕ್ಷದ ಕೆಲವರು 2008 ಮತ್ತು 2023 ರ ಚುನಾವಣೆಯಲ್ಲಿ ನನ್ನ ವಿರುದ್ಧ ಇಲ್ಲ ಸಲ್ಲದ ಪಿತೂರಿ ಮಾಡಿದರು ಆದರೆ ನನ್ನದು ರಾಜಮಾರ್ಗ ಅದರಲ್ಲಿ ನಡೆದು 2 ಬಾರಿ ಶಾಸಕನಾದೆ,ಶಾಸಕ ಸ್ಥಾನ ಶಾಶ್ವತ ಅಲ್ಲ ಆದರೆ ಸನ್ಮಾರ್ಗದಲ್ಲಿ ನಡೆದು ಹೋರಾಟ ಮಾಡಿ ಶಾಸಕನಾಗಬೇಕು ಆದರೆ ನನ್ನನ್ನು ತೇಜೋವಧೆ ಮಾಡಿದರೆ ಅದನ್ನು ನಾನು ಸಹಿಸುವುದಿಲ್ಲ, ನಾನು ಸೈಲೆಂಟ್,ನನ್ನ ಕೆಲಸ ನಾನು ಮಾಡಿಕೊಂಡು ಜನಮನ್ನಣೆ ಪಡೆದು ಸಾಗುತ್ತಿದ್ದೇನೆ ಆದರೆ ಯಾರೋ ಎಂದೂ ಸಹ ನಮ್ಮ ಬಿಜೆಪಿ ಪಕ್ಷದ ಕರಪತ್ರ ಆಗಲಿ,ಬ್ಯಾನರ್ ಆಗಲಿ ಕಟ್ಟದವನು ನನ್ನನ್ನು ಟೀಕಿಸುವುದು ಸರಿಯಲ್ಲ,ಇದರ ಹಿಂದೆ ಯಾರು ಯಾರು ಇದ್ದಾರೆ ಎಂದು ಗೊತ್ತಿದೆ.

ಪತ್ರಕಾಗೋಷ್ಠಿಯಲ್ಲಿ ಕುಳಿತಿದ್ದ ವ್ಯಕ್ತಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದವ,ನಮ್ಮ ಪಕ್ಷದ ಪದಾಧಿಕಾರಿಗಳೇ ನನ್ನ ವಿರುದ್ಧ ಪಿತೂರಿ ಮಾಡಿ ನನ್ನನ್ನು ಸೋಲಿಸಲು ಸೆಣಸಾಡಿದರು ಆದರೆ ಜನ ನನ್ನನ್ನು ಮತ ನೀಡಿ ಗೆಲ್ಲಿಸಿದರು ಎಂದು ಶಾಸಕರು ತಮ್ಮ ಬೇಸರವನ್ನು ಹೊರಹಾಕಿದರು. ಯಾರೂ ಏನೇ ಹೇಳಿದರೂ ತುಮಕೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಹಲವು ಸಮಸ್ಯೆಗಳ ಬಗ್ಗೆ ಮೊನ್ನೆ ಸದನದಲ್ಲಿ ಮಾತಾಡಿದ್ದೇನೆ. ಜನಕಲ್ಯಾಣವೇ ನನ್ನ ಕನಸು ಎಂದರು.
- ಕೆ.ಬಿ. ಚಂದ್ರಚೂಡ