ಕೆ.ಆರ್.ಪೇಟೆ-ನಮ್ಮ-ಸಂಸ್ಕೃತಿ-ಪರಂಪರೆಯ-ಪ್ರತೀಕವಾಗಿರುವ- ಪೌರಾಣಿಕ-ನಾಟಕಗಳು-ಜಾತ್ರೆ-ರಥೋತ್ಸವಗಳನ್ನು-ಸಂರಕ್ಷಣೆ- ಮಾಡುವ-ಅಗತ್ಯವಿದೆ-ಮಾಜ ಸೇವಕ-ಆರ್.ಟಿ.ಓ.ಮಲ್ಲಿಕಾರ್ಜುನ್

ಕೆ.ಆರ್.ಪೇಟೆ: ನಮ್ಮ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿರುವ ಪೌರಾಣಿಕ ನಾಟಕಗಳು, ಜಾತ್ರೆ-ರಥೋತ್ಸವಗಳನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ತಾಲ್ಲೂಕಿನ ರಂಗಭೂಮಿ ಕಲಾವಿದರು. ನಾಟಕವನ್ನು ಅಭ್ಯಾಸ ಮಾಡಿ ಪ್ರದರ್ಶನ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ರಾಜ್ಯ ಆರ್.ಟಿ.ಓ.ನೌಕರರ ಸಂಘದ ಅಧ್ಯಕ್ಷರು ಹಾಗೂ ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಗ್ರಾಮದಲ್ಲಿ ಶ್ರೀ ಮಂಚಮ್ಮದೇವಿ ಕೃಪಾ ಪೋಷಿತ ನಾಟಕ ಮಂಡಳಿಯವರು ಮಂಚಮ್ಮದೇವಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.

ರಾಮಾಯಣ, ಮಹಾಭಾರತ(ಕುರುಕ್ಷೇತ್ರ) ಇನ್ನಿತರ ಪೌರಾಣಿಕ ನಾಟಕಗಳಲ್ಲಿ ಬರುವ ಧರ್ಮರಾಯ, ರಾಮ, ಲಕ್ಷö್ಮಣ, ಶ್ರೀ ಕೃಷ್ಣ, ಪಾತ್ರದ ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣಕ್ಕೆ ಅವಕಾಶವಾಗುತ್ತದೆ. ಜೊತೆಗೆ ನಾಟಕದಲ್ಲಿ ಬರುವ ಧ್ವೇಷ, ಅಸೂಸೆ, ಮಧ ಮತ್ಸರ ತುಂಬಿದ ಪಾತ್ರದ ಅಂಶಗಳನ್ನು ದೂರ ಮಾಡಿ ಒಳ್ಳೆಯ ಗುಣಗಳನ್ನು ಮಾತ್ರ ಅಳವಡಿಸಿಕೊಳ್ಳಬೇಕು. ದ್ವೇಷ, ಅಸೂಸೆ, ಮದ, ಮತ್ಸರ ಹಾಗೂ ಅಸೂಯೆಯಿಂದ ಎಂದಿಗೂ ಒಳ್ಳೆಯದಾಗುವುದಿಲ್ಲ ಎಂಬ ಅಂಶವನ್ನು ಮನಗಾಣಬೇಕು. ಒಂದು ಗ್ರಾಮದಲ್ಲಿ ವಾಸಿಸುವ ನಾವು ಸಂಘ ಜೀವಿಗಳಾಗಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಹಬಾಳ್ವೆ ನಡೆಸಬೇಕು ಎಂದು ಮಲ್ಲಿಕಾರ್ಜುನ್ ಸಲಹೆ ನೀಡಿದರು.

ಶಾಸಕ ಹೆಚ್.ಟಿ.ಮಂಜು ಅವರ ಸಹೋದರ ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಟಿ.ಲೋಕೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ ನಾಟಕಗಳು ಗ್ರಾಮೀಣ ಭಾಗದ ಜನರಿಗೆ ಮನರಂಜನೆ ಕೊಡುವ ಉತ್ತಮ ಮಾಧ್ಯಮವಾಗಿವೆ. ಇವುಗಳನ್ನು ಉಳಿಸಿಕೊಳ್ಳಬೇಕಾದರೆ ಸಾರ್ವಜನಿಕರು ನಾಟಕಗಳನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಿ ಕಲೆಯನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸಾಕಮ್ಮ ಸಿದ್ದರಾಜು, ಉಪಾಧ್ಯಕ್ಷೆ ವರಲಕ್ಷ್ಮಿ ಪ್ರದೀಪ್, ಗ್ರಾ.ಪಂ.ಸದಸ್ಯರಾದ ಆರ್.ಮಂಜೇಗೌಡ, ಮಾಕವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಸಿ.ರವಿಕುಮಾರ್, ಬಂಡಿಹೊಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾದೇವೇಗೌಡ, ಎಂ.ಆರ್.ಮಂಜೇಗೌಡ, ಅರುಣ್, ರಾಮೇಗೌಡ, ಗ್ರಾ.ಪಂ.ಮಾಜಿ ಸದಸ್ಯರಾದ ಸುಕಂದರಾಜು, ನಾಗೇಶ್, ರಂಗಸ್ವಾಮಿ, ಪ್ರದೀಪ್, ಶಿಕ್ಷಕ ಮಂಜುವೀರಭದ್ರಶೆಟ್ಟಿ, ಕೆ.ಎಸ್.ಆರ್.ಟಿ.ಸಿ ಶಿವಣ್ಣ ಸೇರಿದಂತೆ ಅನೇಕ ಗಣ್ಯರು ಹಾಗೂ ಮಂಚಮ್ಮದೇವಿ ಕೃಪಾಪೋಷಿತ ನಾಟಕ ಮಂಡಳಿ ನಾಟಕ ಕಲಾವಿದರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?