ಚಿಕ್ಕಮಗಳೂರು– ದಲಿತ ಕುಟುಂಬಗಳಿಗೆ ಜಮೀನು ಮಂಜೂರಾತಿ ಆಗ್ರಹಿಸಿ ದಸಂ ಸ ನೇತೃತ್ವದಲ್ಲಿ ಗ್ರಾಮಸ್ಥರು ಶಿರಸ್ತೇದಾರ್ ಹೇಮಂತ್ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಆಲ್ದೂರು ಹೋಬಳಿ ಸತ್ತಿ ಹಳ್ಳಿ ಗ್ರಾಮದ 21 ದಲಿತ ಕುಟುಂಬಗಳಿಗೆ ಸರ್ವೆ ನಂ.162 ರಲ್ಲಿ 1984-85 ರಲ್ಲಿ ತಲಾ ನಾಲ್ಕು ಎಕರೆ ಜ ಮೀನು ಮಂಜೂರಾಗಿ ಜಿಲ್ಲಾಧಿಕಾರಿಗಳಿಂದ ಮುಂದಿನ ಕಡತಕ್ಕಾಗಿ ತಾಲ್ಲೂಕು ಕಚೇರಿಗೆ ಆದೇಶ ಮಾಡ ಲಾಗಿತ್ತು ಎಂದರು.
ಪ್ರಸ್ತುತ ತಾಲ್ಲೂಕು ಕಚೇರಿಯಿಂದ ಯಾವುದೇ ಕಡತ ತಯಾರಾಗದೇ ಇದುವರೆಗೂ ಅಲೆದಾಡಿಸುವ ಮೂಲಕ ದಲಿತ ಕುಟುಂಬಗಳಿಗೆ ಅನ್ಯಾಯ ಮಾಡುತ್ತಿದೆ. ಹೀಗಾಗಿ ತುರ್ತಾಗಿ ಆದೇಶ ಹೊರಡಿಸಿ ಸಂಬ ಂಧಪಟ್ಟ ದಲಿತರಿಗೆ ಜಮೀನು ಮಂಜೂರು ಮಾಡಿಸಿ ಸಾಗುವಳಿ ಚೀಟಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜಯ್ಯ ಮತ್ತು ಸತ್ತಿಹಳ್ಳಿ ಗ್ರಾಮಸ್ಥರಿದ್ದರು.
- ಸುರೇಶ್ ಎನ್.