ಆಲೂರು-ಎರಡೂವರೆ ವರ್ಷಗಳ ನಂತರ ನಡೆದ ಪ.ಪಂ ಸಾಮಾನ್ಯ ಸಭೆ-ಕೋಳಿ ಅಂಗಡಿಗಳಿಗೆ ನೀರು ಕಟ್-ವಾಹನಗಳ ನಿಲುಗಡೆಗೆ ಜಾಗ ಗುರುತು-ಹಲವು ಸಮಸ್ಯೆಗಳ ಬಗ್ಗೆ ಗಮನ

ಆಲೂರು:ಪಟ್ಟಣದ ವಿವಾದಿತ ನಿವೇಶನಗಳಲ್ಲಿರುವ ಕೋಳಿ ಅಂಗಡಿಗಳಿಗೆ ಕೊಡಮಾಡಲಾಗಿರುವ ಮೂಲಭೂತ ಸೌಕರ್ಯಗಳನ್ನು ತಕ್ಷಣಕ್ಕೆ ನಿಲ್ಲಿಸಬೇಕೆಂದು ಪ.ಪಂ ಸದಸ್ಯರುಗಳು ಆಗ್ರಹಿಸಿದರು.

ಒಂದೂವರೆ ವರ್ಷದ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು,ಕೋಳಿ ಅಂಗಡಿಗಳಿರುವ ನಿವೇಶನದ ವಿವಾದ ನ್ಯಾಯಾಲಯದಲ್ಲಿರುವುದರಿಂದ,ಮಾಲಿಕರು ಪಟ್ಟಣ ಪಂಚಾಯಿತಿಗೆ ಯಾವುದೆ ಕಂದಾಯ ಪಾವತಿ ಮಾಡುತ್ತಿಲ್ಲ.ಇದರಿಂದ ಪಂಚಾಯಿತಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ.ತಕ್ಷಣ ನೀರು ಸರಬರಾಜು ನಿಲ್ಲಿಸಬೇಕು ವಿದ್ಯುತ್ ಸರಬರಾಜು ನಿಲ್ಲಿಸಲು ಇಲಾಖೆಗೆ ಪತ್ರ ಬರೆಯುವಂತೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ತಾಹಿರಾ ಬೇಗಂ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಗೆ ಸೂಚನೆ ನೀಡಿದರು.

ಸಭೆ ಮುಗಿದ ನಂತರ ಕೋಳಿ ಅಂಗಡಿಗಳಿಗೆ ನೀಡಿದ್ದ ನೀರು ಸರಬರಾಜನ್ನು ನಿಲ್ಲಿಸಲಾಯಿತು.

ಪಟ್ಟಣದಲ್ಲಿ ಪ್ರತಿದಿನ ಬಸ್ಸುಗಳು,ಸರಕು ಸಾಗಣೆ ವಾಹನಗಳು,ಖಾಸಗಿ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಓಡಾಡುತ್ತಿವೆ.ತಾಲ್ಲೂಕು ಕೇಂದ್ರವಾದರೂ ವಾಹನಗಳ ನಿಲುಗಡೆಗೆ ಸೂಕ್ತ ಜಾಗವನ್ನು ಗುರುತು ಮಾಡಿಲ್ಲ. ಮುಖ್ಯ ರಸ್ತೆಯಂಚಿನಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಸೂಕ್ತ ಜಾಗವನ್ನು ಗುರುತಿಸಿ ಸಂಚಾರ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ತಿಳಿಸಬೇಕು.ಪಾದಚಾರಿ ರಸ್ತೆಯಲ್ಲಿರುವ ಅಂಗಡಿಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಅಧ್ಯಕ್ಷೆ ತಾಹಿರಾಬೇಗಂ ಮಾತನಾಡಿ ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡಬೇಕು.ರಸ್ತೆಯಂಚಿನಲ್ಲಿರುವ ಗಿಡಗಳನ್ನು ತೆರವುಗೊಳಿಸಬೇಕು.ಚರಂಡಿಗಳನ್ನು ಸ್ವಚ್ಚಗೊಳಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗ್ರತೆ ವಹಿಸಲು ಸಿಬ್ಬಂದಿಗಳಿಗೆ ಸೂಚಿಸಿದರು.

ಅಧ್ಯಕ್ಷರು,ಸದಸ್ಯರು ಮತ್ತು ಪ. ಪಂ. ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಪಾದಚಾರಿ ರಸ್ತೆಯಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.ಸರ್ಕಾರಿ ಆಸ್ಪತ್ರೆಗೆ ತಿರುಗಾಡಲು ತೊಂದರೆಯಾಗದoತೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗವನ್ನು ಗುರುತಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ತಾಹಿರಾಬೇಗಂ ವಹಿಸಿದ್ದರು.ಉಪಾಧ್ಯಕ್ಷೆ ಜಯಮ್ಮ ಸದಸ್ಯರುಗಳು ಹಾಗು ಇಂಜೀನಿಯರ್ ಕವಿತಾ ಕೆ ಆರ್ ಹಾಜರಿದ್ದರು.

——————ಧರ್ಶನ್ ಕೆರೆಹಳ್ಳಿ

Leave a Reply

Your email address will not be published. Required fields are marked *

× How can I help you?