ಚಿಕ್ಕಮಗಳೂರು:- ಪಂಚಭೂತಗಳಲ್ಲಿ ಒಂದಾದ ಕೆರೆಯ ನೀರು ದೇವತೆಗಳಿಗೆ ಸಮಾ ನ. ಕಲುಷಿತ ಅಥವಾ ಮಾಲಿನ್ಯ ಉಂಟಾಗುವ ಪದಾರ್ಥಗಳನ್ನು ಹಾಕದೇ ಅಚ್ಚುಕಟ್ಟಿನಿಂದ ಕಾಪಾಡುವುದು ಗ್ರಾಮಸ್ಥರ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ತಾಲ್ಲೂಕಿನ ನೆಟ್ಟೆಕೆರೆಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆ, ಕರ್ತಿ ಕೆರೆ ಗ್ರಾ.ಪಂ. ಹಾಗೂ ಕೆರೆ ಅಭಿವೃದ್ದಿ ಸಮಿತಿ ಸಹಕಾರದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ 795 ಕೆರೆ ಹಸ್ತಾಂತರ ಕಾರ್ಯಕ್ರಮದ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಜನೋಪಯೋಗಿ ಕಾರ್ಯದಲ್ಲಿ ಧರ್ಮಸ್ಥಳ ಟ್ರಸ್ಟ್ ಬಹಳಷ್ಟು ಉಪಯೋಗಿ ಕೆಲಸಗಳು ಮಾಡಿವೆ. ದೇವಾಲಯ ಜೀರ್ಣೋದ್ದಾರ, ಅನುದಾನ ನಿಧಿ, ವಾತ್ಸಲ್ಯ ಮನೆ, ಕೆರೆಗಳ ಅಭಿವೃದ್ದಿಯಂಥ ಧರ್ಮಕಾರ್ಯಗಳಿಂದ ವೀರೇಂದ್ರ ಹೆಗ್ಡೆಯವರು ಜನಮನ್ನಣೆ ಗಳಿಸಿ ನಡೆದಾಡುವ ದೇವರಾಗಿದ್ದಾರೆ ಎಂದರು.
ಸಮಾಜಕ್ಕೆ ಕೊಡುಗೆ ನೀಡಲು ಕೆಲವರು ಮುಂದಾಗುವುದಿಲ್ಲ. ಟ್ರಸ್ಟ್ ಅಥವಾ ಸಂಘ-ಸAಸ್ಥೆಗಳ ಕೊ ಡುಗೆಯನ್ನು ಸಹಿಸÀÄವುದಿಲ್ಲ. ನೈಜವಾಗಿ ಹೊಟ್ಟೆ ನೋವಿಗೆ ವೈದ್ಯರಲ್ಲಿ ಔಷಧಿಯಿದೆ. ಆದರೆ ಹೊಟ್ಟೆಕಿಚ್ಚಿಗೆ ಔಷಧವಿಲ್ಲ. ಹೀಗಾಗಿ ಜನೋಪಯೋಗಿ ಕಾರ್ಯಗಳತ್ತ ಹೆಜ್ಜೆ ಹಾಕುವವರ ಕೈಜೋಡಿಸಬೇಕು ಎಂದು ಸಲಹೆ ಮಾಡಿದರು.

ಜಗತ್ತಿನಲ್ಲಿ ಗಾಳಿ, ನೀರು, ಅಗ್ನಿ, ಭೂಮಿ, ವಾಯು ಪಂಚಭೂತಗಳಿಂದ ಕೂಡಿದೆ. ವಿಶೇಷವಾಗಿ ಭಾರ ತೀಯ ಸಂಸ್ಕೃತಿಯಲ್ಲಿ ನಮ್ಮ ಪೂರ್ವಿಕರು ಪಂಚಭೂತಗಳನ್ನು ದೈವ ಸ್ವರೂಪಿಯಲ್ಲಿ ಪೂಜಿಸುವ ಸಂಸ್ಕೃತಿ ಚಾಲ್ತಿಯಲ್ಲಿದ್ದು ಮಾನವರು ಕೆರೆಗಳನ್ನು ಮಾಲಿನ್ಯಗೊಳಿಸದೇ ಸ್ವಚ್ಚತೆಯಿಂದ ಕಾಪಾಡಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ ಕೆರೆಗ ಳು ಗ್ರಾಮಸ್ಥರ ಪಾಲಿಗೆ ವರದಾನವಾಗಿದೆ. ಸುಮಾರು 11ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ದಿಗೊಳಿಸಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಹಾಗೂ ಸ್ವಚ್ಚತೆಯಿಂದ ಕಾಪಾಡುವ ಜವಾಬ್ದಾರಿ ಗ್ರಾಮಸ್ಥರು ನಿರ್ವಹಿಸಿದರೆ ಧರ್ಮ ಸ್ಥಳ ಸಂಸ್ಥೆ ಮಾಡಿರುವ ಕಾರ್ಯ ಸಾರ್ಥಕವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ತಿಕೆರೆ ಗ್ರಾ.ಪಂ. ಅಧ್ಯಕ್ಷೆ ಭಾಗ್ಯ ಶ್ರೀನಿವಾಸ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ತಾ.ಪಂ. ಮಾಜಿ ಅಧ್ಯಕ್ಷ ನೆಟ್ಟೆಕೆರೆ ಹಳ್ಳಿ ಜಯಣ್ಣ, ಪಿಡಿಓ ಪ್ರೇಮ, ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷರಾದ ನಾಗೇಶ್ , ಮೂರ್ತಿ, ರೈತ ಸಂಘದ ಸುನಿಲ್, ಕೃಷ್ಣೇಗೌಡ, ತಾಲ್ಲೂಕು ಯೋಜನಾಧಿಕಾರಿ ರಮೇಶ್ , ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್, ಜನ ಜಾಗೃತಿ ಸದಸ್ಯರಾದ ಅನಿಲ್ ಆನಂದ್, ಮಂಜುನಾಥ್, ಕುಮಾರ್, ನಜ್ಮಾ ಮತ್ತಿತರರಿದ್ದರು.
- ಸುರೇಶ್ ಎನ್.