ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಪಂಚಾಯತ್ ಕಚೇರಿಯ ಕಟ್ಟಡದಲ್ಲಿರುವ ಶಾಸಕರ ಕಚೇರಿಯಲ್ಲಿ ಶಾಸಕ ಹೆಚ್.ಟಿ.ಮಂಜು ರವರು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಅನುಕೂಲವಾಗುವಂತೆ ಬಸ್ಸುಗಳಿಲ್ಲದ ಗ್ರಾಮಗಳಿಗೆ, ತಾಲ್ಲೂಕು ಕೇಂದ್ರ ಪ್ರವಾಸಿ ತಾಣಗಳಾದ ಭೂವರಹನಾಥಸ್ವಾಮಿ ಕ್ಷೇತ್ರ, ಪುರ, ಸಂಗಾಪುರ, ಅಂಬಿಗರಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮ ಕ್ಷೇತ್ರ, ಸಾಸಲು ಶ್ರೀ ಶಂಭಲಿಂಗೇಶ್ವರ, ಶ್ರೀ ಸೋಮೇಶ್ವರ ಕ್ಷೇತ್ರ, ಚಂದಗೋನಳ್ಳಮ್ಮ ಕ್ಷೇತ್ರ, ಡಿಂಕಾ, ಶ್ರವಣಬೆಳಗೊಳ, ಮೇಲುಕೋಟೆ ಕ್ಷೇತ್ರಗಳಿಗೆ ನಮ್ಮ ತಾಲ್ಲೂಕಿನ ಪ್ರಯಾಣಿಕರು, ಭಕ್ತಾದಿಗಳು ಹೋಗಿ- ಬರಲು ಮಾರ್ಗಗಳನ್ನು ಸೃಜಿಸಿ , ಅಗತ್ಯ ಬಸ್ ವ್ಯವಸ್ಥೆ ಮಾಡಬೇಕು. ಹಾಗೆಯೇ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗಲು ಎಲ್ಲಾ ಹೋಬಳಿ ಕೇಂದ್ರಗಳು ಸೇರಿದಂತೆ ಪ್ರಮುಖ ಗ್ರಾಮಗಳಿಗೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಾರಿಗೆ ಜಿಲ್ಲಾ ನಿಯಂತ್ರಣಾಧಿಕಾರಿ(ಸಾರಿಗೆ ಡಿಸಿ) ನಾಗರಾಜು, ಕೆ.ಆರ್.ಪೇಟೆ ಸಾರಿಗೆ ಡಿಪೋ ಮ್ಯಾನೇಜರ್ ವನಿತಾ, ಸಂಚಾರಿ ನಿರೀಕ್ಷಕ ರವಿ, ಜಿಟಿಓ ಪರಮೇಶ್ವರಪ್ಪ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.