ಹಾಸನ-ಯಶವಂತಪುರ-ಹಾಸನ-ರೈಲ್ವೆ-ಪೊಲೀಸ್ರ-ಕಿರುಕುಳ- ರಕ್ಷಿಸುವಂತೆ-ಗುಜರಿ-ವಸ್ತು-ವ್ಯಾಪಾರಿಗಳಿಂದ-ಪ್ರತಿಭಟನೆ

ಹಾಸನ: ಕರ್ನಾಟಕದ ಯಶವಂತಪುರದ ರೈಲ್ವೆ ಪೊಲೀಸ್ ಮತ್ತು ಹಾಸನದ ರೈಲ್ವೆ ಪೊಲೀಸರು ಪರಿಶಿಷ್ಟ ಪಂಗಡದವರಾದ ನಮ್ಮಗಳ ಮೇಲೆ ಕಿರುಕುಳ ದೌರ್ಜನ್ಯ ನಡೆಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುಜರಿ ವ್ಯಾಪಾರಸ್ಥರು ಹಾಗೂ ರಸ್ತೆ, ಪುಟ್ಬಾತ್ ನಲ್ಲಿ ಪ್ಲಾಸ್ಟಿಕ್, ಚಿಂದಿ ಮತ್ತು ಇತರೆ ವಸ್ತು ಸಂಗ್ರಹಿಸಿ ಗುಜರಿ ಅಂಗಡಿಗೆ ವ್ಯಾಪಾರ ಮಾಡುವವರು ಡಿಸಿ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ಇದೆ ವೇಳೆ ಆಲೂರು ತಾಲೂಕು ಹುಣುಸೆವಳ್ಳಿ ಗ್ರಾಮದ ನವಾಜ್ ಇತರರು ಮಾಧ್ಯಮದೊಂದಿಗೆ ಮಾತನಾಡಿ, ನಾನು ಮತ್ತು ನಮ್ಮ ಗ್ರಾಮದ ಕಾಳ ಮತ್ತು ಇತರರು ನಮ್ಮ ವೃತ್ತಿಯಿಂದ ಗುಜರಿ ವ್ಯಾಪಾರವನ್ನು ಸುಮಾರು 10 ವರ್ಷದಿಂದ ಮಾಡುತ್ತಿದ್ದು, ಇದೇ ವೃತ್ತಿಯಿಂದ ನಮ್ಮ ಕುಟುಂಬದ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸವನ್ನು ಮಾಡುತ್ತಿದ್ದೇವೆ.ನಾವುಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನಾಂಗವಾಗಿದ್ದು, ಆರ್ಥಿಕವಾಗಿ ಹಿಂದುಳಿದಿದ್ದು,ಈ ವೃತ್ತಿಯನ್ನು ಕಷ್ಟುಪಟ್ಟು ನಿರ್ವಹಿಸುತ್ತಿದ್ದು, ಕರ್ನಾಟಕದ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರು ರೈಲಿಗೆ ಸಂಬಂಧಿಸಿದ ಉಪಕರಣಗಳನ್ನು ಖರೀದಿ ಮಾಡಿದ್ದೀರಾ ಎಂದು ಪದೇ ಪದೇ ಕಿರುಕುಳ ನೀಡಿ ನಮ್ಮಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ  ಕಳೆದ ಎರಡು ದಿನಗಳ ಹಿಂದೆ ಇದೇ ಕರ್ನಾಟಕ ರೈಲ್ವೆ ಪೊಲೀಸರಾದ ಯಶವಂತಪುರ ಹಾಗೂ ಹಾಸನದ ರೈಲ್ವೆ ಪೊಲೀಸರಾದ ಖಲೀಲ್, ಜಾವೀದ್, ಎ.ಎಸ್.ಐ ರವಿ ಹಾಗೂ ಇತರರ ನಮ್ಮ ಗ್ರಾಮದ ಹುಡುಗರನ್ನು ಕರೆದುಕೊಂಡು ರೈಲ್ವೆ ಮಾಲನ್ನು ತೆಗೆದುಕೊಂಡಿದ್ದೀರಾ ಎಂದು ಕಿರುಕುಳ ನೀಡಿದ್ದು, ಇವರ ಕಿರುಕುಳದಿಂದ ನಮ್ಮ ಗ್ರಾಮದ ಕಾಳ ಎಂಬ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಬೆಂಕಿ ಹಚ್ಚಿಕೊಂಡು ಗಾಯಗೊಂಡು ಈಗ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೆ ಅರ್ಮಾನ್ ಬಿನ್ ಸಮೀರ್ ಪಾಷಾ ಇವರನ್ನು ಸಹ 4 ದಿನಗಳ ಹಿಂದೆ ಕರೆದುಕೊಂಡು ಅವರಿಗೆ ಕಿರುಕುಳ ನೀಡುತ್ತಿದ್ದು, ಅವರ ಬಗ್ಗೆ ಮಾಹಿತಿ ಕೇಳಿದರೆ ಪೋಲಿಸ್‌ ಅವರು ಗೊತ್ತಿಲ್ಲ ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಅವರು, ಕಿರುಕುಳ ನೀಡುತ್ತಿರುವ ಇವರ ವಿರುದ್ದ ಕ್ರಮ ಕೈಗೊಂಡು ನಮಗೆ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಾಗಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ರಾಜು, ವಸಂತ, ಆಶಾ, ಗೀತಾ, ಶಾಂತಿ, ಲೀಲಾ, ರತ್ನ, ಆರತಿ, ಮಂಜೂಳಾ, ಪ್ರಿಯಾ, ವಿಜಯ, ಧನುಷ್, ಗಣೇಶ್, ಕಾನೇಶ್,ಸುಮಿತ್ರಾ, ಅಭಿಮಾನ್, ಪವನ್, ತಾರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?