ಎಚ್.ಡಿ.ಕೋಟೆ ಪಟ್ಟಣದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಈ ಚುನಾವಣಾ ಕಣದಲ್ಲಿ ಪುರಸಭಾ ಸದಸ್ಯರಾದ ಪ್ರೇಮ್ ಕುಮಾರ್, ನಂಜಪ್ಪ, ಮತ್ತು ಮಧುಕುಮಾರ್ ರವರು ತೀವ್ರ ಪೈಪೋಟಿ ನಡೆಸಿ ಕೊನೆಕ್ಷಣದಲ್ಲಿ ಮಾನ್ಯ ಶಾಸಕರ ನಿರ್ದೇಶನದ ಮೇರೆಗೆ ಹಾಗೂ ಸದಸ್ಯರ ಸಮನ್ವಯ ಹೊಂದಾಣಿಕೆ ಮತ್ತು ಮಾತುಕತೆಯ ಮೂಲಕ ಅಂತಿಮವಾಗಿ ಸ್ಪರ್ಧೆಯಲ್ಲಿ ಮಧುಕುಮಾರ್ ಉಳಿದರು.
ಇಂದು ಬೆಳ್ಳಿಗ್ಗೆ 10.30 ಕ್ಕೆ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಮಧುಕುಮಾರ್ ರವರು ಏಕಮಾತ್ರ ನಾಮಪತ್ರ ಸಲ್ಲಿಸಿ ಕಣದಲ್ಲಿ ಒಬ್ಬರೆ ಸ್ಪರ್ಧೆಯಲ್ಲಿ ಉಳಿದು ಅಂತಿಮವಾಗಿ ಪುರಸಭಾ ಸ್ಥಾಯಿ ಸಮಿತಿ ಗೆ ಅಧ್ಯಕ್ಷರಾಗಿ ಮಧುಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ಮಧುಕುಮಾರ್ ಮಾತನಾಡಿ, ನನ್ನನ್ನು ಅಧ್ಯಕ್ಷನಾಗಲು ಸಹಕರ ನೀಡಿದಂತ ಶಾಸಕ ಅನಿಲ್ ಚಿಕ್ಕಮಾದು ಸಾಹೇಬರವರಿಗೆ ಮತ್ತು ಮುಖಂಡರಿಗೆ ಪುರಸಭೆಯ ಎಲ್ಲಾ ಸದಸ್ಯರಿಗೂ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತೇನೆ ಪುರಸಭೆಯಲ್ಲಿ ಸಾಕಷ್ಟು ಕೆಲಸ ಬಾಕಿ ಇದ್ದು ಆದಷ್ಟು ಬೇಗ ಪೂರ್ಣಗೊಳಿಸುತ್ತೇನೆ ಹಾಗೂ ಕುಡಿಯುವ ನೀರು ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಹೊತ್ತು ನೀಡಿ ಮತ್ತು ಪುರಸಭೆಯ ಅಭಿವೃದ್ಧಿಗೆ ಗಮನಹರಿಸಿ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಹಾಲಿಸಿ ಪುರಸಭೆಯನ್ನು ಅಭಿವೃದ್ಧಿಯತ್ತ ಶಾಸಕರ ಮಾರ್ಗದರ್ಶನದಂತೆ ಕೊಂಡು ಹೋಗುತ್ತೇನೆ ಎಂದು ತಿಳಿಸಿದರು,

ಈ ಚುನಾವಣಾ ಪ್ರಕ್ರಿಯೆಯನ್ನು ಪುರಸಭೆ ಮುಖ್ಯ ಅಧಿಕಾರಿ ಪಿ, ಸುರೇಶ್, ರವರು ನಡೆಸಿಕೊಟ್ಟುರು ಅಧ್ಯಕ್ಷತೆಯನ್ನು ಸುಹಾಸಿನಿ ದಿನೇಶ್ ವಹಿಸಿ ಮಾತನಾಡಿದರು.
ಮಧುಕುಮಾರ್ ಆಯ್ಕೆಯಾಗುತ್ತಿದ್ದಂತೆ ಪುರಸಭೆ ಮುಂದೆ ಅಭಿಮಾನಿಗಳು ಮತ್ತು ಬೆಂಬಲಿಗರು ಹಾರ ತುರಾಯಿ ಹಾಕಿ ಪಟಾಕಿ ಸಿಡಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆಯ ಎಲ್ಲಾ ಸದಸ್ಯರು ಮತ್ತು ಮುಖಂಡರು ಹಾಗೂ ಅಧಿಕಾರಿ ವರ್ಗದವರು ಇದ್ದರು,
- ಶಿವಕುಮಾರ್ ,ಕೋಟೆ