ಕೆ.ಆರ್ ಪೇಟೆ: ರಾಜ್ಯದ ಪ್ರತಿಷ್ಠಿತ ಕನ್ನಡ ಫಿಲಂ ಚೇಂಬರ್ ಸಂಸ್ಥೆಯು ದಿ:ಪುನಿತ್ ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಮಾಕವಳ್ಳಿ ಗ್ರಾಮದ ಕಿರುತೆರೆ ಕಲಾವಿದ ಎಂ.ಕೆ.ಸೋಮಶೇಖರ್ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಛಾಯಾಗ್ರಹಣ ಕಲಾವಿದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಫಿಲಂ ಚೇಂಬರ್ ವತಿಯಿಂದ ಡಾ.ಪುನೀತ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ.ಕೆ.ಸೋಮಶೇಖರ್ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಹಾಗೂ ಉತ್ತಮ ಕಲಾವಿದ ಯುವರತ್ನ ಪ್ರಶಸ್ತಿಯನ್ನು ಗಣ್ಯರಿಂದ ಸ್ವೀಕಾರ ಮಾಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಮಾಕವಳ್ಳಿ ಸೋಮಶೇಖರ್ ಮರೆಯಲ್ಲೆ ಕಾಯಕ ಮಾಡುತ್ತಾ ಸಾಗುತ್ತಿರುವ ನಮ್ಮಂತಹ ಗ್ರಾಮೀಣ ಪ್ರತಿಭಡಯನ್ನು ಗುರುತಿಸಿ ಗೌರವಿಸಿರುವ ಬೆಂಗಳೂರು ಕನ್ನಡ ಫಿಲಂ ಚೇಂಬರ್ ಸಂಸ್ಥೆಗೆ ನಾನು ಅಭಾರಿಯಾಗಿರುತ್ತೇನೆ. ಕನ್ನಡ ಶ್ರೇಷ್ಠ ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ನನಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ನಿಜ ಜೀವನದಲ್ಲಿ ಯಾರಿಗೂ ಕಾಣದಂತೆ ದಾನಮಾಡಿರುವ ಅಪರೂಪದ ಮಾಣಿಕ್ಯ ನೇತ್ರ, ದೇಹ ದಾನ ಧರ್ಮಕ್ಕೆ ಗೌರವ ತಂದುಕೊಟ್ಟ ದಿ:ಪುನಿತ್ ರಾಜ್ ಕುಮಾರ್ ಜನ್ಮದಿನದ ಅಂಗವಾಗಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ನಮ್ಮ ಜೀವನದಲ್ಲಿ ಉತ್ತಮ ಕ್ಷಣ ವಾಗಿದೆ. ಈ ಪ್ರಶಸ್ತಿ ನಮಗೆ ಗೌರವ ಸ್ಪೂರ್ತಿದಾಯಕವಾಗಿ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟ ಸಿ.ಕೆ. ಸಂಧ್ಯಾ, ಜಿಲ್ಲಾ ಗೃಹರಕ್ಷಕ ದಳ ಇಲಾಖೆ ಚಿತ್ರದುರ್ಗ, ಶಶಿಕುಮಾರ್ ಬಿ.ಹೆಚ್,ಸಹಾಯಕ ನಿರ್ಧೇಶಕ ಪ್ರವಾಸೋದ್ಯಮ ಎಲಾಖೆ. ಜಿ.ರೇಖಾ, ನಟ ಮೈಕೋ ನಾಗರಾಜ್, ಶಂಖನಾದ ಅಂಜನಪ್ಪ, ಮಹಾಲಕ್ಷ್ಮೀ, ಟಿ. ಆರ್. ಚಲನ ಚಿತ್ರ ನಟಿ ಭಾವನಾ ನಾಗೇಂದ್ರಸ್ವಾಮಿ ಸೇರಿದಂತೆ ಹಲವು ಗಣ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಸಾಧನೆ ಮಾಡಿರುವ ಎಂ.ಕೆ.ಸೋಮಶೇಖರ್ ಅವರನ್ನು ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಮಿತ್ರ ಫೌಂಡೇಶನ್ ಅಧ್ಯಕ್ಷ ವಿಜಯ್ ರಾಮೇಗೌಡ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.
- ಶ್ರೀನಿವಾಸ್ ಆರ್.