ತುಮಕೂರು : ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟೀಸ್ ಮೂವೆಂಟ್ ಇಂಡಿಯಾ ವತಿಯಿಂದ ವಿಶ್ವಶಾಂತಿಗಾಗಿ ಸಸ್ಯಹಾರ ಜನಜಾಗೃತಿ ಜಾಥಾವನ್ನು ತುಮಕೂರು ನಗರದ ಶಿರಾಗೇಟ್‌ನಿಂದ ಯಲ್ಲಾಪುರ ಬಸ್ ನಿಲ್ದಾಣದವರೆಗೆ ಹಮ್ಮಿಕೊಳ್ಳಲಾಗಿತ್ತು.
ಜಾಥಾ ಉದ್ದೇಶಿಸಿ ಸತೀಶ್ ಮಾತನಾಡಿ, ಪಿರಮಿಡ್ ಸೊಸೈಟಿಯ ಮುಖ್ಯಸ್ಥ ಪತ್ರಿಜೀ ಅವರ ಆಶಯಗಳಂತೆ ಹಾಗೂ ಸುಸ್ಥಿರ ಜಗತ್ತಿನ ನಿರ್ಮಾಣದ ಸದುದ್ದೇಶವನ್ನು ಹೊಂದಿರುವ ವ್ಯಕ್ತಿಗಳಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಈ ಸಮಾಜದಲ್ಲಿ ಹೇಗೆ ಜೀವನ ಮಾಡುವ ಹಕ್ಕುಗಳು ಇದೆಯೋ ಅದೇ ರೀತಿಯಲ್ಲಿ ಸಸ್ಯ ಸಂಕುಲ, ಪ್ರಾಣಿ ಸಂಕುಲಗಳಿಗೂ ತಮ್ಮದೇ ಆದ ಜೀವನ ನಡೆಸುವ ಸ್ವಚ್ಛೆಯನ್ನು ಹೊಂದಿವೆ, ಅವುಗಳನ್ನು ಹಿಂಸಿಸುವುದು, ಕೊಲ್ಲುವುದು ಮಹಾಪರಾಧವಾಗಿರುತ್ತದೆ, ಅದನ್ನು ತಡೆಗಟ್ಟುವುದು, ಮಾಂಸಹಾರವನ್ನು ತ್ಯಜಿಸಿ ಸಸ್ಯಹಾರಿಗಳಾಗಿ ಬದುಕುವುದೇ ಇದರ ಉದ್ದೇಶವಾಗಿರುತ್ತದೆ, ಅದನ್ನು ಪ್ರತಿಯೊಬ್ಬರಲ್ಲಿಯೂ ಮನವರಿಕೆ ಮಾಡುವುದೇ ಈ ಜಾಥಾ ಉದ್ದೇಶವಾಗಿರುತ್ತದೆ ಎಂದರು.

ಬೆಂಗಳೂರಿನಿಂದ ಆಗಮಿಸಿದ್ದ ಜ್ಯೋತಿ ಎಂಬುವವರು ಮಾತನಾಡಿ ಪ್ರತಿಯೊಬ್ಬರೂ ಸಸ್ಯಹಾರಿಗಳಾಗಿ ಜೀವನ ನಡೆಸಬೇಕು, ಪ್ರಾಣಿ ಹಿಂಸೆ ಮಹಾಪಾಪ, ಪತ್ರೀಜಿ ಅವರಿಂದ ಪ್ರೇರಿಪತರಾಗಿ ಇಂದು ಲಕ್ಷಾಂತರ ಜನರು ಮಾಂಸಹಾರವನ್ನು ತ್ಯಜಿಸಿ ಉತ್ತಮ ನಾಗರೀಕರಾಗಿರುವುದಲ್ಲದೇ, ಸಂತೋಷಕರ ಜೀವನ ನಡೆಸುತ್ತಿರುವುದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ, ಒಬ್ಬ ಜ್ಞಾನಿಯಾಗುವುದು ತನ್ನಲ್ಲಿರುವ ಜ್ಞಾನವನ್ನು ಇತರರಿಗೆ ಹಂಚುವುದರಿಂದ ಅದೇ ರೀತಿ ನಮ್ಮ ಪತ್ರೀಜಿ ಅವರು ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡಲು ನಮಗೆ ಪ್ರೇರಪಣೆಯಾಗಿದ್ದಾರೆ ಎಂದು ಅವರು, ಪ್ರತಿಯೊಬ್ಬರೂ ಸಸ್ಯಹಾರಿಗಳಾಗಬೇಕು ಎಂಬುದೇ ನಮ್ಮ ಸೊಸೈಟಿಯ ಮೂಲ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸತೀಶ್, ಅನಿತ, ಜ್ಯೋತಿ, ಡಾ|| ಮಮತ, ಸುರೇಂದ್ರಕುಮಾರ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.