ಚಿಕ್ಕಮಗಳೂರು:– ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಾಹಿತಿ, ಸಂಘಟಕಿ, ಉಪನ್ಯಾಸಕಿ, ನಿರೂಪಕಿ, ಲೇಖಕಿ, ನಟಿ ಅಜ್ಜಂಪುರ ಎಸ್ ಶೃತಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್.ಪುಷ್ಪ ತಿಳಿಸಿದರು.
ಜಿಲ್ಲೆಯ ಲೇಖಕಿಯರನ್ನು ಒಟ್ಟು ಗೂಡಿಸಿಕೊಂಡು ಕಾವ್ಯ ಕಮ್ಮಟ, ಕಥಾ ಕಮ್ಮಟಗಳನ್ನು ಆಯೋಜಿ ಸುವ ಮೂಲಕ ಕವನಗಳ ರಚನೆ, ಸಣ್ಣ ಕತೆಗಳು, ಹಾಗೂ ಲೇಖನಗಳ ಬರವಣಿಗೆಗೆ ಉತ್ತೇಜನ ನೀಡುವುದು. ಪ್ರತಿ ತಾಲ್ಲೂಕುಗಳಲ್ಲಿ ಕರ್ನಾಟಕ ಲೇಖಕಿಯರ ಸಂಘದ ಶಾಖೆಗಳನ್ನು ತೆರೆದು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಅವಕಾಶ ಒದಗಿದರೆ ರಾಜ್ಯ ಮಟ್ಟದ ಕರ್ನಾಟಕ ಲೇಖಕಿಯರ ಸಂಘದಿಂದ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ನೂತನ ಅಧ್ಯಕ್ಷೆ ಅಜ್ಜಂಪುರ ಎಸ್. ಶೃತಿ ತಿಳಿಸಿದ್ದಾರೆ.
– ಸುರೇಶ್ ಎನ್.