ಕೆ ಆರ್ ಪೇಟೆ -ಅಬಾಕಸ್ ಅಭ್ಯಾಸದಿಂದ ಗಣಿತದ ಕಲಿಕೆಯಲ್ಲಿ ಉತ್ತಮ ರೀತಿಯಲ್ಲಿ ಕಲಿಕೆ ಸಾಧ್ಯವಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಕೆ ಕಾಳೇಗೌಡ ಹೇಳಿದರು.
ಅವರು ಪಟ್ಟಣದ ಪ್ರಗತಿ ಶಾಲೆಯಲ್ಲಿ ಅಬಾಕಸ್ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಅಬಾಕಸ್ ಅಭ್ಯಾಸದಿಂದ ಗಣಿತದ ಕಲಿಕೆಯಲ್ಲಿ ಉತ್ತಮ ರೀತಿಯಲ್ಲಿ ಕಲಿಕೆ ಸಾಧ್ಯವಾಗುತ್ತದೆ. ಪ್ರಗತಿ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಅಬಾಕಸ್ ಪ್ರಶಸ್ತಿ
ಪ್ರಶಸ್ತಿಯನ್ನು ಪಡೆದಿದ್ದಾರೆ.
ಬೆಂಗಳೂರಿನ ಅಬಾಕಸ್ ಅಕಾಡೆಮಿ ಅಬಾಕಸ್ ಸ್ಪರ್ಧೆ ಏರ್ಪಡಿಸಿತ್ತು. ಪಟ್ಟಣದ ಪ್ರಗತಿ ಶಾಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಮಯ 20 ನಿಮಿಷ ವಾದರೆ ಮಕ್ಕಳು ಕೇವಲ 4 ನಿಮಿಷಗಳ ಒಳಗೆ ಮುಗಿಸಿದ್ದು ಮಕ್ಕಳ ಕಲಿಕೆಯ ಗುಣಮಟ್ಟವನ್ನು ತೋರಿಸುತ್ತದೆ. ಅಬಾಕಸ್ ತರಬೇತಿಯನ್ನು ಬೆಂಗಳೂರು ಆಚಾರ್ಯ ಅಕಾಡೆಮಿಯ ಅಬಾಕಸ್ ಶಿಕ್ಷಕಿಯರಾದ ಸುಗಂದಿನಿ, ಯಶಸ್ವಿನಿ ಮತ್ತು ಸಹನಾ ರವರು ನೀಡಿದ್ದು, ಗಣಿತವು ಮಕ್ಕಳಿಗೆ ಕಬ್ಬಿಣದ ಕಡಲೆ ಆಗಬಾರದು. ಅದು ಸುಲಭವಾಗಿ ಸರಳವಾಗಿ ಇರಬೇಕು ಎಂಬ ಸದುದ್ದೇಶದಿಂದ ಬೆಂಗಳೂರಿನಲ್ಲಿ ಅಬಕಾಸ್ ಸಂಸ್ಥೆ ಆರಂಭಿಸಲಾಗಿದೆ ಎಂದರು.
ಈ ವೇಳೆ ಸಂಸ್ಥೆಯ ಮುಖ್ಯಸ್ಥ ಪ್ರೇಮ್ ಕುಮಾರ್, ಶಿಕ್ಷಕರಾದ ಸುಗಂಧಿನಿ , ಸಹನಾ, ಶಾಲೆಯ ಮುಖ್ಯ ಶಿಕ್ಷಕ ಎಚ್ ಆರ್ ಗೋಪಾಲಕೃಷ್ಣ, ಶಿಕ್ಷಕರಾದ ಲಕ್ಷ್ಮಿ, ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.
- ಶ್ರೀನಿವಾಸ್ ಆರ್.