ಅರಕಲಗೂಡು– ಪಟ್ಟಣದ ಕೋಟೆ ಗಣಪತಿ ಕೊತ್ತಲಿನ ಅನಕೃ ವೇದಿಕೆಯಲ್ಲಿ ಶ್ರೀ ದೊಡ್ಡಮ್ಮ ದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘ, ಅರಕಲಗೂಡು ಹಾಗೂ ಶ್ರೀ ವಿಶ್ವಕರ್ಮ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಎ.ನಂಜುಂಡಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿದರು.
ರಂಗ ನಿರ್ದೇಶಕರಾದ ಜಿ.ಜಿ. ಕೇಶವರವರು ರಂಗಭೂಮಿ ದಿನದ ಹಿನ್ನೆಲೆ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ವೇಳೆ ದೊಡ್ಡಮ್ಮ ದೇವಿ ಕಲಾ ಸಂಘದ ಅಧ್ಯಕ್ಷರಾದ ಸತೀಶ್ ಗೌಡ, ಜಾನಪದ ಅಕಾಡೆಮಿ ಸದಸ್ಯರಾದ ದೇವಾನಂದ ವರಪ್ರಸಾದ್,
ಹರಿಕಥಾ ವಿದ್ವಾನ್ ರಮೇಶ್ ಭಾಗವತ್, ರಂಗ ನಿರ್ದೇಶಕ ಕುಬೇರಯ್ಯ, ತಾಲ್ಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಸಂತೋಷ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ , ರಂಗ ಕಲಾವಿದರಾದ ಗಣೇಶ್, ಬಾಬು ಪ್ರಸಾದ್, ಹರೀಶ್ ಇದ್ದರು.
- ಶಶಿಕುಮಾರ