ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12ಸ್ಥಾನಗಳ ಪೈಕಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಗಳು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ. ಅತಂತ್ರ ಫಲಿತಾಂಶ ಪ್ರಕಟವಾಗಿದೆ. ಮುರುಕನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಹೊನ್ನೇನಹಳ್ಳಿ ಕೃಷ್ಣೇಗೌಡ(411), ಅಗಸರಹಳ್ಳಿ ಎ.ಎನ್.ಗೋವಿಂದರಾಜು(411), ಪಿ.ಜಯರಾಮ್(380), ನಾಗಮ್ಮ(310), ಹಾಗೂ ಶಿವಸಾಗರ್(254) ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಬಲರಾಂ(390), ಸರಸ್ವತಿ(307), ನಂಜಪ್ಪಚಾರ್(308), ನಂಜುಂಡಪ್ಪ(393), ರಾಜು(238), ಲಲಿತಮ್ಮ(312) ಸ್ವತಂತ್ರ ಅಭ್ಯರ್ಥಿ ಎಂ.ಬಿ.ರಮೇಶ್(379) ಗೆಲುವು ಸಾಧಿಸಿದ್ದಾರೆ.

ಚುನಾವಣಾಧಿಕಾರಿಯಾಗಿ ಶೋಭಾ ಕಾರ್ಯನಿರ್ವಹಿಸಿದ್ದರು. ಸಹ ಚುನಾವಣಾಧಿಕಾರಿಗಳಾಗಿ ಸಂಘದ ಸಿಇಓ ಚೇತನ್, ಮಧುಚಂದ್ರ, ಸುರೇಶ್, ಕಾರ್ಯನಿರ್ವಣೆ ಮಾಡಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ವಿಜಯ್ ರಾಮೇಗೌಡ, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು, ಮಾಜಿ ಉಪಾಧ್ಯಕ್ಷ ಡಿ.ಜಯರಾಂ, ಬೂಕನಕೆರೆ ಅಜಯ್, ಹೆಮ್ಮನಹಳ್ಳಿ ತಮ್ಮಣ್ಣ, ಅಟ್ಟುಪ್ಪೆ ಅರುಣ್, ವಿಜಯ್ ರಾಮೇಗೌಡರ ಆಪ್ತ ಸಹಾಯಕ ಬಸವರಾಜು ಮತ್ತಿತರರು ಅಭಿನಂದಿಸಿದರು.
-ಶ್ರೀನಿವಾಸ್ ಆರ್.