ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಟನಹಳ್ಳಿ ಅನಿಲ್, ಉಪಾಧ್ಯಕ್ಷರಾಗಿ ಬೀಕನಹಳ್ಳಿ ಜವರಮ್ಮ ಚಂದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಅಧ್ಯಕ್ಷ ಸ್ಥಾನ ಬಯಸಿ ನಾಟನಹಳ್ಳಿ ಅನಿಲ್, ಉಪಾಧ್ಯಕ್ಷ ಸ್ಥಾನ ಬಯಸಿ ಬೀಕನಹಳ್ಳಿ ಜವರಮ್ಮ ಚಂದ್ರೇಗೌಡ ಹೊರತುಪಡಿಸಿ ಉಳಿದ ಯಾವ ಸದಸ್ಯರು ನಾಮಪತ್ರ ಸಲ್ಲಿಸದೇ ಇರುವ ಕಾರಣ ಅಧ್ಯಕ್ಷರಾಗಿ ನಾಟನಹಳ್ಳಿ ಅನಿಲ್ ಉಪಾಧ್ಯಕ್ಷರಾಗಿ ಜವರಮ್ಮ ಚಂದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೇಮಲತಾ ಘೋಷಿಸಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಸತೀಶ್ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರು- ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಮನ್ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ.ಹರೀಶ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ತಾಲ್ಲೂಕು ಕೆಡಿಪಿ ಸದಸ್ಯ ಬೀರುವಳ್ಳಿ ಆಕಾಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕೆ.ರವೀಂದ್ರನಾಥ್, ಗ್ರಾ.ಪಂ ಉಪಾಧ್ಯಕ್ಷ ಪ್ರಕಾಶ್, ಸದಸ್ಯ ಮಂಚಿಬೀಡು ನಾಗರಾಜ್,ರೈಸ್ ಮಿಲ್ ಕೃಷ್ಣೇಗೌಡ , ಪಿ ಎಲ್ ಡಿ ಬ್ಯಾಂಕ್ ಚಂದ್ರೆಗೌಡ, ಜವರೇಗೌಡ,ಡೈರಿ ಮಾಜಿ ಅಧ್ಯಕ್ಷ ಶಶಿಧರ್, ಶಿವರಾಮೇಗೌಡ,ಗ್ರಾ.ಪಂ ಮಾಜಿ ಸದಸ್ಯ ನಾಟನಹಳ್ಳಿ ವೆಂಕಟೇಶ್, ಬೀರುವಳ್ಳಿ ಶಿವರಾಮೇಗೌಡ, ದೇವೇಗೌಡ, ಸಾಕ್ಷಿಬೀಡು ನಿಂಗಣ್ಣ, ಸಂಘದ ನಿರ್ದೇಶಕರಾದ ಬಿ.ಎಸ್ ನಾಗರಾಜೇಗೌಡ ಚೌಟ್ರಿ, ನಾಟನಹಳ್ಳಿ ಜಗದೀಶ್, ಇಂದ್ರೇಶ್,ಕುಳ್ಳೇಗೌಡ ಮತ್ತಿತರರು ಇತರರು ಅಭಿನಂದಿಸಿದರು.
-ಶ್ರೀನಿವಾಸ್ ಆರ್.