ಬೇಲೂರು- ದೇಶದಲ್ಲೆಡೆ ಭಾನುವಾರ ಚಂದ್ರ ದರ್ಶನ ವಾದ ಹಿನ್ನೆಲೆ ಬೇಲೂರು ಕೇಂದ್ರ ಜಾಮಿಯ ಮಸೀದಿಯ ಗುರುಗಳಾದ. ಸೈಯದ್ ಅಹಮದ್ ಅಶ್ರಫಿ ರವರು ಸೋಮವಾರ ಈದುಲ್ ಫಿತರ್ ಆಚರಿಸಲಾಗುವುದು ಎಂದು ಘೋಷಿಸಿದರು.
ಹಾಗಾಗಿ ಇಂದು ರಾಜ್ಯದ್ಯಂತ ರಂಜಾನ್ ಹಬ್ಬವನ್ನು ಸಡಗರಸಂಭ್ರಮದಿಂದ ಆಚರಿಸಲಾಯಿತು. ಒಂದು ತಿಂಗಳ ಉಪವಾಸ ತೊರೆದ ಮುಸ್ಲಿಮರು ಇಂದು ಬೆಳಿಗ್ಗೆ ಗೆಂಡೆಹಳ್ಳಿ ರಸ್ತೆಯಲ್ಲಿರುವ ಈದ್ಗಾ.ಮೈದಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ನಮಾಜ್ ಸಲ್ಲಿಸಿದರು. ಮತ್ತು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಕ್ಕಳು ಹಿರಿಯರು ಹೊಸ ಬಟ್ಟೆ ಧರಿಸಿ ಸಿಹಿ ಹಂಚಿ ಶುಭಕೋರಿ ವಿನಿಮೆಯ ಮಾಡಿಕೊಂಡರು. ನೆರದಿದ್ದ ಭಕ್ತಾದಿಗಳಿಗೆ ಕುರಿತು ಪ್ರವಚನ ನೀಡಿದ ಧರ್ಮಗುರುಗಳು ಮುಸ್ಲಿಮರಿಗೆ ಈ ರಂಜಾನ್ ತಿಂಗಳು ಪುಣ್ಯ ಪುನೀತ ತಿಂಗಳಾಗಿದೆ ರಂಜಾನ್ ಈ ತಿಂಗಳಲ್ಲಿ ಪ್ರಾಯ ಪೂರ್ತಿ ಹಾಗೂ ಬುದ್ಧಿ ಇರುವ ಸರ್ವ ಮುಸ್ಲಿಮರಿಗೂ ಪ್ರಾರ್ಥಕಾಲ ಮುಂಜಾನೆ ಯಿಂದ ಸೂರ್ಯಾಸ್ತಮಾನವರೆಗೆ ಉಪವಾಸ ವೃತ ಕಡ್ಡಾಯವಾಗಿದೆ ಅಸೂಯೆ ಅಹಂಕಾರ ಲೋಭ ಮದ ಮತ್ಸಾರ ಅಡಂಬರ ಆಕ್ರಮ ಮುಂತಾದ ದುಷ್ಕೃತ್ಯಗಳಿಂದ ನಿತ್ಯ ಜೀವನದಲ್ಲೂ ನಿಷೇಧಿತ ವಾಗಿರುವಂತೆ ರಂಜಾನ್ ತಿಂಗಳಲ್ಲಿ ಪ್ರತ್ಯೇಕವಾಗಿ ಕಟ್ಟುನಿಟ್ಟಾಗಿ ವಿರೋಧಿಸುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ನೂರ್ ಅಹಮದ್ ಅಲ್ಲಾಹು ನಮಗೆ ಉಪವಾಸ ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರಮಜಾನ್ ತಿಂಗಳನ್ನು ಸ್ವಾಗತಿಸಲು ನಮ್ಮನ್ನು ಅನುಗ್ರಹಿಸಲಿ. ಪವಿತ್ರ ರಂಜಾನ್ ಹಬ್ಬವು ಕೇವಲ ಹೊಸ ಬಟ್ಟೆ ಸಂಭ್ರಮಾಚರಣೆ ಸೀಮಿತವಾಗದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ರವರ ಆದೇಶದಂತೆ ಬಡವರ ಪಾಲಿನ ಜಕಾತ್ ನೀಡುವುದರ ಜೊತೆಗೆ. ನಿರ್ಗತಿಕಅನಾಥ ಮಕ್ಕಳೊಂದಿಗೆ ಪ್ರೀತಿ ವಿಶ್ವಾಸದಿಂದ ಹಬ್ಬ ಆಚರಿಸಬೇಕು ನಮ್ಮ ಸುತ್ತಮುತ್ತ ಇರುವ ಅನಾಥ ಮಕ್ಕಳಿಗೆ ಸ್ವಾತನಾ ವಾಗಬೇಕು ಅನಾಥ ಮಕ್ಕಳ ಆಶಾಕಿರಣವಾಗಿ ಅವರ ಹೃದಯ ದಣಿಸಬೇಕು ಎಂದರು.

ಈ ವೇಳೆ ಪೊಲೀಸ್ ಇಲಾಖೆ ವತಿಯಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಾಗಿ. ಬಿಗಿ ಪೊಲೀಸ್ ಬಂದೋಬಸ್ ನೀಡಲಾಗಿತ್ತು ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ ಸಬ್ ಇನ್ಸ್ಪೆಕ್ಟರ್ ಎಸ್ ಜೆ ಪಾಟೀಲ್. ಸಿಬ್ಬಂದಿಗಳಾದ ದೇವರಾಜ್ ಚೇತನ್. ನವೀನ್ ದೇವೇಂದ್ರ. ಕುಮಾರ್. ಹಾಗೂ ಭಕ್ತ ಸಮೂಹ ಹಾಜರಿದ್ದರು.
- ನೂರ್ , ಬೇಲೂರು