ರಾಮನಾಥಪುರ- ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರದ ಶ್ರೀ ಪಟ್ಟಾಭಿರಾಮ ದೇವಾಲಯದ ಸಭಾಂಗಣದಲ್ಲಿ ಏಪ್ರಿಲ್ 6 ರಿಂದ ಏಪ್ರಿಲ್ 15 ರವರೆಗೆ 10 ದಿವಸಗಳ ಕಾಲ ಶ್ರೀರಾಮನವಮಿಯ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ- ಈ ಸಂಗೀತ ಮಹೋತ್ಸವಕ್ಕೆ ಸಕಲ ಸಿದ್ದತೆಗೊಳ್ಳತ್ತಿದೆ ಎಂದು ರಾಮನಾಥಪುರದ ಶ್ರೀ ರಾಮ ಸೇವಾ ಸಮಿತಿಯ ಕಾರ್ಯದರ್ಶಿ ಅರ್.ಅರ್. ಶ್ರೀನಿವಾಸ್ ತಿಳಿಸಿದರು.
ರಾಮನಾಥಪುರ- ಶ್ರೀ ಸೇವಾ ಸಮಿತಿಯಿಂದ 10 ದಿವಸಗಳ ಕಾಲ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಾಡುಗಾರಿಕೆ, ಮ್ಯಾಂಡೊಲಿನ್ ವಾದನ, ಭರತನಾಟ್ಯ, ವೀಣಾ ಮತ್ತು ಪೀಟಿಲುವಾದನ ಹಾಗೂ ಪ್ರತಿನಿತ್ಯ ಧಾರ್ಮಿಕ ಪೂಜಾ ಕೈಂಕರ್ಯ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದರು.

ಸಂಗೀತೋತ್ಸವ ಪ್ರಾರಂಭ ಏ. 6 ರಿಂದ ಏ. 15 ರವರೆಗೆ :-
ಏಪ್ರಿಲ್ 6 ರಂದು ಭಾನುವಾರದಂದು ನವಮಿ ಸಂಜೆ 7 ಗಂಟೆಗೆ ವಿದುಷಿ ಪ್ರಜ್ಞಾ ಅಡಿಗ ಅವರಿಂದ ಹಾಡುಗಾರಿಕೆ, ವಿದುಷಿ ಪೃದ್ವೀ ಭಾಸ್ಕರ್ ಪಿಟೀಲು, ವಿದ್ವಾನ್ ಪ್ರಹ್ಲಾದ್, ವರಾಹಸ್ವಾಮಿ ಮೃದಂಗ ನಡೆಸಿಕೊಡುವರು.
ಏ.7 ರಂದು ಸೋಮವಾರ ದಶಮಿ ಸಂಜೆ ವಿದ್ವಾನ್ ವಿಷ್ಣು ವೆಂಕಟೇಶ್ ಅವರು ಮ್ಯಾಂಡೊಲಿನ್ ವಾದನ, ವಿದ್ವಾನ್ ಅರ್ಜುನ್ ದಿನಕರ್ ಪಿಟೀಲು, ವಿದ್ವಾನ್ ನರಸಿಂಹ ಅರ್. ಅಯ್ಯಂಗಾರ್ ಮೃದಂಗ ವಿದ್ವಾನ್ ಸಚಿನ್ ಘಟನೆ ನಡೆಸಿ ಕೊಡುವರು.
ಏ.8 ರಂದು ಮಂಗಳವಾರ ಏಕಾದಶೀ ಸಂಜೆ 7 ಗಂಟೆಗೆ ವಿದುಷಿ ಶ್ರೀವಲ್ಲೀ, ವಿದುಷಿ ಸುರೇಖಾ ಕಣ್ಣನ್, ವಿದುಷಿ ಕುಮಾರಿ ಸ್ಫೂರ್ತಿ ಎಚ್.ವಿ. ಇವರು ಭರತನಾಟ್ಯ ನಡೆಸಿಕೊಡುವರು.
ಏ.9 ರಂದು ಬುಧವಾರ ದ್ವಾದಶೀ ಸಂಜೆ 7 ಗಂಟೆಗೆ ಚಿಲುಕುಂದ ಸಹೋದರಿಯರಾದ ವಿದುಷಿ ಲಕ್ಷ್ಮೀನಾಗರಾಜ್, ವಿದುಷಿ ಇಂದು ನಾಗರಾಜ್ ಹಾಡುಗಾರಿಕೆ, ವಿದ್ವಾನ್ ಅಚ್ಯುತರಾವ್ ಪಿಟೀಲು, ವಿದ್ವಾನ್ ಆನೂರ್ ವಿನೋದ್ ಶ್ಯಾಮ್ ಮೃದಂಗ, ವಿದ್ವಾನ್ ಭಾರ್ಗವ ಹಾಲಂಬಿ ಖಂಜರ ನಡೆಸಿಕೊಡುವರು.
ಏ.10 ರಂದು ಗುರುವಾರ ತ್ರಯೋದಶೀ ಸಂಜೆ 7. ಗಂಟೆಗೆ ವಿದ್ವಾನ್ ಹೆಮ್ಮಿಗೆ ಪ್ರಶಾಂತ್ ಹಾಡುಗಾರಿಕೆ, ವಿದ್ವಾನ್ ಮೈಸೂರು ಶ್ರೀಕಾಂತ್ ಪಿಟೀಲು, ವಿದ್ವಾನ್ ಅರ್ಜುನ್ ಕುಮಾರ್ ಮೃದಂಗ, ವಿದ್ವಾನ್ ರಂಗನಾಥ್ ಚಕ್ರವರ್ತಿ ಘಟಂ ನಡೆಸಿಕೊಡುವರು.
ಏ.11 ರಂದು ಶುಕ್ರವಾರ ಚತುರ್ದಶೀ ಸಂಜೆ 7 ಗಂಟೆಗೆ ವಿದ್ವಾನ್ ನಿಖಿಲ್ ರವಿ ಪರಮರ್ ಕಥಕ್ ನೃತ್ಯ ಹಾಗೂ ವಿದುಷಿ ಅರ್ಚನಾ ಜೋಯಿಸ್ ಭರತನಾಟ್ಯ ನಡೆಸಿಕೊಡುವರು.
ಏ.12 ರಂದು ಶನಿವಾರ ಪೌರ್ಣಮೀ ಸಂಜೆ 7 ಗಂಟೆಗೆ ವಿದ್ವಾನ್ ವಿಷ್ಣುದೇವ ನಂಬೂದರಿ ಹಾಡುಗಾರಿಕೆ, ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್ ಪಿಟೀಲು, ವಿದ್ವಾನ್ ಹೆಚ್.ಎಸ್. ಸುಧೀಂದ್ರ ಮೃದಂಗ, ವಿದ್ವಾನ್ ಶ್ರೀನಿಧಿ ಆರ್. ಕೌಂಡಿನ್ಯ ಘಟಂ ನಡೆಸಿಕೊಡುವರು.
ಏ.13 ರಂದು ಭಾನುವಾರ ಪಾಡ್ಯ ಸಂಜೆ 7 ಗಂಟೆಗೆ ವಿದ್ವಾನ್ ಕುಮರೇಶ್ ಮತ್ತು ವಿದುಷಿ ಜಯಂತಿ ಕುಮರೇಶ್ ಮತ್ತು ಪಿಟೀಲು, ವಿದ್ವಾನ್ ತುಮಕೂರು ರವಿಶಂಕರ್ ಮೃದಂಗ, ವಿದ್ವಾನ್ ಪ್ರಮತ್ ಕಿರಣ್ ತಬಲಾ ಮತ್ತು ಮೋರ್ಚಿಂಗ್ ನಡೆಸಿಕೊಡುವರು.
ಏ.14 ರಂದು ಸೋಮವಾರ ಪಾಡ್ಯ ಸಂಜೆ 7 ಗಂಟೆಗೆ ವಿದ್ವಾನ್ ಎಂ.ಎಸ್. ದೀಪಕ್ ಹಾಡುಗಾರಿಕೆ, ವಿದ್ವಾನ್ ವಿಶ್ವಜಿತ್ ಮತ್ತೂರು ಪಿಟೀಲು, ವಿದ್ವಾನ್ ಚೆಲುವರಾಜ್ ಮೃದಂಗ, ವಿದ್ವಾನ್ ಎಸ್. ಗುರುಮೂರ್ತಿ ಘಟಂ ನಡೆಸಿಕೊಡುವರು.
ಏ.15 ರಂದು ಮಂಗಳವಾರ ಬಿದಿಗೆ ಸಂಜೆ 7 ಗಂಟೆಗೆ ವಿದ್ವಾನ್ ಸುನಿಲ್ ಗಾರ್ಗ್ಯ ಹಾಡುಗಾರಿಕೆ, ವಿದುಷಿ ಜ್ಯೋತ್ಸ್ನಾ ಶ್ರೀಕಾಂತ್ ಬೆಂಗಳೂರು ಪಿಟೀಲು, ವಿದ್ವಾನ್ ಬಿ.ಎಸ್. ಪ್ರಶಾಂತ್ ಮೃದಂಗ, ವಿದ್ವಾನ್ ಶರತ್ ಕೌಶಿಕ್ ಘಟಂ. ನಡೆಸಿಕೊಡುವರು. ಹೀಗೆ 10 ದಿವಸಗಳ ಕಾಲ ನಡೆಯುವ ಶ್ರೀರಾಮನವಮಿ ಸಂಗೀತೋತ್ಸವಕ್ಕೆ ವಿವಿಧ ಕೈಂಕರ್ಯಕರ್ತರು ನಡೆಸಿಕೊಡಲಿದ್ದಾರೆ.

ಪ್ರತಿನಿತ್ಯ, ಬೆಳಗ್ಗೆ ಹಾಗೂ ಸಂಜೆ ಉತ್ಸವಾಧಿಗಳು, ಮತ್ತು ಪಟ್ಟಣವು ವಿದ್ಯುತ್ ದೀಪಾಲಂಕಾರಗೊಂಡಿರುವ ಇಲ್ಲಿಯ ಈ ಸಂಗೀತ ಮಹೋತ್ಸವಕ್ಕೆ ತಮಿಳುನಾಡು, ಅಂದ್ರ ಮುಂತಾದ ರಾಜ್ಯಗಳು, ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಜನ ಸಾಗರವೇ ಹರಿದು ಬರುತ್ತದೆ. ಈ ದೇವಾಲಯವೂ ಲೋಕಪ್ರಸಿದ್ದವಾಗಿದೆ.
– ಶಿವ ಕುಮಾರ