ಅರಕಲಗೂಡು – ತಾಲೂಕಿನಲ್ಲಿ ಮಕ್ಕಳ ಮನೆ ನಡೆಯುತ್ತಿರುವ ಶಾಲೆಗಳ ಮುಖ್ಯಶಿಕ್ಷಕರಿಗೆ ಮತ್ತು ವ್ಯಾಪ್ತಿಯ CRP, BRP, ECO ಅವರಿಗೆ ಸೂಚಿಸುವುದೇನೆಂದರೆ ಏ 08 ರಂದು ನಿಗದಿಯಾಗಿರುವ “ಸಮುದಾಯದತ್ತ ಶಾಲಾ ಕಾರ್ಯಕ್ರಮ” ದಂದು ಕಡ್ಡಾಯವಾಗಿ ಈ ಕೆಳಕಂಡ ಅಂಶಗಳ ಅನುಪಾಲನೆ ಮಾಡಿ ಪೋಟೋ ದಾಖಲೀಕರಣದೊಂದಿಗೆ ಬಿಇಒ ಕಛೇರಿಗೆ ಕಡ್ಡಾಯವಾಗಿ ವರದಿ ಮಾಡಬೇಕು ಎಂದು ಅರಕಲಗೂಡು ಬಿಇಒ ಸೂಚಿಸಿದ್ದಾರೆ.
ಅನುಪಾಲನೆ ಮಾಡಬೇಕಾದ ಅಂಶಗಳು :-
1) ಮಕ್ಕಳ ಎಲ್ಲ ಪ್ರಗತಿ ವಿವರಗಳನ್ನೊಳಗೊಂಡ ದಾಖಲೆಗಳನ್ನ ದೃಢೀಕರಣ ಮಾಡಿ ಇಂಧೀಕರಿಸುವುದು.
2) “ಮಕ್ಕಳ ಮನೆ” ಗೆ ಗ್ರಾಮದ ಎಲ್ಲ ಮಕ್ಕಳು ದಾಖಲಾಗುವಂತೆ ಉತ್ತೇಜಿಸುವುದು.
3) ಅಂದು ಶಾಲೆಗಳನ್ನ ತಳಿರು ತೋರಣಗಳಿಂದ ಅಲಂಕರಿಸಿ ಗ್ರಾಮದ ಹಿರಿಯರ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕರಪತ್ರಗಳನ್ನ ತಯಾರಿಸಿ ಪ್ರತೀ ಮನೆ ಮನೆಗೂ ತೆರಳಿ ಮಕ್ಕಳ ದಾಖಲಾತಿ ಹೆಚ್ಚಿಸುವ ಮತ್ತು ಇಲಾಖೆಯ ಉಚಿತ ಕೊಡುಗೆಗಳ ಬಗ್ಗೆ ಮನವರಿಕೆ ಮಾಡಿಕೊಡುವುದು.
4) ಶಾಲೆಯಲ್ಲಿ ದೊರೆಯುವ ಸೌಲಭ್ಯಗಳನ್ನ ಬಿತ್ತಿಪತ್ರಗಳೊಂದಿಗೆ ಮೆರವಣಿಗೆ ಸಾಗಿ ಹೆಚ್ಚು ಪ್ರಚಾರ ಮಾಡುವುದು.
5) ಹೊಸದಾಗಿ ಮಕ್ಕಳ ಮನೆ ಪ್ರಾರಂಭಿಸುತ್ತಿರುವ ಮತ್ತು ಮಾನ್ಯ ಶಾಸಕರ ಆಶಯವನ್ನ ಎಲ್ಲರಿಗೂ ತಿಳಿಸಿ ಸರ್ಕಾರಿ ವ್ಯವಸ್ಥೆಯನ್ನ ಸಭಲೀಕರಣ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದು.
5) ಅಂದು ಮಾನ್ಯ ಶಾಸಕರು ಹಾಗೂ ಗ್ರಾಮದ ಹಿರಿಯ ವಿದ್ಯಾರ್ಧಿಗಳು, ಗ್ರಾಮಪಂಚಾಯಿತಿ ಅಧ್ಯಕ್ಷರು, ಅಭಿವೃದ್ದಿ ಅಧಿಕಾರಿಗಳನ್ನ ಆಹ್ವಾನಿಸುವುದು ಮತ್ತು ಸಹಕಾರ ಕೋರುವುದು.
ಈ ಬಗ್ಗೆ ಹೆಚ್ಚಿನ ಮುರ್ತುವರ್ಜಿ ವಹಿಸಿ ಇರುವ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಂಡು ತಾರಾ ಮೇಡಂ ಅವರ ಸಹಕಾರವನ್ನೂ ಪಡೆದು ಅತ್ಯುತ್ತಮ ಯಶಸ್ವಿ ಸಮುದಾಯದತ್ತ ಶಾಲೆ ಕಾರ್ಯಕ್ರಮವಾಗಿ ರೂಪಿಸಬೇಕೆಂದು ಈ ಮೂಲಕ ತಿಳಿಸಿದ್ದಾರೆ.
- ಕೆಲ್ಲೂರು ಶಶಿಕುಮಾರ್