ಕೊರಟಗೆರೆ-ಎಲೆರಾಂಪುರ-ಗ್ರಾಮದಲ್ಲಿ-ಕುಡಿಯುವ-ನೀರಿಗಾಗಿ-ಜನರ-ಪರದಾಟ

ಕೊರಟಗೆರೆ:- ತಾಲ್ಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತ ವಾದ ಕಾರಣದಿಂದಾಗಿ. ಎಲೆರಾಂಪುರ ಗ್ರಾಮದಲ್ಲಿ ಕುಡಿಯ ನೀರಿಗಾಗಿ ಅಲೆದಾಟ ಶುರುವಾಗಿದೆ.

ತಾಲೂಕಿನ ಇತಿಹಾಸ ಪ್ರಸಿದ್ಧ ಹಾಗೂ ಕೊರಟಗೆರೆ ತಾಲೂಕಿನ ಹಾಗೂ ಹೋಬಳಿಯ ಬಹು ದೊಡ್ಡ ಹಳ್ಳಿ ಗ್ರಾಮವಾಗಿದ್ದು. ಇದೇ ಗ್ರಾಮದಲ್ಲಿ ಮಾಜಿ ಶಾಸಕರಾದ ಸಿ. ವೀರಭದ್ರಯ್ಯ ರವರು ಇದೇ ಗ್ರಾಮದವರು ಮತ್ತು ಹಲವಾರು ದೇವರುಗಳಿಗೆ ಹಾಗೂ ಸುಪ್ರಸಿದ್ಧ ಕುಂಚಿಟಿಗರ ಮಹಾ ಸಂಸ್ಥಾನ ಮಠ ಇದೆ ಈ ಗ್ರಾಮದಲ್ಲಿ 2000ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದು. ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಜಾಗದಲ್ಲಿರುವ ಶುದ್ಧ ನೀರಿನ ಘಟಕ ಮೂರು ವರ್ಷಗಳ ಹಿಂದೆ ಶುದ್ಧ ನೀರಿನ ಘಟಕ ಸ್ಥಗಿತವಾಗಿದ್ದು.

ಯಾವುದೇ ಅಧಿಕಾರಿಗಳು ತಿರುಗಿ ನೋಡಿಲ್ಲ ಇದೀಗ ಸರ್ಕಾರಿ ಶಾಲೆಯ ಅವಣದಲ್ಲಿ ಇರುವ ಶುದ್ಧ ನೀರಿನ ಘಟಕ ಒಂದು ವಾರಗಳ ಹಿಂದೆ ಸ್ಥಗಿತವಾಗಿದ್ದು. ಹಲವಾರು ಜನರು ಕುಡಿಯುವ ನೀರಿಗಾಗಿ ಮೂರು ನಾಲ್ಕು ಕಿಲೋಮೀಟರ್ ಅಕ್ಕಪಕ್ಕದ ಗ್ರಾಮಗಳಿಗೆ ವಲಸೆ ಹೋಗುವ ಸ್ಥಿತಿ ಪ್ರಾರಂಭವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕಂಡರೂ ಕೂಡ ಕಾಣದಂತೆ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಇಂಜಿನಿಯರ್ ನಿರ್ಲಕ್ಷ
ಸಂಬಂಧಪಟ್ಟ ಅಧಿಕಾರಿಗಳಿಗೆ ಜನರು ದಿನನಿತ್ಯ ದೂರವಾಣಿ ಮೂಲಕ ಕರೆ ಮಾಡಿದಾಗ. ಸರಿಯಾಗಿ ಸ್ಪಂದಿಸದೆ ಉಡಾಫೆ ಉತ್ತರ ಹೇಳಿ ದಿನದಿಂದ ದಿನಕ್ಕೆ ಜಾರಿಕೊಳ್ಳುತ್ತಾರೆ ಹಾಗೂ ಕೆಲವೊಮ್ಮೆ ಅಧಿಕಾರಿಗಳು ದೂರವಾಣಿ ಕರೆ ಮಾಡಿದಾಗ ಯಾವುದೇ ರೀತಿ ಉತ್ತರ ನೀಡದೆ ಸುಮ್ಮನಾಗುತ್ತಾರೆ. ಜನರ ಗೋಳು ಕೇಳುವವರು ಯಾರು ಎಂದು ಮುಖ ಪ್ರಶ್ನೆಯಾಗಿದೆ.

ವರದಿ ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?