ಎಚ್.ಡಿ.ಕೋಟೆ: ಉತ್ತಮ ಆರೋಗ್ಯಕ್ಕೆ ಕ್ರೀಡೆ ಹಿತಕರವಾಗಿದ್ದು, ತಾಲೂಕಿನ ಕ್ರೀಡಾಪಟುಗಳು ಹೆಚ್ಚಿನ ಸಾಧನೆ ಮಾಡಬೇಕು ಎಂದು ಪುರಸಭೆ ಸದಸ್ಯ ಐಡಿಯಾ ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏ.2 ರಿಂದ 6 ವರೆಗೆ ನಡೆಯುತ್ತಿರುವ ಫ್ರೆಂಡ್ಸ್ ಪ್ರೀಮಿಯರ್ ಲೀಗ್ -1 ಪಂದ್ಯಾವಳಿ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಕೋರಿ ಮಾತನಾಡಿದರು.
ತಾಲೂಕಿನಲ್ಲಿ ಹಲವಾರು ಯುವಕ, ಯುವತಿಯರು ವಿವಿಧ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುತ್ತಾರೆ. ಅವರ ಪ್ರತಿಭೆಗಳನ್ನು ಹೊರತರಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಪ್ರತಿಭೆಗಳನ್ನು ಹೊರತರು ಸಾಧ್ಯವಾಗಿದೆ. ಎಲ್ಲ ವಯೋಮಾನದವರು ಅವರ ಆಸಕ್ತಿ ವಿಷಯಗಳಿಗೆ ಅನುಗುಣವಾಗಿ ಪ್ರೋತ್ಸಾಹಿಸ ಬೇಕು ಹಾಗೂ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ಜಿಮ್ ಯಶ್ವಂತ್, ತಾರಕ ಪಂಕ್ಷನ್ ಹಾಲ್ ಮಾಲೀಕ ಕುಮಾರ್ ಅವರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಿ, ಶುಭಕೋರಿ ಮಾತನಾಡಿದರು.
ಜಿಮ್ ಯಶ್ವಂತ್, ತಾರಕ ಪಂಕ್ಷನ್ ಹಾಲ್ ಕುಮಾರ್, ರಮೇಶ್ ಕೋಟೆ, ಸಲೀಂ, ಆಟೋ ರಾಮ್ ಬಸಾಪುರ ಕಳಸ್ವಾಮಿ, ರವಿ, ಲೋಕೇಶ್, ಮಾದೇಶ್, ಪಾಷಾ, ಸೂರಿ, ಉಮಾಶಂಕರ್, ಶಿವು, ಗೋವಿಂದ್ ರಾಜ್, ಸುರೇಶ್, ಆಟೋ ರವಿ, ಕ್ರೀಡಾಪಟುಗಳು ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
– ಶಿವ ಕುಮಾರ