ತುಮಕೂರು – ನಗರದ 31ನೇ ವಾರ್ಡಿನ ನೃಪತುಂಗ ಬಡಾವಣೆ ಬಸ್ ನಿಲ್ದಾಣದ ಬಳಿ ಇರುವ ಗಂಗಾಧರೇಶ್ವರ ಪ್ರಾವಿಜನ್ ಸ್ಟೋರ್ ಹತ್ತಿರ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 118ನೇ ಜಯಂತಿಯನ್ನು ಆಚರಿಸಿ ದಾಸೋಹವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಮತ್ತು ಹಿರಿಯ ಸಮಾಜಸೇವಕ ಹೆಚ್.ಎಂ.ರವೀಶಯ್ಯ, ಕೆ.ಎಸ್.ಕುಮಾರ್, ಸಿ.ಎನ್.ರಮೇಶ್, ಜಗದೀಶ್, ಆರ್.ಎಂ.ಶಿವಕುಮಾರ್, ವೀರಭದ್ರಪ್ಪ, ರಾಜಶೇಖರ್, ಮೋಹನ್ಕುಮಾರ್, ಷಡಕ್ಷರಿ, ಸಿದ್ದಲಿಂಗಪ್ಪ, ತರಕಾರಿಮಹೇಶ್, ಶಶಿಶೇಖರ್, ನಂಜರಾಜ್, ವಿನಾಯಕ ರಘು, ರಾಜು, ಷಣ್ಮುಖಸ್ವಾಮಿ, ಉಮೇಶ್, ಮುಂತಾದವರು ಉಪಸ್ಥಿತರಿದ್ದರು.
– ಕೆ.ಬಿ. ಚಂದ್ರಚೂಡ