ತುಮಕೂರು-ಶಿವನಲ್ಲಿ-ಅಪಾರ-ಭಕ್ತಿ-ಇಟ್ಟು-ಸರಳ-ಪಾರದರ್ಶಕ- ಜೀವನ-ನಡೆಸಿದವರು-ದೇವರದಾಸಿಮಯ್ಯ-ತಹಸೀಲ್ದಾರ್-ಪಿ.ಎಸ್.ರಾಜೇಶ್ವರಿ

ತುಮಕೂರು: ಶಿವನಲ್ಲಿ ಅಪಾರ ಭಕ್ತಿ ಉಳ್ಳವರಾಗಿದ್ದ ಶಿವಶರಣ ದೇವರ ದಾಸಿಮಯ್ಯ ಅವರು ಸಾರಿದ ಸರಳ ಮತ್ತು ಪಾರದರ್ಶಕ ಜೀವನ ನಮ್ಮದಾಗಬೇಕು ಎಂದು ತುಮಕೂರು ತಾಲ್ಲೋಕು ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನೇಕಾರ ಸಮುದಾಯಗಳಾದ ದೇವಾಂಗ, ಕುರುಹೀನಶೆಟ್ಟಿ,ತೋಗಟವೀರ, ಪದ್ಮಶಾಲಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ನಮ್ಮ ದೈನಂದಿಕ ಚಟುವಟಿಕೆಗಳಲ್ಲಿ ಹೇಗೆ ವರ್ತಿಸಬೇಕು.ಜನಸಾಮಾನ್ಯರನ್ನು ಹೇಗೆ ಕಾಣಬೇಕು ಎಂಬುದನ್ನು ತಮ್ಮ ೧೫೦ಕ್ಕೂ ಹೆಚ್ಚು ವಚನಗಳ ಮೂಲಕ ಇಡೀ ನಾಡಿಗೆ ಮಾರ್ಗದರ್ಶನ ಮಾಡಿದ್ದಾರೆ.ಅಂತಹವರ ನಡೆ,ನುಡಿಯನ್ನು ನಾವುಗಳು ಅನುಸರಿಸುವ ಮೂಲಕ ಅವರ ಕನಸನ್ನು ನನಸು ಮಾಡುವತ್ತಾ ಗಮನಹರಿಸೋಣ. ಆ ಮೂಲಕ ಸುಂದರ ಸಮಾಜವೊಂದನ್ನು ಕಟ್ಟೋಣ ಎಂದರು.


ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,2015 ರಿಂದಲೂ ಸರಕಾರ ಅದ್ಯ ವಚನಕಾರರಾದ ದೇವರದಾಸಿಮಯ್ಯ ಅವರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ.ಇದು ಸರಕಾರಿ ಕಾರ್ಯಕ್ರಮವಾದ ಕಾರಣ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳ ಹೆಸರಿದೆ.ಆದರೆ ಒಬ್ಬರು ಕಾರ್ಯಕ್ರಮಕ್ಕೆ ಬಂದಿಲ್ಲ.ಇದಕ್ಕೆ ಕಾರಣ ನಮ್ಮಲ್ಲಿರುವ ಒಗ್ಗಟ್ಟಿನ ಕೊರತೆ.ರಾಜ್ಯದಲ್ಲಿ ಸುಮಾರು 27 ನೇಕಾರರ ವಿವಿಧ ಸಮುದಾಯಗಳಿವೆ.ತುಮಕೂರು ಜಿಲ್ಲೆಯಲ್ಲಿ ದೇವಾಂಗ,ಕುರುಹೀನಶೆಟ್ಟಿ,ಪದ್ಮಶಾಲಿ,ತೊಗಟವೀರ ನಾಲ್ಕು ಸಮುದಾಯಗಳಿದ್ದು,ನಮ್ಮ ನಡುವೆಯೇ ಒಗ್ಗಟ್ಟು ಕಾಣದಾಗಿದೆ.

ಇದೇ ಕಾರಣಕ್ಕೆ ರಾಜಕಾರಣಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳು, ಈಗ ಬರುವುದಿಲ್ಲ ಎಂದರೆ ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಒಗ್ಗೂಡಿದರೆ,ರಾಜಕಾರಣಿಗಳು ತಾವಾಗಿಯೇ ಹುಡುಕಿಕೊಂಡು ಬರುತ್ತಾರೆ. ಮುಂಬರುವ ಜಿ.ಪಂ.,ತಾ.ಪಂ. ಹಾಗು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಮುದಾಯಗಳ ಯುವಕರು ತಯಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

– ಕೆ.ಬಿ,ಚಂದ್ರಚೂಡ

Leave a Reply

Your email address will not be published. Required fields are marked *

× How can I help you?