ಮೂಡಿಗೆರೆ:ಗೋಣೀಬೀಡು ವ್ಯವಸಾಯ ಸಹಕಾರ ಬ್ಯಾಂಕಿನ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಗುರುವಾರ ನಡೆಯಿತು.
ಈ ವೇಳೆ ಬ್ಯಾಂಕಿನ ಅಧ್ಯಕ್ಷ ಎನ್.ಜೆ.ಜಯರಾಂ ಮಾತನಾಡಿ,ಸಹಕಾರ ಸಂಘ ಈ ಸಾಲಿನಲ್ಲಿ 95.37 ಕೋಟಿ ರೂ ವ್ಯವಹಾರ ನಡೆಸಿ 59.38 ಲಕ್ಷರೂ ನಿವ್ವಳ ಲಾಭ ಗಳಿಸಿದೆ. ಸಂಘದ ಷೇರು 1.58 ಕೋಟಿ,ಆಪದ್ಧನ 1.51ಕೋಟಿ ಒಟ್ಟು ನಿಧಿಗಳು 5.58ಕೋಟಿ, ಬ್ಯಾಂಕಿನ ಆಡಳಿತ ಸಮಿತಿಯಲ್ಲಿ 2017 ಮಂದಿ ಅಜೀವ ಸದಸ್ಯರಿದ್ದು ಬ್ಯಾಂಕ್ ಈ ಬಾರಿಯೂ “ಎ” ದರ್ಜೆಯಲ್ಲಿ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಸ್ವಂತ ಬಂಡವಾಳದಿoದ ಈ ಸಾಲಿನಲ್ಲಿ ಕೃಷಿ ಸಾಲ, ವ್ಯಾಪಾರ ಸಾಲ, ಆಭರಣ ಸಾಲ,ದಾಸ್ತಾನು ಸಾಲ, ವಾಹನ ಸಾಲ,ವೇತನ ಆಧಾರ ಸಾಲ,ಪಿಗ್ಮಿ ಸಾಲ ರಸಗೊಬ್ಬರ ಸಾಲ, ಕೆಸಿಸಿ ಬೆಳೆ ಸಾಲ, ಮಧ್ಯಾವಧಿ ಸಾಲ ಸೇರಿ
ಒಟ್ಟು 13.84 ಕೋಟಿ ರೂ ಸಾಲ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಹಾಗು 2023-24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ಮಕ್ಕಳನ್ನು ಗೌರವಿಸಿ ನಗದು ಸಹಿತ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ವ್ಯವಸಾಯ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ವಿ.ಕೆ.ಶಿವೇಗೌಡ,ನಿರ್ಧೇಶಕರಾದ ಹೆಚ್.ಡಿ.ಸುಧಾಕರ್, ಜೆ.ಇ. ಆದರ್ಶ ಕುಮಾರ್,ಕೆ.ಆರ್.ದೀಪಕ್, ಜೆ.ಎಸ್.ಭಾಸ್ಕರ್, ಎಂ.ಆರ್.ಸುಮಾ, ಎನ್.ಬಿ.ಲಲಿತ, ಎಂ. ಅನೀಸ್,ಎಂ.ಬಿ.ನವೀನ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು.ಕೆ.ಶಿವಪ್ರಸಾದ್ ಮತ್ತಿತರರಿದ್ದರು.
.
…………………ವಿಜಯಕುಮಾರ್.ಮೂಡಿಗೆರೆ