ತುಮಕೂರು: ಬೆಂಗಳೂರಿನ ಸೆಂಟ್, ಕ್ಲಾರೆಟ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿರುವ ತುಮಕೂರು ಜಿಲ್ಲೆ ಸಿರಾ ತಾಲ್ಲೂಕು ಸೀಗಲಹಳ್ಳಿ ಗ್ರಾಮದ ಉಮಾ ರವರ ಪುತ್ರಿ ಚಂದನ ಜಿ.ವೈ ಪೆಬ್ರವರಿ 9ರಂದು ಬೆಂಗಳೂರು ಲಗ್ಗೆರೆಯ ಮೌಟ್ ಸೇನೋರಿಯ ಶಾಲೆಯಲ್ಲಿ ನಡೆದ ಪೈರ್ ಟೈಲ್ ಹೊಡೆಯುವ ಸ್ಪರ್ಧೆಯಲ್ಲಿ 28 ಸೆಂಕೆಂಡ್ ಗಳಲ್ಲಿ 29 ಪೈರ್ ಟೈಲ್ ಹೊಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ನುರಿತ ಕರಾಟೆ ತರಬೇತುದಾರರಾದ ಗಜರಾಜು ಪೈರ್ ಟೈಲ್ಸ್ ಹೊಡೆಯುವುದರ ಕುರಿತು ತರಬೇತಿ ನೀಡಿದ್ದರು. ಚಂದನಳ ಈ ವಿಶ್ವ ದಾಖಲೆಗೆ ಕಾಲೇಜು ಆಡಳಿತ ಮಂಡಳಿ ಮತ್ತು ಗಣ್ಯರು ಸನ್ಮಾನಿಸಿ ಗೌರವಿಸಿದ್ದಾರೆ.