ಮೈಸೂರು- ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ “ಚಿಂತನ” ಪುಸ್ತಕವನ್ನು ಇಂದು (೦೨.೦೪.೨೦೨೫) ಸಂಸ್ಥೆಯ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ದಿನೇಶ್, ಆಡಳಿತ ಮಂಡಳಿ ಸದಸ್ಯರಾದ ಶರತ್ ಎಸ್ ಭಾರಧ್ವಾಜ್, ಶೈಕ್ಷಣಿಕ ಸಲಹೆಗಾರರಾದ ಡಾ.ಸತ್ಯನಾರಾಯಣ, ಆಡಳಿತಾಧಿಕಾರಿ ಶ್ರೀಕಾಂತ್‌ಬೇವೂರ್, ಪ್ರಾಂಶುಪಾಲರಾದ ಸಿ.ಕೆ.ಅಶೋಕ್ ಕುಮಾರ್, ಚಿಂತನ ಸಂಚಿಕೆಯ ಸಂಪಾದಕರಾದ ಮನೋಜ್ ಕುಮಾರ್ ಎಸ್, ಉಪನ್ಯಾಸಕರಾದ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ರವರನ್ನು ಚಿತ್ರದಲ್ಲಿ ಕಾಣಬಹುದು.