ಕೆ.ಆರ್.ಪೇಟೆ:ಹೈನುಗಾರಿಕೆ ಗ್ರಾಮೀಣ ಭಾಗದ ರೈತರಿಗೆ ಅಕ್ಷಯ ಪಾತ್ರೆ ಇದ್ದಂತೆ ಎಂದು ಮನ್ಮುಲ್ ನಿರ್ದೇಶಕ ಹಾಗೂ ಶಾಸಕರಾದ ಹೆಚ್.ಟಿ ಮಂಜು ಹೇಳಿದರು.
ಅವರು ತಾಲೂಕಿನ ಶೀಳನೆರೆ ಹೋಬಳಿಯ ಚನ್ನಾಪುರ,ಬ್ಯಾಲದಕೆರೆ,ಚಟ್ಟೆನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ವಸಂತಪುರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು 365 ದಿನಗಳು ಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದಾರೆ.ಗ್ರಾಮೀಣ ಭಾಗದ ರೈತರು,ಮಹಿಳೆಯರು ಸಂಪೂರ್ಣವಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.ರಾಸುಗಳು ಆರೋಗ್ಯವಾಗಿದ್ದರೆ ಗುಣಮಟ್ಟದ ಹಾಲು ಸರಬರಾಜು ಆಗಿ ಸಹಕಾರ ಸಂಘ ಆರ್ಥಿಕವಾಗಿ ಸದೃಢವಾಗುತ್ತದೆ ಎಂದರು.
ಸಂಘದ ಪ್ರತಿಯೊಬ್ಬ ಸದಸ್ಯರು ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಸಂಘದ ಲಾಭ-ನಷ್ಟದ ಬಗ್ಗೆ ಆರೋಗ್ಯಕರ ಚರ್ಚೆ ಮಾಡಬೇಕು.ಸಂಘದಲ್ಲಿ ರಾಜಕೀಯ ಮಾಡದೆ ಸಂಘದ ಬಲವರ್ಧನೆಗೆ ಶ್ರಮಿಸಬೇಕು.ಹೆಚ್ಚು ಹಾಲು ಕೊಡುವ ಸಾಮರ್ಥ್ಯವುಳ್ಳ ವಿವಿಧ ತಳಿಯ ಜಾನುವಾರಗಳ ಬಗ್ಗೆ, ಜಾನುವಾರುಗಳ ಆರೋಗ್ಯ ನಿರ್ವಹಣೆಯಲ್ಲಿ ಸಮತೋಲನ ಪಶು ಆಹಾರದ ಮಹತ್ವ, ಜಾನುವಾರುಗಳಲ್ಲಿ ಬರುವ ರೋಗಗಳು ಹಾಗೂ ಹತೋಟಿ ಕ್ರಮಗಳು, ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ, ಸುಧಾರಿತ ಮೇವಿನ ಬೆಳೆಗಳ ಉತ್ಪಾದನೆ, ಜಾನುವಾರು ವಿಮೆ, ಶುದ್ಧ ಹಾಲು ಉತ್ಪಾದನೆ ಮಹತ್ವ, ಹಾಲಿನಲ್ಲಿರುವ ಘಟಕಗಳು ಮತ್ತು ಹಾಲಿನ ಮೌಲ್ಯವರ್ಧನೆ ಮತ್ತು ಹಾಲಿನಿಂದ ಬರುವ ವಿವಿಧ ಉತ್ಪನ್ನಗಳು ಮತ್ತು ಅವುಗಳ ಮಹತ್ವದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಸಂಘಗಳ ಮಾರ್ಗ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ ಈ ವರ್ಷದ ಆಯವ್ಯಯ ಮತ್ತು ಮುಂದಿನ ವರ್ಷದ ಬಜೆಟ್‌ನ್ನು ಮಂಡಿಸಿದರು.
ಸಭೆಯಲ್ಲಿ ,ವಸಂತಪುರ ಸಂಘದ ಅಧ್ಯಕ್ಷೆ ನಾಗಮಣಿ,ಉಪಾಧ್ಯಕ್ಷೆ ಲಕ್ಷ್ಮಿ, ನಿರ್ದೇಶಕರಾದ ಮಾಲತಿ, ಲಕ್ಷ್ಮಮ್ಮ, ರತ್ನಮ್ಮ, ನಾಗಮ್ಮ, ಪವಿತ್ರ, ಮಹಾಲಕ್ಷ್ಮಿ, ಲಲಿತಮ್ಮ, ಪ್ರೇಮಮ್ಮ, ಕಾರ್ಯದರ್ಶಿ ಸುಮಿತ್ರ, ಕವಿತಾ,ಗ್ರಾ.ಪಂ ಸದಸ್ಯ ಕೆಂಪೇಗೌಡ, ಶಿವೇಗೌಡ,ಚನ್ನಾಪುರ ಸಂಘದ ಅಧ್ಯಕ್ಷೆ ಚಿತ್ರ ಮಂಜುನಾಥ್, ಉಪಾಧ್ಯಕ್ಷೆ ನಿಲ ರಮೇಶ್, ನಿರ್ದೇಶಕರಾದ ಭಾರತಿ, ಮಹಾಲಕ್ಷ್ಮಿ, ಅನಿತ, ಲಕ್ಷ್ಮಮ್ಮ, ನಾಗಮ್ಮ, ಭಾರತಿ, ಅನುಷ, ಸಂಘದ ಕಾರ್ಯದರ್ಶಿ ಸೀಮಾ ಲೋಹಿತ್, ಹಾಲು ಪರೀಕ್ಷೆಕಿ ರಾಧ ಚನ್ನೇಗೌಡ,
ಗ್ರಾ. ಪಂ ಮಾಜಿ ಅಧ್ಯಕ್ಷ ಸಣ್ಣೆಗೌಡ, ಬ್ಯಾಲದಕೆರೆ ಸಂಘದ ಅಧ್ಯಕ್ಷೆ ವಿನೋಧ ಲೋಕೇಶ್, ಉಪಾಧ್ಯಕ್ಷೆ ಲಕ್ಷ್ಮಮ್ಮ ಚನ್ನೇಗೌಡ, ನಿರ್ದೇಶಕರಾದ ಪ್ರೇಮಾ, ವಿನೋದ, ಯಶೋಧ, ಭಾಗ್ಯ, ಸುಶೀಲ, ಸುಜಾತ, ಸುಧಾ, ನಾಗಮ್ಮ, ಕಾರ್ಯದರ್ಶಿ ಶೋಭ ಶಶಿಧರ್, ಹಾಲು ಪರೀಕ್ಷೆಕಿ ಆಶಾ, ಗ್ರಾ.ಪಂ ಸದಸ್ಯರಾದ ಅಶೋಕ್, ಸುಶೀಲಮ್ಮ, ಹಿರಿಯ ಮುಖಂಡರಾದ ಪಾಪೇಗೌಡ, ನಂಜೇಗೌಡ,ಚಟ್ಟೆನಹಳ್ಳಿ ಸಂಘದ ಅಧ್ಯಕ್ಷ ಸಣ್ಣಹನುಮೇಗೌಡ, ಉಪಾಧ್ಯಕ್ಷ ನಿಂಗೆಗೌಡ, ನಿರ್ದೇಶಕರಾದ ಸಿ. ಎನ್ ಕೃಷ್ಣಮೂರ್ತಿ, ಸಿ. ಎನ್ ಉದೇಶ, ಗುರುಪ್ರಸಾದ್,ಬೋರೇಗೌಡ, ರಮೇಶ್, ನಾಗರಾಜು, ಮೀನಾಕ್ಷಿ, ಸುಧಾ, ರಾಜೇಶ್ವರಿ, ಸಂಘದ ಕಾರ್ಯದರ್ಶಿ ಮಂಜೇಗೌಡ, ಹಾಲು ಪರೀಕ್ಷಕಿ ತಮ್ಮಣ್ಣಚಾರಿ,ಸೇರಿದಂತೆ ಗ್ರಾಮಸ್ಥರು ಇದ್ದರು.
———————————-ಮನು ಮಾಕವಳ್ಳಿ ಕೆ ಆರ್ ಪೇಟೆ