ಎಚ್.ಡಿ.ಕೋಟೆ: ತಾಲೂಕಿನ ಶಿರಮಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿದ ನಂಜನಗೂಡು ಶಾಸಕ ದರ್ಶನ್ ಧೃವನಾರಾಯಣ್ ಮಾತಾನಾಡಿ ಇಂದು ನೂತನವಾಗಿ ನಿರ್ಮಿಸಿರುವ ಅಂಬೇಡ್ಕರ್ ಭವನವನ್ನ ಸುಂದರವಾದ ಲೈಬ್ರರಿಯಾಗಿ ಮಾಡಿ ವಿಧ್ಯಾರ್ಥಿಗಳು ಹೆಚ್ಚು ಹೆಚ್ಚು ಓದಿ ಜ್ಞಾನ ಸಂಪಾದನೆ ಮಾಡಿ ಇದು ಅಂಬೇಡ್ಕರ್ ರವರ ಕನಸಾಗಿತ್ತು ಎಂದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಅನಿಲ್ ಚಿಕ್ಕಮಾದು ಮಾತಾನಾಡಿ ನನ್ನ ಅವದಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭವನವನ್ನ ಮತ್ತು ಅರವತ್ತಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನ ನಿರ್ಮಾಣ ಮಾಡಿಸಿದ್ದೆನೆ, ಯಾಕೆಂದರೆ ಅಂಬೇಡ್ಕರ್ ನೀಡಿದ ಮೀಸಲಾತಿ ಇಂದಲೇ ಟೀ ಮಾರುವವ ಈ ದೇಶದ ಪ್ರಧಾನಿ ಆಗಿದ್ದು ಮತ್ತೆ ನನ್ನಂತವನು ಕಿರಿಯ ವಯಸ್ಸಿನಲ್ಲಿ ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದು ಎಂದು ಅಂಬೇಡ್ಕರ್ ರವರನ್ನ ಸ್ಮರಿಸಿಕೊಂಡರು.

ಕಾರ್ಯಕ್ರಮ ಸಾನಿಧ್ಯವನ್ನ ಮಾತೆ ಗೌತಮಿ ಬಂತೇಜಿ ವಹಿಸಿ ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಪ್ರಾಸ್ತಾವಿಕ ಮಾತಾನಾಡಿ ಸೋಮ್ ಸುಂದರ್ ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾ ಸಭಾ ಅಧ್ಯಕ್ಷ ನರಸಿಂಹಮೂರ್ತಿ. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವೆಂಕಟಸ್ವಾಮಿ, ಮೈಮುಲ್ ಈರೇಗೌಡ, ನೂರಲಕುಪ್ಪೆ ಗ್ರಾ,ಪ ಅಧ್ಯಕ್ಷೆ ಸುನಿತಾ ಮಹದೇವ ಸ್ವಾಮಿ, ತಾಲೋಕು ಪಂಚಾಯತ ಮಾಜಿ ಸದಸ್ಯ ಸುಧಾ ಬಸವರಾಜ್, ಮುದ್ದುಮಲ್ಲಯ್ಯ, ಸರಗೂರುಶಿವಣ್ಣ, ಜೀವಿಕ ಬಸವರಾಜ್, ಚಿಕ್ಕಣ್ಣ, ಚೆನ್ನೆಗೌಡ, ಮಲ್ಲೇಗೌಡ, ಮಹದೇವ, ನಂದೀಶ್, ಸೋಮಶೇಖರ್. ಸತೀಶ್, ಲೋಕೇಶ್, ಶಿವರಾಜ್ ಹಾಜರಿದ್ದರು.
- ಶಿವಕುಮಾರ