ಮಧುಗಿರಿ-ಎಲ್ಲೋ ಒಂದು ಕಡೆ ಕೆಟ್ಟ ಘಟನೆಗಳು ನಡೆದಿವೆ,ಅಂತಹದ್ದೇ ಘಟನೆಗಳು ಇಲ್ಲಿಯೂ ನಡೆದರೆ ಎಂಬ ಆತಂಕವನ್ನು ಪೊಲೀಸ್ ಇಲಾಖೆ ಇಟ್ಟುಕೊಳ್ಳುವುದು ಬೇಡ.ಮಧುಗಿರಿ ಮಣ್ಣಿನ ಗುಣವೇ ಬೇರೆ.ಅನಾದಿಕಾಲದಿಂದಲೂ ಇಲ್ಲಿನ ಹಿಂದೂ ಮುಸಲ್ಮಾನ ಧರ್ಮದವರು ಅಣ್ಣತಮ್ಮಂದಿರಂತೆ ಬಾಳ್ವೆ ನಡೆಸುತ್ತಿದ್ದೇವೆ ಎಂದು ಪುರಸಭಾ ಅಧ್ಯಕ್ಷರಾದ ಜಿ.ಎ.ಮಂಜುನಾಥ್ ಲಾಲಪೇಟೆ ಹೇಳಿದರು.
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಡಿ ವೈ ಎಸ್ಪಿ ರಾಮಚಂದ್ರಪ್ಪನವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಧುಗಿರಿ ತಾಲೂಕು ಶಾಂತಿ ಸೌಹಾರ್ದತೆಗೆ ಹೆಸರಾದ ತಾಲೂಕು.ಇದಕ್ಕೆ ಮಧುಗಿರಿ ನಗರ ಹೊರತಾಗಿಲ್ಲ.ಎಲ್ಲ ಧರ್ಮದ ಮುಖಂಡರುಗಳು ಸಹ ಗಣಪತಿ ಸಮಾರಂಭಗಳು ಹಾಗು ಈದ್ ಮಿಲಾದ್ ನಲ್ಲೂ ಗಲಭೆಗಳಾಗಲು ಅವಕಾಶ ನೀಡದ ಹಾಗೆ ಎಚ್ಚರಿಕೆ ವಹಿಸಲಿದ್ದೇವೆಂದು ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಿನ ಹಲವಾರು ಹಿಂದೂ ಸಂಘಟನೆಗಳ ಹಾಗು ಮುಸಲ್ಮಾನ ಸಮುದಾಯದ ಮುಖಂಡರುಗಳು ಹಾಜರಿದ್ದರು.
——————ಸುದರ್ಶನ್ ಮಧುಗಿರಿ