ಕೊರಟಗೆರೆ:– ತಾಲೂಕಿನ ಸಿ. ಎನ್. ದುರ್ಗ ಹೋಬಳಿಯ ತೋವಿನಕೆರೆ ಗ್ರಾಮ ಪಂಚಾಯತಿ ಯಲ್ಲಿ ಅಧ್ಯಕ್ಷರಾದ ಗಿರಿಜಮ್ಮ ರಾಮಕೃಷ್ಣಯ್ಯ ರವರ ಅಧ್ಯಕ್ಷತೆಯಲ್ಲಿ ಸಂತೆಯ ಸುಂಕ ಹರಾಜು ಪ್ರಕ್ರಿಯೆಯನ್ನು ಸಾರ್ವಜನಿಕರ ಗಮನಕ್ಕೆ ತಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಾಡಲಾಗಿತ್ತು.
ವಾರಕ್ಕೊಮ್ಮೆ ನಡೆಯುವ ಶುಕ್ರವಾರದ ಸಂತೆಯ ಸುಂಕ ವಸೂಲಿಯ ಸಭೆಯನ್ನು ತೋವಿನಕೆರೆ ಸಂತೆಯ ಆಜು- ಬಾಜಿನ ಸಮಸ್ಯೆಗಳನ್ನು ಚರ್ಚೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿಗೆ ಒಳಪಡುವ ಅಂಗಡಿಗಳಿಗೆ ಹಾಗೂ ರಸ್ತೆಯ ಪಕ್ಕದಲ್ಲಿರುವ ಅಂಗಡಿಗಳಿಗೆ ಮಾತ್ರ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಸೇರಿ ಹಲವಾರು ವಿಷಯಗಳನ್ನು ಚರ್ಚೆ ಮಾಡಲಾಗಿತ್ತು. ಸುಂಕ ನೀಡದಿರುವ ಅಂಗಡಿಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ನೋಟಿಸ್ ಕೊಡಬೇಕು ಎಂದು ಹೇಳಿದರು.
ಸೊಪ್ಪು. ತರಕಾರಿ. ದಿನಸಿ ಅಂಗಡಿ. ರೈತರ ಸಾಮಗ್ರಿಗಳು. ಹಣ್ಣು ಅಂಗಡಿ. ಗಳಿಗೆ ನಿಗದಿತ ಸುಂಕ ನೀಡಬೇಕು ಹಾಗೂ ಮಾಂಸ ಮಾರಾಟ ಮಾಡುವ ಅಂಗಡಿಗಳಿಗೆ ಹೆಚ್ಚಿನ ಸುಂಕ ಹೆಚ್ಚು ಮಾಡಬೇಕು ಎಂದು ಚರ್ಚೆ ನಡೆಸುತ್ತಾ ರೈತರು ಬೆಳೆದಿರುವ ಬೆಳಗಳಿಗೆ ಮೊದಲು ಅವಕಾಶ ಕಲ್ಪಿಸಬೇಕು ಎಂದು ಹೇಳುತ್ತಾ ಹರಾಜು ಕೂಗು ಪ್ರಾರಂಭ ಮಾಡಿದರು ಮೊದಲು ಒಂದು ಸಾವಿರ ಹಣ ಮುಂಗಡವಾಗಿ ಠೇವಣಿ ಕಟ್ಟಬೇಕು ನಂತರ ಹರಾಜು ಕೂಗಬಹುದೆಂದು ನಿಯಮ ಹೇಳಿದರು ಹರಾಜು ಕೂಗಿದವರಿಗೆ ಠೇವಣಿ ವಾಪಸ್ಸು ನೀಡುವುದಿಲ್ಲ ಇದು ಆಗದಿಲ್ಲ ಅವರಿಗೆ ಠೇವಣಿ ವಾಪಸ್ಸು ನೀಡುತ್ತೇವೆ ಎಂದು ಹೇಳುತ್ತಾ. ನಂತರ ಎಂಟು ಜನ ರೈತರು ಠೇವಣಿ ಕಟ್ಟಿದ ನಂತರ ಇಂದಿನ ವರ್ಷ 42,000ಗಳಿಗೆ ಹರಾಜು ಕೂಗಲಾಗಿತ್ತು. ಈ ವರ್ಷ 2025- 26 ನೇ ಸಾಲಿನ ಹರಾಜನ್ನು ಪ್ರಾರಂಭ ಮಾಡಿ ನಡೆದ ಹರಾಜು 81,000ರೂ ಗಳಿಗೆ ಗಿರೀಶ್ ರವರಿಗೆ ಹರಾಜು ಬಿಟ್ಟು ಕೊಡಲಾಗಿತ್ತು.

ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ, ಲಕ್ಷ್ಮಿ ನಾರಾಯಣ್. ಲಿಂಗರಾಜು. ಮಾರುತಿ. ಕಾಂತರಾಜು. ಗ್ರಾಂ.ಪ. ಸದಸ್ಯರಾದ ನಾಗರಾಜಪ್ಪ. ಚಿಕ್ಕ ಹನುಮಯ್ಯ. ಗಂಗರಾಜು. ಮರಿಯಪ್ಪ. ಶ್ರೀಧರ್. ಉಮೇಶ್. ತಿಮ್ಮಣ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿ ಜನರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಹಾಜರಿದ್ದರು.
– ನರಸಿಂಹಯ್ಯ ಕೋಳಾಲ