ಎಚ್.ಡಿ.ಕೋಟೆ-ಸರ್ಕಾರಿ-ಜಾಗ-ಗುತ್ತಿಗೆ-ಪಡೆದ-ಕಂಪನಿಯಿಂದ- ಅವ್ಯವಹಾರ-ಆರೋಪ

ಎಚ್.ಡಿ.ಕೋಟೆ: ತಾಲೂಕಿನ ಸರ್ಕಾರಿ ಜಮೀನಿ‌ನನ್ನು ಗುತ್ತಿಗೆ ಪಡೆದ ಖಾಸಗಿ ಕಂಪನಿಯವರು 90ಕೋ.ರೂ. ಗಳ ಅಧಿಕ ಸಾಲ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಈ ಅಕ್ರಮದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಲಾಗುವುದು ಎಂದು ವಕೀಲ ಬಾಲಚಂದ್ರ ತಿಳಿಸಿದರು.

ಪಟ್ಟಣದ ಬೆಳಕು ಲಾ ಅಸೋಸಿಯೇಷನ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಕತ್ತಾ ಮೂಲದ ಸುಭಾಷ್ ಪವರ್ ಕಾರ್ಪೋರೇಷನ್ ಕಂಪನಿ ತಾಲೂಕಿನ ಕಬಿನಿ ಜಲಾಶಯದಲ್ಲಿ 13 ಎಕರೆ ನೀರಾವರಿ ಇಲಾಖೆಯ ಜಮೀನನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿತ್ತು. ಸರ್ಕಾರಿ ಜಮೀನನ್ನು ಪರಭಾರೆ ಮಾಡುವಂತಿಲ್ಲ ಇಷ್ಟಿದ್ದರೂ ಪ್ರಭಾವ ಬಳಸಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಾಲ ಪಡೆದಿದ್ದಾರೆ ಎಂದು ಆರೋಪಿಸಿದರು.

ಈ ಅಕ್ರಮದ ಬಗ್ಗೆ ತಾಲೂಕಿನ ಕಂದಾಯ ಅಧಿಕಾರಿಗಳನ್ನು‌ ಪ್ರಶ್ನಿಸಿದರೆ ಕೈ ತಪ್ಪಿನಿಂದ ಆರ್ ಟಿ‌ಸಿ ಯಲ್ಲಿ ಹೆಸರು ಬದಲಾವಣೆಯಾಗಿದೆ. ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಸಮಜಾಯಿಸಿ ಕೊಡುತ್ತಿದ್ದಾರೆ. ಆದರೆ, 2023ರ ನವೆಂಬರ್ ನಲ್ಲಿ ಸರಗೂರು ತಹಸಿಲ್ದಾರ್ ರಿಗೆ ಸುಭಾಷ್ ಪವರ್ ಕಾರ್ಪೋರೇಷನ್ ಕಂಪನಿಯಿಂದ ಪತ್ರ ಬರೆದು ಸ್ವಾಧೀನದಾರರ ಹೆಸರನ್ನು ತಿದ್ದುಪಡಿ‌ ಮಾಡಬೇಕೆಂದು‌‌ ಅರ್ಜಿ ಸಲ್ಲಿಸಿ ಸರ್ಕಾರದ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿ ಹೆಸರು ಬದಲಾವಣೆ ಮಾಡಿದ್ದಾರೆ ಎಂದು‌ ದೂರಿದರು.

ಸ.ನಂ 160, 161, 162ರಲ್ಲಿ ಆರ್ ಟಿ‌ ಸಿಯಲ್ಲಿ ಹೆಸರು‌ ಬದಲಾವಣೆಯಾದ ನಂತರ ಎಸ್ ಬಿ‌ ಐ ಬ್ಯಾಂಕಿನಲ್ಲಿ ಹಾಗೂ ಐಡಿಬಿಐ ಬ್ಯಾಂಕಿ‌ನಲ್ಲಿ 90 ಕೋ,ರೂ, ಅಧಿಕ ಸಾಲ ಪಡೆದಿದ್ದಾರೆ. ಸರ್ಕಾರದ ‌ಆಸ್ತಿಯಲ್ಲಿ ಇಷ್ಟೊಂದು ಸಾಲ ಪಡೆಯಲು ಸಾಧ್ಯವೇ ಎಂದು‌ ಪ್ರಶ್ನಿಸಿದರಲ್ಲದೆ ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಹೋರಾಟಗಾರ ನಿವೃತ್ತ ಪೊಲೀಸ್ ಅಧಿಕಾರಿ ದೊರೆಸ್ವಾಮಿ ಮಾತನಾಡಿ, ಕಬಿನಿ ಜಲಾಶಯದ ಶುಭಾಷ್ ಪವರ್ ಕಂಪನಿಯಲ್ಲಿ ಇನ್ನಷ್ಟು ಅಕ್ರಮ ನಡೆದಿದೆ. ಜಲಾಶಯದ ತಳಭಾಗದ ದುರಸ್ತಿ ಸರಿಪಡಿಸುವಲ್ಲಿಯೂ‌ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತನಿಖೆ ನಡೆಸಬೇಕು. ಯಾರೇ ತಪ್ಪುತಸ್ಥರಿದ್ದರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಯಶಂಕರ್ ಇದ್ದರು.

Leave a Reply

Your email address will not be published. Required fields are marked *

× How can I help you?