ಕೆ.ಆರ್.ಪೇಟೆ-ಪಟ್ಟಣದ ಕದಂಬ ಪಿ.ಯು. ಕಾಲೇಜಿಗೆ ಶೇ.97.69ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ 130ಮಕ್ಕಳ ಪೈಕಿ 127ಮಂದಿ ಉತ್ತೀರ್ಣ ಹೊಂದಿದ್ದಾರೆ. 30ಡಿಸ್ಟಿಂಕ್ಷನ್, 90ಪ್ರಥಮ ಶ್ರೇಣಿ, 7 ದ್ವಿತೀಯ ಸ್ಥಾನ ಪಡೆದಿದ್ದಾರೆ. ಕದಂಬ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಾಲ್ಲೂಕಿನ ಸಿಂಧುಘಟ್ಟ ಗ್ರಾಮದ ರೈತ ದಂಪತಿಗಳಾದ ಮಂಜೇಗೌಡ ಮತ್ತು ಕಮಲ ದಂಪತಿಗಳ ಸುಪುತ್ರಿ ಎಸ್.ಎಂ.ಅಂಜಲಿ 584ಅಂಕಗಳನ್ನು ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ತಾಲ್ಲೂಕು ಟಾಪರ್ ಆಗಿ ಕಾಲೇಜಿಗೆ ಕೀರ್ತೀ ತಂದಿರುವ ವಿದ್ಯಾರ್ಥಿನಿ ಅಂಜಲಿ ಅವರನ್ನು ಕಾಲೇಜಿನ ಪ್ರಾಂಶುಪಾಲ ಎಸ್.ಮಂಜುನಾಥ್, ಕಾರ್ಯದರ್ಶಿ ಕಿರಣ್.ಡಿ.ಜೆ, ಉಪನ್ಯಾಸಕರಾದ ಎಸ್.ಶಾಂತಕುಮಾರ್, ಶಿಲ್ಪ., ಆದರ್ಶ, ಸುನಿಲ್, ಕರುಣಾನಿಧಿ ಸೇರಿದಂತೆ ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ.
– ಶ್ರೀನಿವಾಸ್ ಆರ್.