ಮೈಸೂರು: ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಮಹಿಳಾ ಮತದಾರರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಹೇಳಿದ್ದಾರೆ.
‘ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿ ಕಾರ್ಡ್‌ನಲ್ಲಿ ಪ್ರತಿ ಮನೆಯ ಮಹಿಳೆಗೆ ₹ 2,000 ನೀಡಲಾಗುವುದು ಎಂಬ ಭರವಸೆ ಮಹಿಳಾ ಮತದಾರರು ಪಕ್ಷವನ್ನು ಬೆಂಬಲಿಸಲು ಕಾರಣವಾಗಿದೆ’ ಎಂದು ಪತ್ರಿಕೆ ಹೇಳಿಕೆ ನೀಡಿದ್ದಾರೆ .
‘ಗ್ಯಾರಂಟಿ ಕಾರ್ಡ್‌ನಲ್ಲಿ ನೀಡಿರುವ ಭರವಸೆಗಳ ಬಗ್ಗೆ ಬಿಟ್ಟಿ ಭಾಗ್ಯ ಎಂದು ಬಿಜೆಪಿಯವರು ಟೀಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ. ಬಹುರಾಷ್ಟ್ರೀಯ ಕಂಪೆನಿಗಳ, ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದಾಗ, ದೊಡ್ಡ ಮೊತ್ತದ ರಿಯಾಯಿತಿ ನೀಡಿದಾಗ ಟೀಕಿಸದ ಬಿಜೆಪಿ ಮುಖಂಡರು ಬಡವರಿಗೆ ಸೌಲಭ್ಯ ಕೊಡಲು ಹೊರಟರೆ ವ್ಯಂಗ್ಯವಾಗಿ ಮಾತನಾಡುತ್ತಿರುವುದು ಆ ಪಕ್ಷದ ಬೌದ್ಧಿಕ ದಿವಾಳಿತನದ ಸಂಕೇತವಾಗಿದೆ’ ಎಂದು ಟೀಕಿಸಿದರು.
ನಗರವ್ಯಾಪ್ತಿಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತದಾರರು ಬೆಂಬಲಿಸಿದ್ದಾರೆ. ಹಿಂದಿನ ಸಂದರ್ಭಗಳಲ್ಲಿ ನಗರ ಪ್ರದೇಶದಲ್ಲಿ ಬಿಜೆಪಿಗೆ ಬೆಂಬಲವಿತ್ತು. ಹಲವು ಅಪಪ್ರಚಾರಗಳ ನಡುವೆಯೇ ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟು ಮತ ಚಲಾಯಿಸಿದ್ದಾರೆ’ ಎಂದು ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಹೇಳಿದರು.