ತುಮಕೂರು:ಹಿರಿಯ ಸಮಾಜ ಸೇವಕ,ವಕೀಲರಾದ ಮಹೇಶ್ ಹಿರೇಹಳ್ಳಿರವರು ಏ 11 ರಂದು ತುಮಕೂರು ಜಿಲ್ಲಾ ವಕೀಲರ ಸಂಘದಲ್ಲಿ 2025-27ನೇ ಸಾಲಿನ ಕಾರ್ಯಕಾರಿ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ.
ಮಹೇಶಹಿರೇಹಳ್ಳಿ ರವರು ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾರ್ಥಿಗಳ ನಾಯಕ,ವಿದ್ಯಾರ್ಥಿ ಸಂಘಟನೆಯಲ್ಲಿ ಪಾಲ್ಗೊಂಡು 1999-2003 ರವರೆಗೆ 3 ವರ್ಷ ವಿದ್ಯಾರ್ಥಿ ಜನತಾದಳದ ಅಧ್ಯಕ್ಷನಾಗಿ,ನಂತರ ಯುವ ಜನತಾದಳದ ಅಧ್ಯಕ್ಷನಾಗಿ,2006-07ರಲ್ಲಿ ತುಮಕೂರು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಆಗಿ,ನಂತರ ಯುವ ಜನತಾದಳದ ಕಾರ್ಯಾಧ್ಯಕ್ಷನಾಗಿ,ಜನ ಮೆಚ್ಚುವಂತಹ ಉತ್ತಮ ಸಮಾಜಸೇವೆಯೊಂದಿಗೆ ತುಮಕೂರು ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕನಾಗಿ,ಸಹಕಾರಿಯಾಗಿ,ಹೆಚ್.ಡಿ.ಕುಮಾರಸ್ವಾಮಿ ಮತ್ತು ಹೆಚ್.ಡಿ.ದೇವೇಗೌಡರು ಅಂದಿನ ಗ್ರಾಮಾಂತರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರುಗಳ ಸಹಕಾರದಿಂದ,ಆಶೀರ್ವಾದದಿಂದ 2016ರಲ್ಲಿ ಯುವ ಜನತಾದಳದ ಅಧ್ಯಕ್ಷನಾಗಿ,ಸಮಾಜಸೇವೆಗಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಯಾದ ಸುವರ್ಣಶ್ರೀ ಪ್ರಶಸ್ತಿ ದೊರೆತಿದೆ, ಈಗ ಪ್ರಸ್ತುತ ಹಲವು ಸಹಕಾರಿ ಸಂಘದ ನಿರ್ದೇಶಕನಾಗಿ,ಕಲೆಗೆ ಬೆಲೆ ನೀಡಲು ಮಾತೃಶ್ರೀ ಕಲಾ ಸಂಘವನ್ನು ಕಟ್ಟಿ ಬೆಳೆಸಿ ತನ್ನ ಸ್ವಂತ ದುಡಿದ ಹಣದಲ್ಲಿ ಸುಮಾರು ೮ ನಾಟಕಗಳನ್ನು ಪ್ರದರ್ಶಿಸಿ ಆ ನಾಟಕಗಳಲ್ಲಿ ಭೀಮನ ಪಾತ್ರವನ್ನು ಸಹ ಮಾಡಿರುತ್ತಾರೆ.

ಮಹೇಶ ಹಿರೇಹಳ್ಳಿರವರು 2003ರಲ್ಲಿ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ನಂತರ ಮಾಜಿ ಶಾಸಕರು ಮತ್ತು ಪ್ರಸಿದ್ಧ ಹಿರಿಯ ವಕೀಲರಾದ ಹೆಚ್.ನಿಂಗಪ್ಪನವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿ ನಂತರ 2007-08ರಲ್ಲಿ ಹಿರಿಯ ವಕೀಲರಾದ ಹಾಲನೂರು ಅನಂತ್‌ರವರೊಂದಿಗೆ ಮಾತೃಶ್ರೀ ಲಾ ಛೇಂಬರ್ಸ್ ಎಂಬ ಸ್ವಂತ ಕಚೇರಿಯನ್ನು ಪ್ರಾರಂಭಿಸಿ ಕಕ್ಷಿದಾರರಿಗೆ ಉತ್ತಮ ಕಾನೂನು ಸೇವೆಯನ್ನು ನೀಡುತ್ತಾ ಜಿಲ್ಲೆಯಲ್ಲಿ ಉತ್ತಮ ಹೆಸರನ್ನು ಪಡೆದು ಜಿಲ್ಲಾ ವಕೀಲರ ಸಂಘದಲ್ಲಿ ಈಗ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದು ಹಿರಿಯ,ಕಿರಿಯ,ಮಹಿಳಾ ವಕೀಲರಿಗೆ ಪ್ರಾರ್ಥಿಸುವುದೇನೆಂದರೆ 24*4ವಕೀಲರ ಕೆಲಸಗಳನ್ನು ನಿರ್ವಹಿಸುತ್ತೇನೆ, ಅದು ಯಾವುದೇ ಕೆಲಸವಿರಲಿ ನ್ಯಾಯಾಲಯದ ಆವರಣದಲ್ಲಿರಲಿ, ಯಾವುದೇ ಇಲಾಖೆಯ ಕೆಲಸವಿರಲಿ ನಾನು ಸಂಪೂರ್ಣವಾಗಿ ತನ್ನನ್ನು ತಾನು ಸಮರ್ಪಿಸಿಕೊಂಡು ನಿಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತೇನೆ, ಆಡದೆ ಮಾಡುವವನು ರೂಢಿಯೊಳಗೆ ಉತ್ತಮನು,ಆಡಿ ಮಾಡುವವನು ಮಧ್ಯಮನು ಆಡಿಯೂ ಮಾಡದವನು ಅಧಮನು,ಹೇಳದೇ ಮಾಡುವವನು ರೂಢಿಯಲ್ಲಿ ಉತ್ತಮನು ಎನ್ನುವ ಸರ್ವಜ್ಞನ ವಚನದಂತೆ ವಕೀಲರ ಸಂಘದಲ್ಲಿ ಕೆಲಸ ಮಾಡಿ ತೋರಿಸುವೆ ಎಂದು ಮಹೇಶ್ ಹೇಳುತ್ತಾರೆ.

ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,ಅಮಲಾಪುರ,ತುಮಕೂರು ವಿಶ್ವವಿದ್ಯಾನಿಲಯದ ಜಾಗವನ್ನು ನ್ಯಾಯಾಲಯಕ್ಕೆ ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವೆ,ವಕೀಲರು ಮನೆಯಿಂದ ಊಟ ತೆಗೆದುಕೊಂಡು ಬಂದು ತಮ್ಮ ಕಾರುಗಳಲ್ಲಿ ಊಟ ಮಾಡುತ್ತಾರೆ ಆದ್ದರಿಂದ ನಾನು ನನ್ನ ಸ್ವಂತ ಹಣದಿಂದ ಊಟ ಮಾಡುವುದಕ್ಕಾಗಿಯೇ ಕುಟೀರವನ್ನು ನಿರ್ಮಿಸಿ ಶುದ್ಧ ಕುಡಿಯುವ ನೀರನ್ನು ನೀಡುತ್ತೇನೆ, ಇ-ಲೈಬ್ರರಿ,ಯುವ ವಕೀಲರಿಗೆ ಪ್ರತಿ ತಿಂಗಳು ಸೆಮಿನಾರ್ ಗಳನ್ನು ಮಾಡುವುದು,ಸ್ವಂತ ಖರ್ಚಿನಲ್ಲಿ ಯುವ ವಕೀಲರು ನ್ಯಾಯಧೀಶರ ಪರೀಕ್ಷೆ,ಎಪಿಪಿ ಪರೀಕ್ಷೆಗಳನ್ನು ಬರೆಯಲು ತರಗತಿಗಳನ್ನು ನಡೆಸಿ ಅವರಿಗೆ ಸೂಕ್ತ ತರಬೇತಿಯನ್ನು ನೀಡಲು ಯೋಜನೆ ರೂಪಿಸುತ್ತೇನೆ,ವಕೀಲರಿಗೆ ಸರ್ಕಾರದ ಅನುದಾನದಲ್ಲಿ ಜಿಮ್, ಡೈವಿಂಗ್ ಲೈಸೆನ್ಸ್,ಪಾಸ್ ಪೋರ್ಟ್,6 ತಿಂಗಳಿಗೊಮ್ಮೆ ವಕೀಲರುಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುವುದು,ವಿಮೆ ಮಾಡಿಸಿಕೊಡುವುದು,ವಕೀಲರಿಗೆ ನೆಮ್ಮದಿ ಜೀವನ ನಡೆಸಲು ಬೇಕಾಗುವ ಅವಶ್ಯ ಏನಿದೆ ಅವುಗಳನ್ನು ಮಾಡಿಕೊಡಲು ನಾನು ತಯಾರಿದ್ದೇನೆ.

ವಕೀಲರ ಏಳ್ಗೆಗಾಗಿ ಸದಾ ಶ್ರಮಿಸುತ್ತೇನೆ ಎಂದು ಹೇಳುತ್ತಾ ಕೋವಿಡ್ ಕಾಲದಲ್ಲಿ ಅಂದಿನ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಮಾಡಿಸಿದ ದಿನಸಿ ಕಿಟ್ ಗಳನ್ನು ವಕೀಲರು ಮತ್ತು ಗ್ರಾಮಾಂತರ ಜನರಿಗೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದಿನಸಿ ವಸ್ತುಗಳನ್ನು,ತರಕಾರಿ ಹಣ್ಣುಗಳನ್ನು ನೀಡಿದ್ದನ್ನು ಮಹೇಶ್ ರವರ ಸೇವೆಯನ್ನು ವಕೀಲರು ಮತ್ತು ಜನ ಸದಾ ಸ್ಮರಿಸುತ್ತಾರೆ
- ಕೆ.ಬಿ.ಚಂದ್ರಚೂಡ