ಮೈಸೂರು:ಇಂದಿನ ದಿನಗಳಲ್ಲಿ ಜನರಲ್ಲಿ ಭಕ್ತಿ ಕಡಿಮೆಯಾಗುತ್ತಿದೆ.ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಲು ಜನ ಹಿಂದೆ ಮುಂದೆ ನೋಡುವ ಸ್ಥಿತಿಯಿದೆ.ನಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯಗಳನ್ನು ಯುವ ಪೀಳಿಗೆ ಮರೆಯಬಾರದು.ಹಬ್ಬ ಹರಿದಿನಗಳನ್ನು ಸರ್ವ ಧರ್ಮದವರು ಜತೆಯಾಗಿ ಸೇರಿ ಆಚರಿಸಬೇಕು.ಶ್ರದ್ಧಾ ಭಕ್ತಿಯಿಂದ ಹಬ್ಬಗಳನ್ನು ಆಚರಿಸುವದರಿಂದ ಜನರಲ್ಲಿ ಸಾಮರಸ್ಯ ಹೆಚ್ಚುತ್ತದೆ ಎಂದು ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಅಧ್ಯಕ್ಷರಾದ ಲಿಂಗರಾಜು ಹೇಳಿದರು.
ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಸಮೃದ್ಧಿ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಆನ್ಲೈನ್ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ನಗರ ಬಿಜೆಪಿ ಉಪಾಧ್ಯಕ್ಷರಾದ ಹೇಮನಂದೀಶ್ ಮಾತನಾಡಿ ಮನೆ ಮುಂದೆ ರಂಗೋಲಿ ಬಿಡಿಸುವುದು ಶುಭ ಸೂಚನೆಯ ಸಂಕೇತ.ರಂಗೋಲಿಯನ್ನು ದಾಟಿಕೊಂಡು ಹೊರಗೆ ಹೋದರೆ ಶುಭ ಎಂಬ ಮಾತಿದೆ.ರಂಗೋಲಿ ಸಂಸ್ಕೃತಿಯೇ ಅಳಿಸಿಹೋಗುತ್ತಿರುವ ಈ ಸಂದರ್ಭದಲ್ಲಿ ಸಮೃದ್ಧಿ ಟ್ರಸ್ಟ್ ನವರು ನಡೆಸಿರುವ ಈ ಸ್ಪರ್ಧಾ ಕಾರ್ಯಕಮಕ್ಕೆ ಹೆಚ್ಚು ಅರ್ಥವಿದೆ ಎಂದರು.
ಅನ್ನಪೂರ್ಣ ಐ ಆಸ್ಪತ್ರೆಯ ಎಂ ಡಿ ಅಶ್ವತ್ ಕುಮಾರ್,ಮಾತನಾಡಿ ಹೆಣ್ಣಿಗೆ ಹಣೆಯಲ್ಲಿ ಕುಂಕುಮ ಸಿಂಧೂರ ಎಷ್ಟು ಮುಖ್ಯವೋ ಅದೇ ರೀತಿ ಮನೆಗೆ ರಂಗೋಲಿಯೂ ಮುಖ್ಯ.ರಂಗೋಲಿ ನಮ್ಮ ಭಾರತೀಯ ಸಂಪ್ರದಾಯದ ಪ್ರತೀಕ ಎಂದು ನುಡಿದರು.
ಅನ್ನಪೂರ್ಣ ಐ ಆಸ್ಪತ್ರೆಯ ಎಂ ಡಿ ಅಶ್ವತ್ ಕುಮಾರ್,ಮಾತನಾಡಿ ಹೆಣ್ಣಿಗೆ ಹಣೆಯಲ್ಲಿ ಕುಂಕುಮ ಸಿಂಧೂರ ಎಷ್ಟು ಮುಖ್ಯವೋ ಅದೇ ರೀತಿ ಮನೆಗೆ ರಂಗೋಲಿಯೂ ಮುಖ್ಯ.ರಂಗೋಲಿ ನಮ್ಮ ಭಾರತೀಯ ಸಂಪ್ರದಾಯದ ಪ್ರತೀಕ ಎಂದು ನುಡಿದರು.
ಆನ್ಲೈನ್ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ, ವಿಮಲಾ,ವಿಜಯ,ಪುಟ್ಟಮನ್ನಿ,ಗೌರಿ,ಭಾಗ್ಯ,ಅರ್ಪಿತ ಸಂದೀಪ್,ಶಕುಂತಲಾ,ಕವಿತಾ ವೀರಭದ್ರ,ದರ್ಶಿನಿ ಎಸ್ ಗೌಡ, ಬಹುಮಾನ ಪಡೆದು ಸಂತಸ ವ್ಯಕ್ತಪಡಿಸಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಅಥರ್ವ ಸ್ಕಿಲ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪ,ಸಮೃದ್ಧಿ ಟ್ರಸ್ಟ್, ಅಧ್ಯಕ್ಷರಾದ ಸಹನಗೌಡ,ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು,ಹಾಗೂ ಇನ್ನಿತರರು ಇದ್ದರು.
—————–ಮಧುಕುಮಾರ್