ಅರಕಲಗೂಡು- ತಾಲೂಕು ಸಂತೆಮರೂರು ಗ್ರಾಮದಲ್ಲಿ 2025-26 ಸಾಲಿನ ಶೈಕ್ಷಣಿಕ ಸಾಲಿನ ದಾಖಲಾತಿ ಉತ್ತಮ ಪಡಿಸುವ ಸಲುವಾಗಿ ಈಗಿನಿಂದಲೇ ಕೆಲವು ಕ್ರಮಗಳನ್ನ ತಾಲ್ಲೂಕಿನಾದ್ಯಂತ ಕೈಗೊಳ್ಳವ ಆಲೋಚನೆಯೊಂದಿಗೆ ಏ. 08 ರಂದು ದಾಖಲಾತಿ ಆಂದೋಲನ ಮತ್ತು ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನ ಪ್ರತೀ ಶಾಲೆಯಲ್ಲಿಯೂ ಹಮ್ಮಿಕೊಂಡು ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಿಸುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಡಲಾಯಿತು.

ಈ ವೇಳೆ ಸಂತೆಮರೂರು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ರವರು ಮುಖ್ಯೋಪಾಧ್ಯಾಯ ಓದೇಶ ಎಂ.ಎಸ್, ಶಿಕ್ಷಣ ಸಂಯೋಜಕ ಯೋಗೇಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಇಂದ್ರೇಗೌಡ ಎಂಎಲ್, ಸಹಸಿಕ್ಷಕ ಪಾಂಡುರಾಜನ್ ,ಓಬಳೇಶ್, ಮಹೇಶ್, ರೇಖಾ, ವಸಂತ ಕುಮಾರ್,ಮತ್ತು ಎಸ್ ಡಿ ಎಂ ಸಿ ಸದಸ್ಯರುಗಳು ಹಾಗೂ ಊರಿನ ಮುಖಂಡರು ವಿಶೇಷ ದಾಖಲಾತಿ ಆಂದೋಲನದಲ್ಲಿ ಭಾಗವಹಿಸಿದ್ದರು.
– ಶಿಶಿಕುಮಾರ