ತುಮಕೂರು-“ವಿದ್ಯಾರ್ಥಿಗಳು-ಆಸಕ್ತಿಯಿಂದ-ಕಲಿಕೆಯಲ್ಲಿ- ತೊಡಗಬೇಕು”-ಡಾ. ಟಿ.ಬಿ.ನಿಜಲಿಂಗಪ್ಪ.


ತುಮಕೂರು: ಆಧುನಿಕ ದಿನಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿಯು ಬೇರೆ ಕಡೆಗೆ ಹೆಚ್ಚಾಗುತ್ತಿದೆ ಆದ್ದರಿಂದ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ನಾವು ಯಾವುದನ್ನೇ ಕಲಿಯಬೇಕಾದರು ಆಸಕ್ತಿ ,ಶ್ರದ್ದೆ, ಏಕಾಗ್ರತೆ ಮುಖ್ಯವಾಗಿರಬೇಕು ಆಗ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಪ್ರಾಂಶುಪಾಲ ಡಾ.ಟಿ.ಬಿ. ನಿಜಲಿಂಗಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ದೊಡ್ಡ ನಾರವಂಗಲ ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ದತ್ತು ಗ್ರಾಮದಲ್ಲಿ ಎನ್.ಎಸ್.ಎಸ್. ಚಟುವಟಿಕೆಗಳ ಉದ್ಘಾಟನೆ ಮತ್ತು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಸಂಪೂರ್ಣವಾಗಿ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದೊಡ್ಡ ನಾರವಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಷ್ಪಲತಾ.ಎನ್.ನಟರಾಜ್ ರವರು ಮಾತನಾಡುತ್ತಾ ಎನ್.ಎಸ್.ಎಸ್ ಘಟಕವು ಸಮಾಜಮುಖಿ ಕೆಲಸವನ್ನು ಮಾಡುವ ಮೂಲಕ ಸಮಾಜದಲ್ಲಿ ಸಹಬಾಳ್ವೆಯನ್ನು ಮೂಡಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು. ಐಕ್ಯೂಎಸಿ ಸಲಹೆಗಾರರಾದ ಪ್ರೊ.ಸಿ.ಎಸ್.ಸೋಮಶೇಖರಯ್ಯನವರು ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳ ಬಗ್ಗೆ ನೆನಪಿಸಿಕೊಂಡರು ವಿದ್ಯಾರ್ಥಿಗಳು ಭಾರತದ ಮುಂದಿನ ಪ್ರಜೆಗಳು ಶಿಕ್ಷಣದ ಮೂಲಕ ಸದೃಢವಾದ ದೇಶವನ್ನು ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.

ಜಿ.ಹೆಚ್.ಪಿ.ಎಸ್.ಚಿಕ್ಕನಾರವಂಗಲದ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಪದವಿ ಕಾಲೇಜುಗಳ ವ್ಯವಸ್ಥಾಪಕ ಶ್ರೀ ಗಂಗಣ್ಣನವರು, ಎಸ್.ಡಿ. ಎಂ.ಸಿ.ಅಧ್ಯಕ್ಷ ಚಿದಾನಂದಸ್ವಾಮಿ, ಶಾಲೆಯ ಮುಖ್ಯೋಪಾಧ್ಯಾಯರದ ಚಿದಂಬರಯ್ಯನವರು ಗ್ರಾಮ ಪಂಚಾಯತಿ ಸದಸ್ಯ ನಿರಂಜನ್ ಮೂರ್ತಿ, ಕಾರ್ಯದರ್ಶಿಗಳಾದ ಮೋಹನ್ ಕುಮಾರ್, ಎನ್.ಎಸ್.ಎಸ್.ನ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ಸೋಮಶೇಖರ್.ಎಲ್.ಆರ್. ಡಾ.ರಂಗನಾಥ್ ಬಿ. ಪ್ರೊ.ಪಲ್ಲವಿ ಪ್ರೊ.ಸುಧಾ.ಆರ್ ಉಪಸ್ಥಿತರಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?