ಮೈಸೂರು- ಬ್ರಹ್ಮಾಕುಮಾರಿಸ್ ಸಂಸ್ಥೆಯ ಆಡಳಿತ ಮುಖ್ಯಸ್ಥೆ ದಾದಿ ರತನ್ ಮೋಹಿನೀಜಿ ಅವರು ಇಂದು, 8 ಏಪ್ರಿಲ್ 2025 ರಂದು ಬೆಳಗ್ಗೆ 1:20 ಕ್ಕೆ ಅಹಮದಾಬಾದ್‌ನಲ್ಲಿ ತಮ್ಮ 101ನೇ ವಯಸ್ಸಿನಲ್ಲಿ ನಶ್ವರ ದೇಹವನ್ನು ತ್ಯಜಿಸಿದ್ದಾರೆ.
ಮಾರ್ಚ್ 25, 1925 ರಂದು ಹೈದರಾಬಾದ್, ಸಿಂಧ್‌ನಲ್ಲಿ ಜನಿಸಿದ ದಾದೀಜಿ ಅವರು ತಮ್ಮ ಕೋಮಲ ವಯಸ್ಸಿನಿಂದಲೇ ತಮ್ಮ ಜೀವನವನ್ನು ಆಧ್ಯಾತ್ಮಿಕ ಸೇವೆಗೆ ಸಮರ್ಪಿಸಿದರು. ಅವರ ಅಚಲ ಬದ್ಧತೆ ಮತ್ತು ಆಳವಾದ ಜ್ಞಾನವು ವಿಶ್ವದಾದ್ಯಂತ ಅಸಂಖ್ಯಾತ ಆತ್ಮಗಳಿಗೆ ಮಾರ್ಗದರ್ಶನ ನೀಡಿದೆ. ಆಡಳಿತ ಮುಖ್ಯಸ್ಥರಾಗಿ, ಅವರು ದೈವಿಕ ನಾಯಕತ್ವವನ್ನು ಮೂರ್ತಿಕರಿಸಿ, ಬ್ರಹ್ಮಾಕುಮಾರಿಸ್ ಸಂಸ್ಥೆಯನ್ನು ಶಾಂತಿ ಮತ್ತು ವಿನಮ್ರತೆಯಿಂದ ಮುನ್ನಡೆಸಿದರು.
ಶಾಂತಿ, ಪ್ರೀತಿ ಮತ್ತು ಜ್ಞಾನೋದಯದ ಅವರ ಪರಂಪರೆಯು ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.ಮೃತರಿಗೆ ಶಾಂತಿ ಸಿಗಲೆಂದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದೀಜಿ, ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮರವರು ಸೇರಿದಂತೆ ಅನೇಕ ಸ್ವಾಮೀಜಿಗಳು ರಾಜಕಾರಣಿಗಳು, ರಾಜಯೋಗ ಶಿಕ್ಷಕಿಯರು ರಾಜಯೋಗ ವಿದ್ಯಾರ್ಥಿಗಳು, ಮೖಸೂರು ಉಪವಿಭಾಗದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜೀ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಜಿಲ್ಲಾ ಸಂಚಾಲಕಿ ಪ್ರಭಾಮಣೀಜೀ ಪ್ರಾಂಶುಪಾಲರಾದ ರಾಜಯೋಗಿ ಬ್ರಹ್ಮಾಕುಮಾರ ರಂಗನಾಥ ಶಾಸ್ತ್ರೀಜೀ ಓಂಶಾಂತಿ ನ್ಯೂಸ್ ಸರ್ವಿಸ್ ನ ಬಿ. ಕೆ.ಆರಾಧ್ಯಸಂತಾಪ ಸೂಚಿಸಿದ್ದಾರೆ ಮೃತರ ಪಾರ್ಥೀವ ಶರೀರವನ್ನು ಮೌಂಟ್ ಅಬು ಪರ್ವತ ಶಾಂತಿ ವನದ ಕಾನ್ಫರೆನ್ಸ್ ಹಾಲ್ನಲ್ಲಿ ಇಡಲಾಗಿದೆ. 10 ರಂದು ಸಂಸ್ಕಾರ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ