ಚಿಕ್ಕಮಗಳೂರು-ಜಗತ್ತಿನಲ್ಲಿ-ಶಾಂತಿ-ನೆಲೆಸಲು-ಮಹಾವೀರರ- ಬೋಧನೆಗಳು-ಅತ್ಯವಶ್ಯಕ-ವಿಧಾನ-ಪರಿಷತ್-ಶಾಸಕ-ಸಿ.ಟಿ.ರವಿ

ಚಿಕ್ಕಮಗಳೂರು: ಜಗತ್ತಿಗೆ ಮಹಾವೀರರ ಬೋಧನೆಗಳು ಅಗತ್ಯವಾಗಿದ್ದು, ಆಗ ಮಾತ್ರ ಜಗತ್ತು ಯುದ್ಧದಿಂದ ಮುಕ್ತವಾಗಿ ಶಾಂತಿ ನೆಲೆಸುತ್ತದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಜಗತ್ತಿಗೆ ಜ್ಞಾನದ ಬೆಳಕು, ಸದ್ವಿಚಾರಗಳನ್ನು ಬೋಧಿಸಲೆಂದೇ ಮಹಾವೀರರ ಜನನವಾಗಿದ್ದು, ಅಹಿಂಸೆ ಧರ್ಮದ ಮೂಲ ತಿರುಳು ಎಂದು ಅವರು ಬೋಧಿಸಿದರು. ಕೈವಲ್ಯ ಜ್ಞಾನವನ್ನು ಗಳಿಸಿಕೊಂಡು ಅದನ್ನು ಸಮಾಜಕ್ಕೆ ಬೋಧಿಸಿ, ಸಮಾಜದಲ್ಲಿನ ಪ್ರತಿಯೊಂದು ಜೀವಿಯನ್ನೂ ಪ್ರೀತಿಸಬೇಕು ಎನ್ನುವ ಸಂದೇಶ ಸಾರಿದ ಮಹಾವೀರರು ಅಹಿಂಸೆಯನ್ನು ಬೋಧಿಸಿದರು. ಜಿನನಾಗುವುದು ಸಾಮಾನ್ಯ ಸಂಗತಿಯಲ್ಲ. ನೂರಾರು ಕೋಟಿಯಲ್ಲಿ ಒಬ್ಬರು ಜಿನರಾಗಲು ಸಾಧ್ಯ ಅಂತಹ ಮಹಾನ್ ತೀರ್ಥಂಕರ ಮಹಾವೀರರು. ಜಗತ್ತಿಗೆ ಭಾರತ ಕೊಟ್ಟಿರುವಷ್ಟು ಕೊಡುಗೆಯನ್ನು ಬೇರೆ ಯಾವ ದೇಶವೂ ನೀಡಿಲ್ಲ. ಅದಕ್ಕಾಗಿ ಭಾರತವನ್ನು ಕರ್ಮಭೂಮಿ, ಜ್ಞಾನಭೂಮಿ, ಧರ್ಮಭೂಮಿ ಎಂದು ಕರೆಯಲಾಗುತ್ತದೆ. ೨೪ನೇ ತೀರ್ಥಂಕರ ಮಹಾವೀರರು ಜನಿಸಿದ ಪುಣ್ಯಭೂಮಿ ಭಾರತ ಎಂದರು

ತಹಶಿಲ್ದಾರ್ ಗ್ರೇಡ್-2 ರಾಮ್ ರಾವ್ ದೇಸಾಯಿ ಕಾರ್ಯಕ್ರಮ ಅದ್ಯಕ್ಷತೆ ವಹಿಸಿ ಮಾತನಾಡಿ, ಅಹಿಂಸೆ, ಸತ್ಯ, ಧರ್ಮ, ಅಪರಿಗ್ರಹ ಮುಂತಾದ ಮಹಾವೀರರ ಬೋಧನೆಗಳೂ ಇಂದಿಗೂ ಪ್ರಸ್ತುತವಾಗಿದ್ದು, ಮಾನವರು ದುಃಖ, ಹಿಂಸೆಗೆ ಉತ್ತರ ಹುಡುಕಬೇಕಾದರೆ ಏನು ಮಾಡಬೇಕು ಎನ್ನುವ ಸಂದೇಶವನ್ನು ಸಾರಿದರು ಎಂದರು.

ಚಿಕ್ಕಮಗಳೂರು ಜಿಲ್ಲಾ ಜೈನ ಸಂಘದ ಅಧ್ಯಕ್ಷ ಕಾಂತಿಲಾಲ್ ಜೈನ್ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಮಹಾವೀರರ ಬೋಧನೆಗಳು ದಾರಿದೀಪವಾಗುತ್ತವೆ ಎಂದರು.


ಚಾರಿತ್ರ ಜೀನೇಂದ್ರ ಬಾಬು ಉಪನ್ಯಾಸ ನೀಡಿ ಮಹಾವೀರನ ಮೂಲ ಹೆಸರು ವರ್ಧಮಾನ. ಅವರು ಪ್ರಾಚೀನ ನಗರವಾದ ವೈಶಾಲಿಯ ಬಳಿಯ ಕುಂದಗ್ರಾಮ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಸಿದ್ಧಾರ್ಥ ಜ್ಞಾತ್ರಿಕರು ಎಂದು ಪ್ರಸಿದ್ಧರಾದ ಕ್ಷತ್ರಿಯ ಕುಲದ ಮುಖ್ಯಸ್ಥರಾಗಿದ್ದರು. ಮಹಾವೀರನ ತೀವ್ರ ತಪಸ್ಸಿನ ಜೀವನ ಮತ್ತು ಅಲೆಮಾರಿ ಸನ್ಯಾಸಿಯಾಗಿ ಬೆಳೆದರು. ಸತ್ಯದ ಹುಡುಕಾಟದಲ್ಲಿ ಅವರು ಹನ್ನೆರಡು ವರುಷಗಳ ಕಾಲ ಹೋರಾಡಿದರು. ಸ್ಥಳದಿಂದ ಸ್ಥಳಕ್ಕೆ ಚಲಿಸುವಾಗ ಅವರು ತಮ್ಮ ದೇಹವನ್ನು ಎಲ್ಲಾ ರೀತಿಯ ನೋವುಗಳಿಗೆ ಒಳಪಡಿಸಿಕೊಂಡರು. ಜೈನ ಪಠ್ಯದಲ್ಲಿನ ವಿವರಣೆಯ ಪ್ರಕಾರ: ಅವರು ಬೆತ್ತಲೆಯಾಗಿ ಮತ್ತು ನಿರಾಶ್ರಿತನಾಗಿ ಅಲೆದಾಡಿದನು. ಜನರು ಅವನನ್ನು ಹೊಡೆದು ಅಪಹಾಸ್ಯ ಮಾಡಿದರು. ಚಿಂತಿಸದೆ, ಅವನು ತನ್ನ ಧ್ಯಾನದಲ್ಲಿ ಮುಂದುವರೆದನು. ತನ್ನ ತಪಸ್ಸಿನ ಹದಿಮೂರನೇ ವ?ದಲ್ಲಿ, ಅವನಿಗೆ ಜ್ಞಾನೋದಯ ಅಥವಾ ಪರಮ ಜ್ಞಾನ ಅಥವಾ ಕೇವಲ ಜ್ಞಾನ ದೊರೆಯಿತು. ಅದರೊಂದಿಗೆ ಅವನು ಜೈನ ಅಥವಾ ವಿಜಯಶಾಲಿ, ಮಹಾವೀರ ಅಥವಾ ಮಹಾನ್ ವೀರ ಮತ್ತು ಕೇವಲಿನ್ ಅಥವಾ ಸರ್ವಜ್ಞನಾದನು. ಪರಮ ಜ್ಞಾನವನ್ನು ಪಡೆದ ನಂತರ ಮಹಾವೀರ ಮೂವತ್ತು ವರುಷಗಳ ಕಾಲ ತನ್ನ ನಂಬಿಕೆಯನ್ನು ಬೋಧಿಸಿದನು. ಅವನು ದೂರದೂರ ಪ್ರಯಾಣಿಸಿ ಮಿಥಿಲಾ, ಶ್ರಾವಸ್ತಿ, ಚಂಪಾ, ವೈಶಾಲಿ ಮತ್ತು ರಾಜಗೃಹದಂತಹ ಸ್ಥಳಗಳಿಗೆ ಭೇಟಿ ನೀಡಿದನು.

ಜೈನ ಧರ್ಮದಲ್ಲಿ, ಕರ್ಮ ಮತ್ತು ಪುನರ್ಜನ್ಮದ ಸಿದ್ಧಾಂತದಲ್ಲಿ ನಂಬಿಕೆ ಸಂಪೂರ್ಣವಾಗಿತ್ತು. ಮನುಷ್ಯ ಬದುಕಲು ಕೆಲಸ ಮಾಡಬೇಕು. ಆದ್ದರಿಂದ ಅವನ ಆತ್ಮವು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮಹಾವೀರನು ಕರ್ಮದ ಮೇಲೆ ಗರಿ? ಒತ್ತು ನೀಡಿದನು. ಅವನು ಅಸ್ತಿತ್ವದಲ್ಲಿರುವ ಎಲ್ಲಾ ವಸ್ತುಗಳನ್ನು ಜೀವಂತ ಮತ್ತು ನಿರ್ಜೀವ ಎಂದು ಎರಡು ವರ್ಗಗಳಾಗಿ ವಿಂಗಡಿಸಿದನು. ಎಲ್ಲಾ ಜೀವಿಗಳನ್ನು ಜೀವಗಳು ಎಂದು ವಿವರಿಸಲಾಗಿದೆ. ದೇಹದಲ್ಲಿರುವ ಪ್ರತಿಯೊಂದು ಜೀವವೂ ಆತ್ಮವಾಗಿತ್ತು.ಅಹಿಂಸೆ ಅಥವಾ ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಜೈನ ಧರ್ಮದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯಿತು. ಪ್ರತಿಯೊಂದು ಜೀವಿಯ ಜೀವನವನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು. ಸಣ್ಣ ಜೀವಿಗಳಲ್ಲಿ ಚಿಕ್ಕವು ಸಹ ಮನು?ರಂತೆ ಜೀವವನ್ನು ಹೊಂದಿದ್ದವು. ಆದ್ದರಿಂದ ಮನುಷ್ಯನು ಇತರ ಜೀವಿಗಳ ಜೀವನವನ್ನು ನಾಶಮಾಡುವುದು ಪರಮ ಪಾಪವಾಗಿತ್ತು.. ಜೈನ ಧರ್ಮದ ಪ್ರಕಾರ, ಪ್ರತಿಯೊಂದು ಜೀವಿಯ ಜೀವವನ್ನು ರಕ್ಷಿಸುವುದು ಮತ್ತು ಸಂರಕ್ಷಿಸುವುದು ಮನುಷ್ಯನ ಕರ್ತವ್ಯವಾಗಿತ್ತು. ಜೈನ ಧರ್ಮವು ಜೀವಿಗಳಿಗೆ ನೀಡಿದಷ್ಟು ಗೌರವವನ್ನು ಬೇರೆ ಯಾವುದೇ ಧರ್ಮ ನೀಡಿಲ್ಲ. ಎಲ್ಲಾ ರೀತಿಯ ಜೀವಗಳ ಬಗ್ಗೆ ದಯೆ ಜೈನ ಧರ್ಮದ ಪ್ರಮುಖ ಲಕ್ಷಣವಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಜೈನ್ ಸಂಘದ ಕಾರ್ಯದರ್ಶಿ ರಮೇಶ್ ಜೈನ್ , ದಿಗಂಬರ ಸಂಘದ ಅಧ್ಯಕ್ಷ ಶ್ರೀ ಜಿನೇಂದ್ರ ಬಾಬು, ತೌರಾಪಂಥ ಸಂಘದ ಅಧ್ಯಕ್ಷ ಶ್ರೀ ಮಹೇಂದ್ರ ಡೋಸಿ, ನಗರಸಭಾ ಸದಸ್ಯ ವಿಪ್ರಿಲ್ ಜೈನ್, ಹಾಗೂ ಜೈನ ಸಂಘದ ಮುಖಂಡರು  ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?