ಸರಗೂರು-ಕನ್ನಡ ಶಾಲೆಗಳಿಗೆ ರವಿಸಂತು ಬಳಗದಿಂದ ಸೇವೆ-ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕದ ಕಡೆ ಹೆಚ್ಚಿನ ಗಮನಹರಿಸಿ ಶ್ರದ್ಧೆಯಿಂದ ಓದಬೇಕು-ರವಿಸಂತು

ಸರಗೂರು:ಕನ್ನಡ ಶಾಲೆಗಳ ಸೇವೆ ಕನ್ನಡದ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ರವಿಸಂತು ಸ್ನೇಹ ಬಳಗದ ವತಿಯಿಂದ ತಾಲೂಕಿನ ಬಿ.ಮಟಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ನಿಘಂಟು,ನೀರಿನ ಬಾಟಲ್ ಹಾಗೂ ಕ್ರೀಡಾ ಪರಿಕರಗಳನ್ನು ನೀಡಲಾಯಿತು.

ರವಿಸಂತು ಸಹೋದರ ದಾನಿಗಳಾದ ದುಬೈನ ವಿಜಯ್ ಗುಚ್ಛ ಅವರ ಹೆಸರಿನಲ್ಲಿ ಶಾಲೆಗೆ ಜೆರಾಕ್ಸ್ ಮಿಷನ್ ನೀಡಿದರು.

ಆರ್ಯಭಟ ಪ್ರಶಸ್ತಿ ಪುರಸ್ಕೃತ ಬಳಗದ ಮುಖ್ಯಸ್ಥ ರವಿಸಂತು ಮಾತನಾಡಿ, ಕನ್ನಡ ಭಾಷೆ ಅಮೃತ ಭಾಷೆ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ಗಮನಹರಿಸಿ, ಹೆತ್ತವರು ಹಾಗೂ ಶಿಕ್ಷಕರು ಸೇರಿದಂತೆ ಗುರು ಹಿರಿಯರಿಗೆ ಕೀರ್ತಿ ತರಬೇಕು. ಹಾಗೂ ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕದ ಕಡೆ ಹೆಚ್ಚಿನ ಗಮನಹರಿಸಿ ಶ್ರದ್ಧೆಯಿಂದ ಓದಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಶಾಲೆಗಳ ಸೇವೆಗೆ ನಮ್ಮ ಬಳಗ ಮುಂದಾಗಿರುವುದರಿಂದ ಇಲ್ಲಿಯವರೆಗೂ 31 ಶಾಲೆಗಳ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಬುಕ್, ಪೆನ್, ಡೈರಿ, ನಿಘಂಟು ಸೇರಿದಂತೆ ಕ್ರೀಡಾ ಪರಿಕರಗಳನ್ನು ನೀಡಲಾಗುತ್ತಿದ್ದು, ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ, ಇಂಟರ್ನೆಟ್ ಸೌಲಭ್ಯ ನೀಡುವುದರೊಂದಿಗೆ ಶಾಲೆಯ ಶಿಕ್ಷಕರಿಗೆ ರೋಟರಿ ಹೆಸರಿನಲ್ಲಿ ರಾಜ್ಯಸೇವಾ ರತ್ನ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

——————————ಶಿವು ಕೋಟೆ

Leave a Reply

Your email address will not be published. Required fields are marked *

× How can I help you?