ಕೆ.ಆರ್.ಪೇಟೆ-ಮುರುಕನಹಳ್ಳಿ-ಸೊಸೈಟಿ-ನೂತನ-ಅಧ್ಯಕ್ಷರಾಗಿ- ಮುರುಕನಹಳ್ಳಿ-ರಮೇಶ್-ಹಾಗೂ-ಉಪಾಧ್ಯಕ್ಷರಾಗಿ-ಮೋದೂರು- ನಂಜಪ್ಪಚಾರಿ-ಆಯ್ಕೆ

ಕೆ.ಆರ್.ಪೇಟೆ: ತಾಲ್ಲೂಕಿನ ಶೀಳನೆರೆ ಹೋಬಳಿಯ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಮುರುಕನಹಳ್ಳಿ ರಮೇಶ್ ಹಾಗೂ ನೂತನ ಉಪಾಧ್ಯಕ್ಷರಾಗಿ ಮೋದೂರು ನಂಜಪ್ಪಚಾರಿ ಅವರು ಕ್ರಮವಾಗಿ ತಲ 7 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾದರು.

ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಮುರುಕನಹಳ್ಳಿ ರಮೇಶ್ ಹಾಗೂ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಮತದಾನದಲ್ಲಿ ಮುರುಕನಹಳ್ಳಿ ರಮೇಶ್ 7ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಗೋವಿಂದರಾಜು 6ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ನಂಜಪ್ಪಚಾರಿ ಹಾಗೂ ನಾಗಮ್ಮ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ನಂಜಪ್ಪಚಾರಿ 7ಮತಗಳನ್ನು ಪಡೆದು ಆಯ್ಕೆಯಾದರು‌. ನಾಗಮ್ಮ 6ಮತ ಪಡೆದು ಪರಾಭವಗೊಂಡರು.

ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಸಂಘದ ವ್ಯಾಪ್ತಿಯ ಎಲ್ಲಾ ಜೆಡಿಎಸ್- ಬಿಜೆಪಿ ಮುಖಂಡರು ಹಾಗೂ ಸಂಘದ ನಿರ್ದೇಶಕರು ಅಭಿಮಾನಿಗಳು ಅಭಿನಂದಿಸಿದರು.‌


ಬಳಿಕ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್ ನೂತನ ಅಧ್ಯಕ್ಷರು-ಉಪಾಧ್ಯರನ್ನು ಅಭನಂದಿಸಿ ಮಾತನಾಡಿ ಸಂಘದಲ್ಲಿ ಅಧ್ಯಕ್ಷರು-ಉಪಾಧ್ಯಕ್ಷರಿಗೆ, ನಿರ್ದೇಶಕರಿಗೆ ಅವರದೇ ಆದ ಜವಾಬ್ದಾರಿ ಇರುತ್ತದೆ. ಸೊಸೈಟಿ ವ್ಯಾಪ್ತಿಗೆ ಬರುವ ಎಲ್ಲಾ ರೈತರಿಗೆ, ಷೇರುದಾರರಿಗೆ ಸಮಯಕ್ಕೆ ಸರಿಯಾಗಿ ಸಾಲವನ್ನು ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು. ಸಾಲವನ್ನು ತೆಗೆದುಕೊಂಡ ಷೇರುದಾರರು ಸಕಾಲಕ್ಕೆ ಮರುಪಾವತಿ ಮಾಡುವಂತೆ ನಿರ್ದೇಶಕರು ರೈತರನ್ನು ಮನವೊಲಿಸುವ ಮೂಲಕ ಸಂಘದ ಶ್ರೇಯೋಭಿದ್ದಿಗೆ ಶ್ರಮಿಸುವಂತೆ ಮನವಿ ಮಾಡಿದ್ದಲ್ಲದೆ ರೈತರ ಹಿತವನ್ನು ಕಾಪಾಡಲು ನೂತನ ಆಡಳಿತ ಮಂಡಳಿ ಶ್ರಮಿಸುವಂತೆ ಸಲಹೆ ನೀಡಿದರು.

ಸಂಘದ ನೂತನ ಅಧ್ಯಕ್ಷ ಮುರುಕನಹಳ್ಳಿ ರಮೇಶ್ ಮಾತನಾಡಿ ನಾನು ಸಂಘದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು ಮತದಾನ ಮಾಡಿದ ಎಲ್ಲಾ ರ್ದೇಶಕರುಗಳಿಗೆ, ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಹಾಗೂ ಅವರ ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್ ಹಾಗೂ ನಮ್ಮ ಸಂಘದ ವ್ಯಾಪ್ತಿಗೆ ಬರುವ ಎಲ್ಲಾ ಮುಖಂಡರಿಗೆ ಅನಂತಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಲರಾಂ, ನಾಗಮ್ಮ, ಸರಸ್ವತಿ, ನಂಜುಂಡಪ್ಪ, ರಾಜು, ಲಲಿತಮ್ಮ, ಮುಖಂಡರಾದ ಶಾಸಕರ ಸಹೋದರ ಹೆಚ್.ಟಿ.ಲೋಕೇಶ್, ನಂಜುಂಡಪ್ಪ (ಪುಟ್ಟಸ್ವಾಮಪ್ಪ), ನಿವೃತ್ತ ಬಿ.ಸಿ.ಎಂ.ಇಲಾಖೆಯ ಅಧಿಕಾರಿ ಮುರುಕನಹಳ್ಳಿ ಟಿ.ನಿಂಗಪ್ಪ, ಗ್ರಾಮ ಪಂಚಾಯತಿ ಸದಸ್ಯ ಜಗದೀಶ್, ವಕೀಲರಾದ ಪ್ರಸನ್ನಕುಮಾರ್, ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ನಾಗರಾಜೇಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಅಗಸರಹಳ್ಳಿ ದೇವರಾಜು, ಭೈರಾಪುರ ಹರೀಶ್, ಹರೀಶ್, ಶಾಲಾ ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ರಮೇಶ್, ಮಾಜಿ ಅಧ್ಯಕ್ಷ ಪ್ರಕಾಶ್, ಶಿವಶಂಕರ್, ಹೊನ್ನೇನಹಳ್ಳಿ ಪರಮೇಶ್, ಹೊನ್ನೇಶ್, ರಾಮೇಗೌಡ, ಮಹದೇವ್, ಎಂ ಎನ್ಅ ಣ್ಣಯ್ಯ,ಕೃಷ್ಣೇಗೌಡ, ಜಯರಾಮ್, ಶಿವಸಾಗರ್, ರಮೇಶ್ ಹಾಗೂ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾಗೇಶ್, ಸಂಘದ ಸಿಇಓ(ಕಾರ್ಯದರ್ಶಿ) ಚೇತನ್, ಮತ್ತಿತರರು ಉಪಸ್ಥಿತರಿದ್ದರು.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?