ಕೊರಟಗೆರೆ– ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿಆಚರಣೆ ಮಾಡಲಾಯಿತ್ತು.
ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರವಾದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಸನ್ನೀಧಾನದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಯಿತ್ತು. ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ಸುಭಿಕ್ಷವಾಗಿ ಇಡು ಎಂದು ಭಕ್ತರು ಪೂಜೆ ಸಲ್ಲಿಸಿದರು. ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತ್ತು.
ಪಟ್ಟಣದ ಬೈಲಾಂಜನೇಯ ಸ್ವಾಮಿ, ಗುಂಡಾಂಜನೇಯ ಸ್ವಾಮಿತಾಲ್ಲೂಕಿನ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ, ಕುರಂಕೋಟೆ ಶ್ರೀಆಂಜನೇಯ ಸ್ವಾಮಿ ಸೇರಿದಂತೆ ಹಲವು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಧಾರ್ಮಿಕ ಪೂಜಾ ಕೈಕಾರ್ಯಗಳು ನಡೆದವು.
ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ರಾಮಾಚಾರ್ ಮಾತನಾಡಿ, ಕಮನೀಯಕ್ಷೇತ್ರ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯು ಧಾರ್ಮಿಕ ಆಚರಣೆಯೊಂದಿಗೆ ಅದ್ಧೂರಿಯಾಗಿ ನಡೆದಿದ್ದು, ಭಕ್ತರು ಎಂದಿನಂತೆ ಹೆಚ್ಚಿನ ಜನಸಂಂಖೈಯಲ್ಲಿ ಅಗಮಿಸಿ ಸ್ವಾಮಿದರ್ಶನ ಪಡೆದಿದ್ದಾರೆ, ಮುಂಗಾರು ರೈತರಿಗೆ ಹಿತಕರವಾಗಿರಲ್ಲಿ ಮಳೆ ಬೆಳೆ ಸುಭೀಕ್ಷವಾಗಿ ರೈತನ ಬದುಕು ಅಸನವಾಗಲ್ಲಿ, ಭಗವಂತ ಸರ್ವಜನತೆಗೂ ಸುಃಖ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಹಾರೈಸಿದರು.

ಆಂಜನೇಯಸ್ವಾಮಿ ಪರಮ ಭಕ್ತರಾದ ಮಹೇಶ್ ಮಾತನಾಡಿ, ನಾನು ಚಿಕ್ಕ ವಯಸ್ಸಿನಿಂದ ನಮ್ಮತಂದೆತಾಯಿ ನಂಬಿದ ಆಂಜನೇಯಸ್ವಾಮಿ ದೇವರನ್ನ ನಾವು ನಮ್ಮಕೈಯಲ್ಲಿ ಆದ ಸೇವೆಯನ್ನ ಮಾಡಿಕೊಂಡು ಬರುತ್ತಿದ್ದೇನೆ. ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯನ್ನ ನಂಬಿದವರನ್ನ ಯಾರನ್ನೂ ಕೈ ಬಿಟ್ಟಿಲ್ಲ, ನಾನು ನನ್ನಕುಟುಂಬ ಸ್ವಾಮಿಯ ಸೇವೆಗೆ ಸಿದ್ದರಾಗಿರುತ್ತೇವೆ ಎಂದು ತಿಳಿಸಿದರು.
ವರದಿ- ನರಸಿಂಹಯ್ಯ ಕೋಳಾಲ