ಚಿಕ್ಕಮಗಳೂರು– ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ನಗರದ ಐ.ಜಿ.ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಸಮೀಪ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮಧುಕುಮಾ ರ್, ಜಯರಾಮ್, ಸತೀಶ್, ಪರಮೇಶ್, ಸದಸ್ಯರಾದ ಸಿ.ಕುಮಾರ್, ಡಿ.ಮಂಜುನಾಥ್, ರಘು, ಸ್ವಾಮಿ, ಆಟೋ ಸತೀಶ್, ಕಾಂತರಾಜ್, ಮುರುಗೇಶ್, ಜಿ.ರಾಜು, ಗಂಗಾಧರ್, ಮಂಜುನಾಥ್, ನಗರ ಆಟೋ ಸಂಘದ ಕಾರ್ಯದರ್ಶಿ ಜಗದೀಶ್ ಮತ್ತಿತರರು ಹಾಜರಿದ್ದರು.
– ಸುರೇಶ್ ಎನ್.