ರಾಮನಾಥಪುರ– ಭಾರತದ ಸಂವಿಧಾನದ ಶಿಲ್ಪಿ ಬಿ.ಅರ್. ಅಂಬೇಡ್ಕರ್ ಅವರು ಸಮಾಜದ ಸುಧಾರಕರಾಗಿದ್ದು, ಒಂದು ಜಾತಿ ಜನಾಂಗ ಧರ್ಮಕ್ಕೆ ಸೀಮಿತವಾಗಿರಲಿಲ್ಲ ಎಂದು ಜೈ ಬೀಮ್ ಯುವಕರ ಸಂಘದ ಅಧ್ಯಕ್ಷರು ವೀರಭದ್ರ ತಿಳಿಸಿದರು.
ರಾಮನಾಥಪುರ ಹೋಬಳಿ ಮಲ್ಲಿನಾಥಪುರ ಗ್ರಾಮ ಜೈ ಭೀಮ್ ಯುವಕರ ಸಂಘದ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿ ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ತ್ವ ಮತ್ತು ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಅಗುತ್ತದೆ ಎಂದು ವೀರಭದ್ರ ತಿಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಿವಲಿಂಗ ಪಿಎಸ್ಐ ಪೊಲೀಸ ಇಲಾಖೆ ಮತ್ತು ಸ್ವಾಮಯ್ಯ ಶಿಕ್ಷಕರು ಶಿಕ್ಷಣ ಇಲಾಖೆ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಹಾಸನ ಕೆ.ಇ.ಎಸ್ ಅಧಿಕಾರಿ ಚನ್ನಕೇಶವ, ರಾಮನಾಥಪುರ ನಾಡಕಚೇರಿ ವಿ.ಎ. ಧರ್ಮೇಶ್, ಗ್ರಾಮದ ಯಜಮಾನ ದೊಡ್ಡಯ್ಯ ಸಣ್ಣಯ್ಯ ರಾಜಯ್ಯ ಈರಯ್ಯ ಗೋವಿಂದಯ್ಯ ಸಿದ್ದಲಿಂಗಯ್ಯ, ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷರು ಗಣೇಶ್ ಕಾರ್ಯದರ್ಶಿ ಶ್ರೀನಿವಾಸ್ ಹಾಗೂ ಸಹಕಾರಿದರ್ಶಿ ಚಂದ್ರು ಎಂ ಎಸ್ ಖಜಾಂಚಿ ಪ್ರದೀಪ್, ಗ್ರಾಮದ ಗ್ರಾಮಸ್ಥರು ಹಾಗೂ ಸಂಘದ ಸದಸ್ಯರುಗಳಾದ ದಿಲೀಪ್ ಶಿವಮೂರ್ತಿ ಸಂದೀಪ್ ಜಗದೀಶ್ ಮೋಹನ್ ಆಕಾಶ ಪ್ರೀತಮ್ ಪ್ರತಾಪ್ ಮಧು ಕುಮಾರ ಹಾಗೂ ಎಲ್ಲಾ ಸದಸ್ಯರುಗಳು ಸೇರಿ ಅದ್ದೂರಿಯಾಗಿ ಆಚರಿಸಲಾಯಿತು.
ಬೆಳ್ಳಿ ರಥದ ಮೂಲಕ ಡಾ. ಅಂಬೇಡ್ಕರ್ ಸಾಹೇಬರ ಭಾವಚಿತ್ರ ವಿಟ್ಟು ಮೆರವಣಿಗೆ ಮೂಲಕ ರಾಮನಾಥಪುರ ಹಾಗೂ ಮಲ್ಲಿನಾಥಪುರದ ಮುಖ್ಯರಸ್ತೆಗಳಲ್ಲಿ ಬರವಣಿಗೆ ಮೂಲಕ ಆಚರಿಸಲಾಯಿತು.
– ಶಶಿ ಕುಮಾರ್