ಮಂಡ್ಯ- ತಾಲೂಕು ಹೊಳಲು ಗ್ರಾಮದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಪರಿವರ್ತನಾ ಟ್ರಸ್ಟ್ ವತಿಯಿಂದ
ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಹೊಳಲು ಗ್ರಾಮದ ಬಲಮುರಿ ಗಣಪತಿ ದೇವಸ್ಥಾನದ ಆವರಣದಲ್ಲಿ ಪಟಾಕಿ ಸಿಡಿಸಿ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಜಯಶಂಕರ್ ಮಾತನಾಡುತ್ತಾ ಅಂಬೇಡ್ಕರ್ ಅವರು ವಿಶ್ವಕ್ಕೆ ಮಹಾ ನಾಯಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಬಾಳುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಟ್ಟಿಕುಮಾರ್, ನಿಂಗೇಗೌಡ, ಪಟೇಲ್ ರಾಮು, ಸುರೇಶ್, ಚಂದನ್, ಸಂತೋಷ್, ಹಾಗೂ ಪರಿವರ್ತನಾ ಟ್ರಸ್ಟ್ ನ ಪದಾಧಿಕಾರಿಗಳಾದ ಹೆಚ್. ಬಿ. ಕೃಷ್ಣ, ಹೆಚ್.ಬಿ.ಮೂರ್ತಿ, ಮಾಸ್ಟರ್ ಸಿದ್ದರಾಜ್, ಗಿರೀಶ್, ಮಂಜು, ಸೋಮಶೇಖರ್, ಪ್ರಕಾಶ್, ವೇದ, ಮೋಹನ್, ರಾಕೇಶ್, ಶರತ್, ಹಾಗೂ ಇತರರು ಉಪಸ್ಥಿತರಿದ್ದರು.
– ಕೆ.ಪಿ.ಕುಮಾರ್, ಹೊಳ