ಕೊರಟಗೆರೆ-ಸಮಾನತೆಯ-ಹರಿಕಾರ-ಡಾ.ಬಿ.ಆರ್.ಅಂಬೇಡ್ಕರ್ – ಪ್ರಾಂಶುಪಾಲ ರುದ್ರೇಶ್

ಕೊರಟಗೆರೆ :- ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳೇ ಡಾ.ಅಂಬೇಡ್ಕರ್ ರವರ ಮೂಲ ತತ್ವಗಳಾಗಿದ್ದವು ಹಿಂದುಳಿದ, ದಲಿತ. ಅಲ್ಪಸಂಖ್ಯಾತ ಹಾಗೂ ಬಡವರ ಅಭಿವೃಧ್ದಿ ಬಗ್ಗೆ ವಿಶೇಷವಾದ ಕಾನೂನಗಳನ್ನು ರಚಸಿ ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಏಕೈಕ ನಾಯಕ ಡಾ.ಅಂಬೆಡ್ಕರ್ ಎಂದು ಪ್ರಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ರುದ್ರೇಶ್ ತಿಳಿಸಿದರು.

    ಅವರು ಪಟ್ಟಣದ ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜಿನಲ್ಲಿ ಕೊರಟಗೆರೆ ತಾಲೂಕು ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ 134 ನೇ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿ ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಆರೋಗ್ಯಕರ ಸಮಾಜದ ಸೃಷ್ಟಿಗೆ ಸಹಕಾರ ವಾಗಲಿದೆ ಎಂದರು.

  ಬಿ ಆರ್ ಅಂಬೇಡ್ಕರ್ ಅವರು ಸಮಾಜಕ್ಕೆ ಮಾರಕವಾಗಿದ್ದ ಮನಃಸ್ಮೃತಿ ಗಂಥವನ್ನು ತಿರಸ್ಕರಿಸಿ ಎಲ್ಲಾ ಜನಾಂಗದವರಿಗೂ ಅನುಕೂಲವಾದ ಸಂವಿಧಾನವನ್ನು ರಚಿಸಿದರು, ಈ ಸಂವಿಧಾನವು ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ನೀಡಿದೆ, ಪ್ರತಿಯೊಬ್ಬ ಪ್ರಜೆಗೂ ಸಮಾನತೆಯನ್ನು ಹಂಚಿದ ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಎಂದು ತಿಳಿಸಿದ ಅವರು ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಕುರಿತು ಮಾತನಾಡಿದರು. 

ಸರ್ಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಲಕ್ಷ್ಮೀಪುತ್ರ ಮಾತನಾಡಿ ಡಾ.ಬಿ,ಆರ್.ಅಂಬೇಡ್ಕರ್ ಕಡು ಬಡತನದಲ್ಲಿ ನೋವಿನಿಂದಲೇ ಹುಟ್ಟಿ, ನೋವಿನಿಂದಲೇ ಬೆಳೆದು ನೋವಿನಿಂದಲೇ ಹೋರಟಗಳನ್ನು ಮಾಡಿ ಅಂತಿಮ ದಿನಗಳಲ್ಲಿಯೂ ನೋವಿನಿಂದಲೇ ಇಹಲೋಕವನ್ನು ತ್ಯಜಿಸಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಎಂದು ತಿಳಿಸಿದ ಅವರು ತಾನು ಅನುಭವಿಸಿದ ಕಷ್ಠಗಳನ್ನು ನನ್ನ ದೇಶದ ಯಾವ ಪ್ರಜೆಯೂ ಅನುಭವಿಸಬಾರದು ಎಂದು ಶಿಕ್ಷಣದ ಅತ್ಯುನ್ನತ ಪದವಿಗಳನ್ನು ಗಳಿಸಿ ವಿಶ್ವದ ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸುಭದ್ರವಾದ ಸಂವಿಧಾನವನ್ನು ರಚಿಸಿ ಕೊಟ್ಟ ಬಾಬಾ ಸಾಹೇಬರ ಅಸೆ ಈಡೇರ ಬೇಕೆಂದರೆ ವಿದ್ಯಾರ್ಥಿಗಳಾದ ತಾವು ಉತ್ತಮ ಶಿಕ್ಷಣವನ್ನು ಪಡೆದು ಈ ನಾಡಿಗೆ, ಸಮಾಜಕ್ಕೆ ಉತ್ತಮ ಕೊಡುಗೆಗಳಾಗಿ ಬೇಳೆಯಬೇಕು, ಬಾಬಾ ಸಾಹೇಬರ ತತ್ವಗಳನ್ನು, ಆದರ್ಶಗಳನ್ನು ಮೈಗೊಡಿಸಿಕೊಳ್ಳಬೇಕೆಂದು ಎಂದು ತಿಳಿಸಿದ ಅವರು ತನ್ನ ಜನರೇ ಶತ್ರುಗಳ ಜೋತೆ ಸೇರಿ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರು, ಹಾಗೆ ನಮಗೂ ನಿಮಗೂ ನಮ್ಮ ಜೀವನದಲ್ಲಿ ನಮ್ಮವರೇ ಕಾಲನ್ನು ಎಳೆಯಲು ಪ್ರಯತ್ನಿಸುತ್ತಾರೆ ಆದರೆ ನಾವು ಎಂದೂ ಅದಕ್ಕೆ ಕುಗ್ಗಬಾರದು ಸಾಧನೆ ಮಾಡಿ ಅವರಿಗೆ ತೋರಿಸಬೇಕು, ಜೀವನದಲ್ಲಿ ಬರುವ ಕಷ್ಟಗಳಿಗೆ ಹೆದರಬಾರದು, ಧೈರ್ಯದಿಂದ ಮುನ್ನಡೆಯಬೇಕು ಎಂದು ತಿಳಿಸಿದರು.

     ಸಮನ್ವಯ ಸಮಿತಿ ಕಾರ್ಯದರ್ಶಿ ಬಿ.ಕೆ.ಮಂಜುನಾಥ್ ಮಾತನಾಡಿ ಡಾ.ಬಿ,ಆರ್.ಅಂಬೇಡ್ಕರ್ ಅವರು ತಿಳಿಸಿದಂತೆ ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನಮ್ಮ ಸಮಸ್ಯೆಗಳನ್ನು ನಾವು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಬಾಬಾ ಸಾಹೇನ್ ಡಾ.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದರು.

       ವೇದಿಕೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕೆರ ಸಂಘದ ಅಧ್ಯಕ್ಷ ಕೋಟೆಕಲ್ಲಯ್ಯ, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಎನ್.ಎ.ಹನುಮಂತರಾಜು, ತಾಲೂಕು ಸಮಿತಿಯ ಪದಾಧಿಕಾರಿಗಳಾದ ಸತೀಶ್, ನವೀನ್, ಪುಟ್ಟರಾಜಯ್ಯ, ಉಪಾದ್ಯಕ್ಷರಾದ ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ಮಾರುತಿ ಪ್ರಸನ್ನ, ನಿದೇಶಕರಾದ ಚಿಕ್ಕಣ್ಣ, ಹನುಮಂತರಾಜು, ರವಿಕುಮಾರ್, ಕಾಂತರಾಜು ಸೇರಿದಂತೆ ಕಾಲೇಜಿನ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- ಶ್ರೀನಿವಾಸ್‌ , ಕೊರಟಗೆರೆ

Leave a Reply

Your email address will not be published. Required fields are marked *

× How can I help you?