ಚಿಕ್ಕಮಗಳೂರು-ಭಗವಂತನಲ್ಲ-ಪ್ರಾರ್ಥಿಸಿದರೆ-ಅನೋನ್ಯತೆ-ಜೀವನ- ಶ್ರೀ ಗುಣನಾಥಸ್ವಾಮಿ


ಚಿಕ್ಕಮಗಳೂರು:- ಸಾಂಸರಿಕ ಕಲಹ ಹಾಗೂ ಮಾನಸಿಕ ಖಿನ್ನತೆಯಿಂದ ಹೊರಬರಲು ಭಗವಂತನ ಸನ್ನಿಧಾನಕ್ಕೆ ತೆರಳಿ ಪ್ರಾರ್ಥಿಸಿದರೆ ಮನಸ್ಸು ಹಗುರವಾಗಿ ಅನೋನ್ಯತೆ ಜೀವನ ಲಭಿಸುತ್ತದೆ ಎಂ ದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ವಸ್ತಾರೆ ಹೋಬಳಿಯ ತೊಂಡವಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ದಾರ, ಪ್ರತಿಷ್ಟಾಪನೆ, ವಿಮಾನ ಗೋಪುರಾವಿಷ್ಕರಣ ಮತ್ತು ಮಹಾಕುಂಭಾಭಿಷೇಕ ಮಹೋತ್ಸವ ದಲ್ಲಿ ಪಾಲ್ಗೊಂಡು ನಂತರ ಸಾರ್ವಜನಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಬುಧವಾರ ಅವರು ಮಾತನಾಡಿದರು.

ಮಾನವ ಸಂಕುಲಕ್ಕೆ ಸೃಷ್ಟಿಕರ್ತನು ಸಕಲಸೌಲಭ್ಯಗಳನ್ನು ಪೂರೈಸಿದರೂ ಕೆಲವೊಂದು ಸಮಸ್ಯೆ, ಕೊರ ಗಿನಿಂದಲೇ ಬದುಕುತ್ತಿದ್ದಾನೆ. ಆದರೆ ಪ್ರಾಣಿ, ಪಕ್ಷಿಗಳಿಗೆ ದಿನನಿತ್ಯದ ಊಟಕ್ಕೂ ಸಮಸ್ಯೆಗಳಿದರೂ ನೆಮ್ಮದಿಯಾಗಿ ಜೀವಿಸುತ್ತಿವೆ. ಹೀಗಾಗಿ ಮನುಷ್ಯ ಆಸೆ-ಆಮಿಷಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡದೇ ಸಂತೋಷದಿಂದ ಬದುಕಬೇಕು ಎಂದರು.

ಅಯೋಧ್ಯ ಶ್ರೀರಾಮನ ಅಪ್ಪಟ ಭಕ್ತನಾದ ಶ್ರೀ ಆಂಜನೇಯನು ಎದೆಬಗೆದು ಭಕ್ತಿ ಪ್ರದರ್ಶಿಸಿದ ಕಾರಣ ನಾಡಿನಲ್ಲಿ ಹನುಮನ ಮಂದಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಂಡು ಪೂಜಿಸುವ ಸಂಸ್ಕೃತಿ ಬೆಳೆದಿದೆ. ಆ ನಿಟ್ಟಿನಲ್ಲಿ ಮನುಷ್ಯನು ಹನುಮನ ಭಕ್ತಿಯ ಸದ್ಗುಣಗಳನ್ನು ಅಳವಡಿಸಿಕೊಂಡಾಗ ಸಮಾಜದಲ್ಲಿ ಸ್ಥಾನಮಾನ ಸಿಗಲಿದೆ ಎಂದರು.

ಪರಮಾತ್ಮನ ಅತ್ಯಂತ ಪ್ರಿಯವಾದ ಭಕ್ತನೆಂದರೆ ದೇವಾಲಯದ ಅರ್ಚಕನಲ್ಲ, ಸ್ವಾಮಿಗಳಲ್ಲ. ದೇಶದ ಬೆನ್ನೆಲೇಬು ರೈತರು. ಯಾವುದೇ ಬೆಳೆ ಬೆಳೆಯಲು ಮೊದಲು ಭಗವಂತನ ಸನ್ನಿಧಾನಕ್ಕೆ ಅರ್ಪಿಸುವ ಸಂಸ್ಕೃತಿ ರೈತರಲ್ಲಿದೆ ಎಂದ ಅವರು ರೈತರು ವೈಯಕ್ತಿಕ ಜೊತೆಗೆ ಪಕ್ಷಿಗಳಿಗೂ ಒಂದಿಷ್ಟು ಧಾನ್ಯಗಳನ್ನು ಹಂಚುವ ಹೃದಯವೈಶಲ್ಯತೆ ಹೊಂದಿದ್ದಾರೆ ಎಂದರು.

ಭಕ್ತಿಗೆ ಪ್ರಾಮುಖ್ಯತೆ ಕೊಟ್ಟವನು ಶ್ರೀ ಆಂಜನೇಯನು. ಆ ಸನ್ಮಾರ್ಗದಲ್ಲಿ ಮಾನವರು ಸಾಗಿದರೆ ಸದ್ಬುದ್ಧಿ, ಆತ್ಮಬಲದಿಂದ ಬದುಕು ಯಶಸ್ಸಿನಿಂದ ಕೂಡಿರುತ್ತದೆ. ಹಾಗೆಯೇ ಶರೀರಕ್ಕೆ ಆಭರಣಗಳು ಶೋಭೆ ತರುವುದಿಲ್ಲ. ನಿಜವಾಗಿ ದಾನದ ರೂಪದಲ್ಲಿ ಕೈಗೊಳ್ಳುವ ಧರ್ಮಕಾರ್ಯಗಳೇ ಮನುಷ್ಯನಿಗೆ ಶೋಭೆ ಹೆಚ್ಚಿಸು ತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ವಯೋಸಹಜ ಪಾಲಕರನ್ನು ವೃದ್ದಾಶ್ರಮ ಅಥವಾ ರಸ್ತೆಗೆ ತಳ್ಳುವ ಸಂಸ್ಕೃತಿ ಹೆ ಚ್ಚಾಗಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರಸ್ತೆಗಟ್ಟುವ ಮಕ್ಕಳು ತಮ ಗೂ ವಯಸ್ಸಾಗಲಿದೆ ಎಂಬ ಸತ್ಯವನ್ನು ಅರಿಯಬೇಕು. ಮಾನವರಾಗಿ ಹುಟ್ಟಿದ ಮೇಲೆ ಮೊದಲ ಪೂಜೆ ತಂದೆ-ತಾಯAದಿರಿಗೆ ಸಲ್ಲಿಸುವ ಸಂಸ್ಕಾರ ಕಲಿಯಬೇಕು ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಪಂಚಭೂತಗಳನ್ನು ದೈವಸಂಭೂತಕ್ಕೆ ಹೋಲಿಸುತ್ತವೆ. ತಿಳುವಳಿಕೆ ಹೊಂ ದಿರುವ ಮಾನವ ವಿಚಾರವಂತರಾಗಬೇಕು. ಸರಿ, ತಪ್ಪುಗಳನ್ನು ಅರಿಯುವ ಸಾಮಾನ್ಯ ಜ್ಞಾನ ಹೊಂದಬೇಕು, ಶಕ್ತಿಮೀರಿ ಸದ್ವಿಚಾರಗಳನ್ನು ಮೆಲುಕು ಹಾಕುವ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ರೂಪುಗೊಂಡರೆ ಇಡೀ ಪ್ರಪಂಚವೇ ದೈವಮಂದಿರವಾಗುತ್ತದೆ ಎಂದರು.

ಸಾಹಿತಿ ಚಟ್ನನಹಳ್ಳಿ ಮಹೇಶ್ ಮಾತನಾಡಿ ಬದುಕಿನ ಶಿಸ್ತನ್ನು ತೋರುವುದು ನಿಜವಾದ ಭಕ್ತಿ. ಧರ್ಮ ಉಳಿಸುವಲ್ಲಿ ದೇವಾಲಯದ ಪಾತ್ರ ಪ್ರಮುಖವಾಗಿದ್ದು, ಅಂತರAಗ ಶುದ್ಧಿಗೆ ಭಗವಂತನು ಒಲಿಯುತ್ತಾನೆ. ಯಾವುದೇ ಅಕಾಡೆಮಿ ಅಥವಾ ಇನ್ಸಿಟ್ಯೂಟ್‌ಗಳಲ್ಲಿ ದೊರೆಯದ ಶಿಕ್ಷಣ ಧಾರ್ಮಿಕ ಸಭೆಗಳಲ್ಲಿ ಲಭಿಸಲಿದ್ದು ಈ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆತರಬೇಕು ಎಂದು ಸಲಹೆ ಮಾಡಿದರು.


ಭಗವಂತನಿಗೆ ಅರ್ಪಿಸುವ ಪೂಜಾಸಾಮಾಗ್ರಿಗಳು, ಹೊರಬಂದಾಕ್ಷಣ ಪ್ರಸಾದ, ಪವಿತ್ರ ತೀರ್ಥವಾಗಲಿದೆ. ಹಾಗೆಯೇ ಮಾನವರು ದೇವಾಲಯದಿಂದ ಹೊರಬಂದು ಮಹಾದೇವನಾಗಬೇಕು ಎಂದ ಅವರು ಎಳೆವಯಸ್ಸಿನಿಂದ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ನಿಯಮ ಅಡಕವಾಗಿಸಬೇಕು. ಅಜ್ಜ-ಅಜ್ಜಿಯರ ಜೊತೆ ಬೆರೆಸುವುದು ಮತ್ತು ಬಾಂಧವ್ಯದ ಪಾಠ ಕಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಕೆ.ನಾರಾಯಣಗೌಡ ಗ್ರಾಮಸ್ಥರು, ಸ್ನೇಹಿತರು ಹಾಗೂ ದಾನಿಗಳ ಸಂಪೂರ್ಣ ಸಹಕಾರದಿಂದ ಇಂದು ಜೀರ್ಣೋದ್ದಾರ ಕರ‍್ಯ ಸಂಪನ್ನಗೊಂಡಿದೆ. ಈ ಹಿಂದೆ ದೇವಾಲಯ ನಿರ್ಮಿಸುವುದು ದೊಡ್ಡಸವಾಲಾಗಿತ್ತು. ಆರ್ಥಿಕ ಶಕ್ತಿ ಹೆಚ್ಚು ಬೇಕಿತ್ತು. ಆದರೆ ಕಾಲಕ್ರಮೇಣ ಭಗವಂತನ ದಯೆಯಿಂದ ಎಲ್ಲವು ಸುಲಲಿತವಾಗಿ ಪೂರ್ಣಗೊಂಡು ಪ್ರತಿ ಷ್ಟಾಪನೆ ನೆರವೇರಿಸಲಾಗಿದೆ ಎಂದರು.

ಇದೇ ವೇಳೆ ದೇವಾಲಯದ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿ ಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮುಂಜಾನೆಯಿಂದಲೇ ಅರ್ಚಕ ರಂಗನಾಥ್ ಸಾರಥ್ಯದಲ್ಲಿ ವಿವಿಧ ಪೂಜಾವಿಧಿವಿಧಾನಗಳು, ಹೋಮ ಹವನದಿಗಳು ನೆರವೇರಿತು.

ಈ ಸಂದರ್ಭದಲ್ಲಿ ವಸ್ತಾರೆ ಗ್ರಾ.ಪಂ. ಸದಸ್ಯ ಟಿ.ಟಿ.ದೀಪಕ್, ಗ್ರಾಮದ ಹಿರಿಯ ತಮ್ಮಣ್ಣಗೌಡ, ಗ್ರಾಮಸ್ಥರಾದ ನಾಗರಾಜ್, ವೀರೇಗೌಡ, ರಮೇ ಶ್, ರಾಜು, ಮೋಹನ್, ನಿಂಗೇಗೌಡ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?