ಅರಕಲಗೂಡು-ತಾಲೂಕು-ದೊಡ್ಡಮಠದ-ಗದ್ದುಗೆಯಲ್ಲಿ-ನಡೆದ- ಪೂಜೆಯಲ್ಲಿ-ಶ್ರೀಗಳಿಂದ-ಆರ್ಶಿವಚನ

ಅರಕಲಗೂಡು – ದೇವಾಲಯ ಹಾಗೂ ಹಿರಿಯರ ಗದ್ದುಗೆಗಳು ನಮ್ಮ ಸಂಸ್ಕೃತಿ ಪರಂಪರೆ ಮತ್ತು ಇತಿಹಾಸದ ಮೇಲೆ ಬೆಳಕು ಚಲ್ಲುವ ಜೀವಂತ ಸ್ಮಾರಕಗಳು. ನಮ್ಮ ಮುಂದಿನ ತಲಮಾರಿಗೆ ನಮ್ಮ ಪರಂಪರೆಯ ಬಗ್ಗೆ ತಿಳಿಯಲು ಅವಶ್ಯಕವಾಗಿ ಬೇಕಾಗಿರುವ ದೇವಾಲಯ ಮತ್ತು ಗದ್ದುಗೆಗಳ ಸಂರಕ್ಷಣೆಯ ಹೊಣೆಯೂ ನಮ್ಮೆಲ್ಲರದ್ದಾಗಿದೆ ಎಂದು ಬಸವನಬಾಗೆವಾಡಿ ಕರಿಬಂಟನಾಳ ಮಠದ ಶ್ರೀ ಶಿವಕುಮಾರಸ್ವಾಮೀಜಿ ಹೇಳಿದರು.

ಅರಕಲಗೂಡು ಪಟ್ಟಣದಲ್ಲಿರುವ ಶ್ರೀ ದೊಡ್ಡಮಠ ಹಾಗೂ ಬೆಂಗಳೂರು ಹೃದಯ ಭಾಗದಲ್ಲಿರುವ ಸರ್ಪಭೂಷಣ ಮಠದ ಮಠಾಧ್ಯಕ್ಷರು ಶ್ರೀ ಮಲ್ಲಿಕಾರ್ಜುನಮಹಾಸ್ವಾಮೀಜಿಯವರ 63 ನೇ ಜನ್ಮ ದಿನ ಹಾಗೂ ಗದ್ದುಗೆಯ 2 ನೇ ದಿವಸದ ವಿಶೇಷ ಪೂಜಾ ಪ್ರಯುಕ್ತ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾ ಸಭಾದ ವತಿಯಿಂದ ಶ್ರೀಗಳವರನ್ನು ಗೌರವಿಸಿ, ಶ್ರೀಗಳಿಂದ ಅರ್ಶಿವಾದ ಪಡೆದ ನಂತರ ಅರ್ಶಿವಚನ ನೀಡಿದ ಅವರು ಭಗವಂತನು ಶ್ರೀಗಳಿಗೆ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡಲು ಉತ್ಸವವನ್ನು ಕರುಣಿಸಲಿ ಎಂದು ಶುಭಾಶಯಗಳೊಂದಿಗೆ ನಾವು ಪ್ರಾರ್ಥಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ದೊಡ್ಡಮಠದ ಶ್ರೀ ಮಲ್ಲಿಕಾರ್ಜುನಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಹಾಸನ ಜಿಲ್ಲಾ ವೀರಶೈವ- ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ, ರವಿಕುಮಾರ್, ಜಿಲ್ಲಾ ನಿರ್ಧಶಕರು ಯೋಗೇಶ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರು ಲೋಕೇಶ್, ಯುವ ಘಟಕದ ಅಧ್ಯಕ್ಷರು ಚಂದ್ರಶೇಖರ್, ಹರೀಶ್, ಯೋಗೇಶಗೌಡ, ವಕೀಲರು ವೇದಮೂರ್ತಿ, ಮಹೇಶ್, ಲೋಕೇಶ್ ಮುಂತಾದವರು ಇದ್ದರು.

  • ಶಶಿಕುಮಾರ

Leave a Reply

Your email address will not be published. Required fields are marked *

× How can I help you?