ಕೆ.ಆರ್.ಪೇಟೆ: ಪುರಸಭಾ ವ್ಯಾಪ್ತಿಗೆ ಬರುವ ಎಲ್ಲಾ 23ವಾರ್ಡುಗಳನ್ನು ಸಮಾಜವಾಗಿ ಪರಿಗಣಿಸಲಾಗುವುದು. ಅವಶ್ಯಕತೆ ಇರುವ ವಾರ್ಡುಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿವಿಧ ವಾರ್ಡುಗಳಲ್ಲಿನ ರಸ್ತೆಗಳನ್ನು ಹಂತ, ಹಂತವಾಗಿ ಅಭಿವದ್ಧಿ ಪಡಿಸಲಾಗುವುದು ಎಂದು ಶಾಸಕ ಹೆಚ್.ಟಿ ಮಂಜು ಭರವಸೆ ನೀಡಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯ 8, 14, 16ನೇ ವಾರ್ಡುಗಳಲ್ಲಿ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿಗೆ ಸೇರದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ನಗರೋತ್ತಾನ ಯೋಜನೆಯಡಿಯಲ್ಲಿ 1.8 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಆಡಳಿತ ಗ್ಯಾರಂಟಿ ಯೋಜನೆಗಳಿಗೆ ಜೋತು ಬಿದ್ದಿದೆ ಆದರೂ ನನ್ನ ಕ್ಷೇತ್ರದ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡಿ ಅಗತ್ಯ ಅನುದಾನ ಬಿಡುಗಡೆ ಮಾಡಿಸುತ್ತಿದ್ದೇನೆ ಕ್ಷೇತ್ರದ ವ್ಯಾಪ್ತಿಯ ಪಟ್ಟಣ ಹಾಗೂ ಎಲ್ಲ ಗ್ರಾಮೀಣ ಪ್ರದೇಶಗಳ ಅಭಿವದ್ಧಿಗೆ ಶ್ರಮಿಸುತ್ತೇನೆ. ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆರದಾರ ಗುಣಮಟ್ಟದ ಕಾಮಗಾರಿಗೆ ಹೆಚ್ಚು ಒತ್ತು ನೀಡಿಡಬೇಕು. ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಕಾಮಗಾರಿಯನ್ನು ಗಮನಹರಿಸಬೇಕು ಎಂದು ಎಚ್ಚರಿಸಿದರು.

ಪುರಸಭಾ ಹಿರಿಯ ಸದಸ್ಯ ಕೆ.ಸಿ ಮಂಜುನಾಥ್ ಮಾತನಾಡಿ, ನನ್ನ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿ ಆಗುತ್ತಿದೆ ನನಗೆ ಸಂತೋಷ ಆದರೆ ಈ ವಾರ್ಡಿನ ಜನರಿಂದ ಚುನಾಯಿತ ಪ್ರತಿನಿಧಿಯಗಿದ್ದೇನೆ ನಮಗೆ ಮಾಹಿತಿ ಇಲ್ಲ ಎಂದು ಬೇಸರ ಹೊರ ಹಾಕಿದ ಹಿನ್ನೆಲೆಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶಾಸಕರಾದ ಹೆಚ್.ಟಿ ಮಂಜು ನಾನು ಕೂಡ ತಾಲೂಕಿನ ಜನತೆಯ ಆಶೀರ್ವಾದದಿಂದ ಒಂದು ಜವಾಬ್ದಾರಿ ಸ್ಥಾನದಲ್ಲಿದ್ದೇನೆ ಇದು ತುರ್ತು ಗುದ್ದಲಿ ಪೂಜೆ ಕಾರ್ಯಕ್ರಮವಲ್ಲ ಒಂದು ವಾರದ ಹಿಂದೆಯೇ ಕಾರ್ಯಕ್ರಮ ನಿಗದಿಪಡಿಸಿ ಪುರಸಭಾ ಮುಖ್ಯ ಅಧಿಕಾರಿಗೆ ಖುದ್ದು ನಾನೇ ಕರೆ ಮಾಡಿ ಆ ವ್ಯಾಪ್ತಿಯ ಪುರಸಭಾ ಸದಸ್ಯರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದೇನೆ ಆದರೆ ಆ ಬೇಜವಾಬ್ದಾರಿ ಪುರಸಭಾ ಅಧಿಕಾರಿ ಲೋಪದಿಂದ ನಿಮಗೆ ಮಾಹಿತಿ ತಿಳಿಸಿಲ್ಲವೇನು ಗೊತ್ತಿಲ್ಲ ಆದರೆ ನಾನು ಯಾವುದೇ ಕಾರಣಕ್ಕೂ ಒಬ್ಬ ಜನಪ್ರತಿನಿಧಿಗೆ ಅಗೌರವ ಮಾಡುವ ಮನಸ್ಥಿತಿ ನನಗಿಲ್ಲ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ತಾಲೂಕಿನ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಪಂಕಜಾ ಪ್ರಕಾಶ್,ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್,ಸದಸ್ಯರಾದ ಕೆ.ಸಿ ಮಂಜುನಾಥ್,ಇಂದ್ರಣಿ ವಿಶ್ವನಾಥ್,ಮಾಜಿ ಸದಸ್ಯ ಹೇಮಂತ್ ಕುಮಾರ್,ಮನ್ಮುಲ್ ಮಾಜಿ ನಿರ್ದೇಶಕ ನಂಜುಂಡೇಗೌಡ, ತಾ.ಪಂ ಮಾಜಿ ಸದಸ್ಯ ಜಯರಂಗಣ್ಣ, ಪುರಸಭಾ ಸಹಾಯಕ ಇಂಜಿನಿಯರ್ ಬಸವೇಗೌಡ,ನಾಗೇಶ್,ಯುವ ಮುಖಂಡರಾದ ಸಚಿನ್, ಗಜ ರವಿ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸೇರಿದಂತೆ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.