ತುಮಕೂರು : ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಏಪ್ರಿಲ್ 26 ರಂದು ಬೀರಲಿಂಗೇಶ್ವರ ದೇವಸ್ಥಾನ ಆವರಣ, ಹೈಸ್ಕೂಲ್ ಫೀಲ್ಡ್ ಬಳಿ, ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಕುರಿತು ಪೂರ್ವ ಭಾವಿ ಸಭೆಯನ್ನು ತುಮಕೂರು ನಗರದ ಜನಚಳುವಳಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು ಕ.ಸಾ.ಪ. ಮಾಜಿ ಅಧ್ಯಕ್ಷರಾದ ಬಾ.ಹಾ.ರಮಾಕುಮಾರಿ ಮಾತನಾಡಿ, ತುಮಕೂರು ನಗರ ಮತ್ತು ಜಿಲ್ಲೆಯಲ್ಲಿ ಹಲವಾರು ಸಂಘಟನೆಗಳು ಸಕ್ರೀಯವಾಗಿರುವುದಲ್ಲದೇ ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಕೆಲಸ ಮಾಡುತ್ತಿರುವುದು ಸಂತೋಷಕರ ಸಂಗತಿ ಜೊತೆಗೆ ಈ ಒಂದು ಸಮಾವೇಶಕ್ಕೆ ನಮ್ಮ ಜಿಲ್ಲೆಯಿಂದ ಎಲ್ಲಾ ಪ್ರಗತಿಪರ ಚಿಂತಕರು, ಸಾಹಿತಿಗಳು, ಲೇಖಕರು ಪಾಲ್ಗೊಳ್ಳುವುದು ಅವಶ್ಯಕವಾಗಿದೆ, ಆ ಕುರಿತು ರೂಪುರೇಷಗಳನ್ನು ಸಿದ್ಧಪಡಿಸುವುದರ ಸುದ್ದೇಶದಿಂದ ಇಂದು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಈ ಒಂದು ಸಮಾವೇಶವನ್ನು ನಾವು ಎಲ್ಲರೂ ಸೇರಿ ಯಶಸ್ವಿಗೊಳಿಸಲು ಮುಖಂಡರು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ಮುಖಂಡ ಇಂದಿರಮ್ಮನವರು ಮಾತನಾಡುತ್ತಾ ದಾವಣಗೆರೆಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆಗಳ ಮುಖಂಡರು ಮಾತ್ರವಷ್ಠೇ ಪಾಲ್ಗೊಳ್ಳದೇ ನಮ್ಮೊಟ್ಟಿಗೆ ಹಲಾವರು ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿರುತ್ತದೆ, ಏಕೆಂದರೆ ಸಂವಿಧಾನದ ಬಗ್ಗೆ ಮಹತ್ವ ಹಾಗೂ ಅದರ ಅರಿವು ಎಲ್ಲರಿಗೂ ಪ್ರಸ್ತುತದ ದಿನಗಳಲ್ಲಿ ತಿಳಿಯಬೇಕಾಗಿರುತ್ತದೆ, ಆದುದರಿಂದ ಈ ಒಂದು ಮಹತ್ವಪೂರ್ಣ ಸಮಾವೇಶಕ್ಕೆ ಎಲ್ಲರ ಪಾಲ್ಗೊಳುವಿಕೆ ಮಹತ್ತರದಾಗಿದೆಂದು ತಿಳಿಸಿದರು.
ಹಿರಿಯ ಮುಖಂಡರಾದ ರಾಮಕೃಷ್ಣಪ್ಪರವರು ಸಭೆಯನ್ನುದ್ದೇಶಿಸಿ ಮಾತನಾಡಿ, ನಾವುಗಳೆಲ್ಲರೂ ದಾವಣಗೆರೆಯಲ್ಲಿ ನಡೆಯುತ್ತಿರುವ ಈ ಸಮಾವೇಶಕ್ಕೆ ಏಕೆ ಪಾಲ್ಗೊಳ್ಳಬೇಕು ಎಂದರೇ, ಪ್ರಸ್ತುತದ ದಿನಗಳಲ್ಲಿ ಸಂವಿಧಾನದ ಸಂರಕ್ಷಣೆ ಅತ್ಯಗತ್ಯವಾಗಿದೆ ಏಕೆಂದರೆ ಇಂದಿನ ಪೀಳಿಗೆಯವರಿಗೆ ಸಂವಿಧಾನ ಎಂದರೇನು, ಸಂವಿಧಾನದ ಮಹತ್ವವೇನು, ಸಂವಿಧಾನದ ರಕ್ಷಣೆ ಹೇಗೆ ಮಾಡಬೇಕು ಎಂಬುದು ಪ್ರತಿಯೊಬ್ಬ ನಾಗರೀಕರಿಗೂ ಅರಿವಾಗಬೇಕಾಗಿದೆ, ಆ ಒಂದು ಕೆಲಸವು ಅಲ್ಲಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆ, ಚಳುವಳಿ ಮಾಡಲು ಹೊರಟರೇ ಅವರುಗಳನ್ನು ಸಮಾಜ ನೋಡುವ ದೃಷ್ಠಿಯೇ ಬೇರೆಯಾಗಿರುತ್ತದೆ, ನಮ್ಮ ದೇಶಕ್ಕೆ ಸ್ವಾತಂತ್ರö್ಯ ಲಭಿಸಿರುವುದೇ ಬಹು ದೊಡ್ಡ ಚಳುವಳಿ, ಸಂಗ್ರಾಮದಿಂದ ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಯಬೇಕಿದೆ, ಪ್ರತಿಯೊಬ್ಬ ಭಾರತೀಯರಿಗೆ ಸಕಲ ರೀತಿಯಲ್ಲೂ ಸ್ವಾತಂತ್ರ್ಯ ಲಭಿಸಿದೆ ಎಂದರೇ ಅದು ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನದಿಂದ ಎಂದು ಎಲ್ಲರೂ ಅರಿಯಬೇಕಾಗಿದೆ, ಈ ಒಂದು ಮಹತ್ಕಾರ್ಯ ಅಂದು ದಾವಣಗೆರೆಯಲ್ಲಿ ನಡೆಯಲಿದೆ, ಅದಕ್ಕಾಗಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಮಹತ್ತರವಾಗಿದೆ ಎಂದು ತಿಳಿಸಿದರು.

ಹಿರಿಯ ಹೋರಾಟಗಾರರಾದ ಕೆ.ದೊರೈರಾಜು ಅವರು ಮಾತನಾಡಿ ಪ್ರತಿಯೊಬ್ಬರನ್ನೂ ಸಂಘಟಿಸುವ ಕೆಲಸ ಇಂದಿನ ದಿನದಲ್ಲಿ ಆಗಬೇಕಿದೆ, ಏಕೆಂದರೆ ಹಲಾವರು ಜನರಲ್ಲಿ ಸಂವಿಧಾನದ ಸಂರಕ್ಷಣೆಯ ಕುರಿತು ಹಲವಾರು ಸಂಶಯಗಳು ಇರುತ್ತವೆ, ಅವುಗಳಿಗೆ ಉತ್ತರ ಸಿಗಬೇಕು ಎಂದರೇ ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶ ಅದಕ್ಕೆ ಸಾಕ್ಷಿಯಾಗಲಿದೆ, ಆದುದರಿಂದ ಎಲ್ಲಾ ಸಾರ್ವಜನಿಕರು ಈ ಒಂದು ಸಭೆಯಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸುವುದರೊಂದಿಗೆ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ನಡೆಯಬೇಕಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ಮುಖಂಡರಾದ ತಾಜುದ್ದೀನ್ ಷರೀಫ್ ಅವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಒಳಗೊಂಡAತೆ ಹಲವಾರು ಜನರಿಗೆ ಸಂವಿಧಾನದ ರಕ್ಷಣೆಯ ಬಗ್ಗೆ ಅರಿವೇ ಇಲ್ಲದಂತೆ ಮಾತನಾಡುತ್ತಿದ್ದಾರೆ, ಅದಕ್ಕೆ ತಾಜಾ ಉದಾಹರಣೆ ಇತ್ತೀಚಿನ ದಿನಗಳಲ್ಲಿ ಹಲವಾರು ರಾಜಕಾರಣಿಗಳು ಸಂವಿಧಾನ ಬದಲಾಯಿಸಬೇಕು, ಸಂವಿಧಾನ ಕಿತ್ತಾಹಕಬೇಕು ಸೇರಿದಂತೆ ಇನ್ನಿತರೆ ಅಸಂಬದ್ಧ ಮಾತುಗಳನ್ನಾಡುತ್ತಾ ಸಂವಿಧಾನದ ಗೌರವವನ್ನು ಕಳೆಯಲು ನೋಡುತ್ತಿದ್ದಾರೆ, ಅದಕ್ಕಾಗಿ ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಿಸುವುದರ ಸದುದೇಶವೇ ಈ ಒಂದು ಸಮಾವೇಶವಾಗಿರುತ್ತದೆ ಎಂದರೇ ತಪ್ಪಾಗಲಾರದು, ಆದ ಪ್ರಯುಕ್ತ ಪ್ರತಿಯೊಬ್ಬರು ಈ ಒಂದು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂಬುದು ನನ್ನ ವೈಯುಕ್ತಿಕ ಮನವಿ ಆಗಿರುತ್ತದೆ ಮನವಿ ಮಾಡಿದರು.
ಈ ಸಭೆಯಲ್ಲಿ ಸ್ಥಳೀಯ ಮುಖಂಡರುಗಳಾದ ಕೆ.ದೊರೈರಾಜು, ಮಲ್ಲಿಕಾ ಬಸವರಾಜು, ಅಡಿಗಾಸ್, ಬಾ.ಹಾ.ರಮಾಕುಮಾರಿ, ಇಂದಿರಮ್ಮ, ಮುಜೀಬ್, ತಾಜುದ್ದೀನ್ ಷರೀಫ್, ಸುಬ್ರಹ್ಮಣ್ಯ, ರಾಮಕೃಷ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.