ಕೊರಟಗೆರೆ-ಮಕ್ಕಳಿಗೆ-ಬಾಲ್ಯದಿಂದಲೇ-ಸಂಸ್ಕಾರ-ಕಳಿಸಿದರೆ-ಉತ್ತಮ-ಸಮಾಜ-ನಿರ್ಮಾಣ-ಸಾಧ್ಯ-ಹನುಮಂತನಾಥ-ಸ್ವಾಮೀಜಿ

ಕೊರಟಗೆರೆ: ಸಂಸ್ಕಾರಕ್ಕೆ ಯಾವುದೇ ಜಾತಿ ಮತ ಭೇದವಿಲ್ಲ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಶಿಕ್ಷಣವನ್ನು ಕಲಿಸಿದರೆ ಉತ್ತಮ ಸಮಾಜ ರೂಪಗೊಳ್ಳುತ್ತದೆ ಎಂದು. ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಎಲೆರಾಂಪುರ ನರಸಿಂಹಗಿರಿ ಕ್ಷೇತ್ರ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ ನಾಲ್ಕನೇ ವರ್ಷದ ಸಂಸ್ಕಾರ ಶಿಬಿರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಕ್ಕಳಲ್ಲಿ ಆಧುನಿಕತೆಯ ವೈಭವದ ಜೀವನದಲ್ಲಿ ಅವರ ಮನಸ್ಥಿತಿ ಕಲುಷಿತವಾಗುತ್ತದೆ. ಬದಲಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಮಕ್ಕಳ ಮನಸ್ಸನ್ನು ಒಳ್ಳೆಯ ಕಡೆಗೆ ಕರೆದೆಯ್ಯುವ ದೃಷ್ಟಿಯಿಂದ ಇಂತಹ ಸಂಸ್ಕಾರ ಶಿಬಿರಗಳನ್ನು ಶ್ರೀ ಮಠದಲ್ಲಿ ಪ್ರಾರಂಭಿಸಲಾಗಿದೆ. ಮಕ್ಕಳು ಕಠಿಣ ಪರಿಸ್ಥಿತಿಯನ್ನು ಜೀವನದಲ್ಲಿ ಎದುರಿಸಲು ಅವರ ಮನಸ್ಸು ಸದೃಢ ಆಗಬೇಕು ಈ ಸಂಸ್ಕಾರ ಶಿಬಿರದಲ್ಲಿ ಜಾತಿ. ಮತ. ಉಳ್ಳವರು. ಬಡವರು. ಎನ್ನುವ ಭೇದವಿಲ್ಲ ಎಲ್ಲರೂ ಸಮಾನ ವಿದ್ಯಾರ್ಥಿಗಳು ಈ ಹತ್ತು ದಿನಗಳ ಕಾಲ ಸಂಸ್ಕಾರ ಶಿಬಿರದಲ್ಲಿ ನಡೆಯುವ ಎಲ್ಲಾ ಪ್ರವಚನ ತರಬೇತಿ. ಆಟ. ಊಟ. ವಸತಿ. ಬಟ್ಟೆ. ಪುಸ್ತಕ. ಅಭ್ಯಾಸಗಳ ಸಂಪೂರ್ಣ ಜವಾಬ್ದಾರಿ ವೆಚ್ಚವನ್ನು ಶ್ರೀ ಮಠವು ವಹಿಸುತ್ತದೆ. ಎಂದು ನೂರಾರು ಮಕ್ಕಳು ಈ ಶಿಬಿರದ ಉಪಯೋಗ ಪಡೆದುಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು. ಕುಲಸಚಿವರಾದ ನಹೀದಾ ಜಂ ಜಂ ಮಾತನಾಡಿ: ಸಂಸ್ಕಾರ ಶಿಬಿರ ಜೀವನದಲ್ಲಿ ಮೌಲ್ಯಗಳ ಪಾಠವನ್ನು ಕಲಿಸುತ್ತದೆ. ಮಕ್ಕಳ ಬುದ್ಧಿಯನ್ನು ಶುದ್ಧ ಮಾಡುತ್ತದೆ ಮಕ್ಕಳಿಗೆ ಗುಣಮಾತ್ಮಕ ಶಿಕ್ಷಣ ನೀಡಬೇಕು. ಇತ್ತೀಚಿಗೆ ಮಕ್ಕಳು ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಕಡಿಮೆಯಾಗುತ್ತಿದ್ದು. ಅವರನ್ನು ವೃದ್ದಾಶ್ರಮಕ್ಕೆ ತಳ್ಳುವುದು ಇಲ್ಲ ಅನಾಥರಾಗಿ ಬಿಡುವುದು ಎಂದು ಸಮಾಜದಲ್ಲಿ ಹೆಚ್ಚುತ್ತಿದ್ದು. ಮಕ್ಕಳಲ್ಲಿ ಸಂಸ್ಕಾರದ ಮನಸ್ಸು ಮೂಡಿಸಿದರೆ ಅವರು ದೊಡ್ಡವರಾಗಿ ಸಂಸ್ಕಾರ ವಂತವರಾದಾಗ ವೃದ್ಧೆ ತಂದೆ ತಾಯಿಗಳನ್ನು ನೋಡಿಕೊಳ್ಳುತ್ತಾರೆ. ತಂದೆ-ತಾಯಿಗಳ ಬೆಲೆ ಮೌಲ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಎಂದು ಮಕ್ಕಳಿಗೆ ಕತೆ ಹೇಳುವ ಮೂಲಕ ತಿಳಿಸಿದರು.



ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಾಲೂಕು ದಂಡಾಧಿಕಾರಿ ಮಂಜುನಾಥ್ ನವೀನ್ ದೇವರಾಜಯ್ಯ ಐಶ್ವರ್ಯ ಸುರೇಶ್ ಗೌಡ ರಾಮಲಿಂಗ ಶೆಟ್ಟಿ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ ತಾಲೂಕು ಹಿಂದುಳಿದ ಕಲ್ಯಾಣ ಅಧಿಕಾರಿ ಅನಂತರಾಜು. ಡಾ: ನಂಜುಂಡಯ್ಯ. ಡಿ. ರಾಜಣ್ಣ. ಶಿವರುದ್ರಪ್ಪ ತುಮಲ್ ನಿರ್ದೇಶಕ ವಿ. ಸಿದ್ದಗಂಗಯ್ಯ ಹಲವರು ಹಾಜರಿದ್ದರು.

– ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?